ಔಷಧಿಗಳ ಅಗತ್ಯವಿಲ್ಲದೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಿ..! ಇಲ್ಲಿವೆ ಸಲಹೆಗಳು
Exercise for high Blood pressure : ನಮ್ಮಲ್ಲಿ ಹೆಚ್ಚಿನವರು ಅನುಭವಿಸುವ ಮುಖ್ಯ ಸಮಸ್ಯೆ ರಕ್ತದೊತ್ತಡ. ಅಧಿಕ ರಕ್ತದೊತ್ತಡವು ವಿವಿಧ ಆರೋಗ್ಯ ಸಮಸ್ಯೆಗಳ ಜೊತೆಗೆ ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಈ ಅಧಿಕ ಬಿಪಿಯನ್ನು ಕಡಿಮೆ ಮಾಡಲು ಮಾತ್ರೆಗಳೇ ಪರಿಹಾರವೇ ಎಂಬುದು ಹಲವರಲ್ಲಿರುವ ಪ್ರಶ್ನೆ. ಬನ್ನಿ, ಯಾವುದೇ ಔಷಧಿಗಳಿಲ್ಲದೆ.. ಈ ರಕ್ತದೊತ್ತಡವನ್ನು ಅತ್ಯಂತ ಆರೋಗ್ಯಕರ ರೀತಿಯಲ್ಲಿ ಹೇಗೆ ನಿಯಂತ್ರಿಸುವುದು ಎಂದು ತಿಳಿಯೋಣ?
High BP remedies : ಹೃದಯವು ರಕ್ತವನ್ನು ಪಂಪ್ ಮಾಡುವ ವೇಗವನ್ನು ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ನಮ್ಮ ದೇಹ ಕ್ರಿಯಾಶೀಲವಾಗಿರಬೇಕು, ಅಂಗಾಂಗಗಳು ಸರಿಯಾಗಿ ಕೆಲಸ ಮಾಡಬೇಕು, ರಕ್ತ ನಮ್ಮ ದೇಹದಲ್ಲಿ ಸರಿಯಾದ ವೇಗದಲ್ಲಿ ಚಲಿಸುತ್ತಿರಬೇಕು. ಇದರಲ್ಲಿನ ಯಾವುದೇ ಏರುಪೇರು ದೇಹದ ಮೇಲೆ ಮಾತ್ರವಲ್ಲದೆ ನಮ್ಮ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಇದನ್ನು ಕಡಿಮೆ ಮಾಡಲು ಅನೇಕರು ಮಾತ್ರೆಗಳನ್ನು ಬಳಸುತ್ತಾರೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಇದು ನಿಯಂತ್ರಣವಲ್ಲ.
ನಮ್ಮ ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಗಳು ಮತ್ತು ಆಹಾರ ಪದ್ದತಿ ಬಗ್ಗೆ ಗಮನ ಹರಿಸುವುದರಿಂದ ಇಂತಹ ಅನೇಕ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಔಷಧಿಯ ಅಗತ್ಯವಿಲ್ಲದೇ ಕೆಲವು ವ್ಯಾಯಾಮಗಳಿಂದ ಅಧಿಕ ಬಿಪಿಯನ್ನು ಸುಲಭವಾಗಿ ನಿಯಂತ್ರಿಸಬಹುದು. ಈ ವ್ಯಾಯಾಂಗಳನ್ನು ನಾವು ಎಲ್ಲಿ ಬೇಕಾದರೂ ಮಾಡಬಹುದು. ಬನ್ನಿ ಆ ವ್ಯಾಯಾಮಗಳು ಯಾವುವು ಎಂದು ತಿಳಿಯೋಣ..
ಇದನ್ನೂ ಓದಿ: ಏನಿದು ಅರೋಮಾಥೆರಪಿ..? ಇದು ಮಾನಸಿಕ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ..?
ಏರೋಬಿಕ್ಸ್ : ಏರೋಬಿಕ್ಸ್ ಮಾಡುವುದರಿಂದ ನೀವು ಬಲಶಾಲಿಯಾಗುತ್ತೀರಿ ಹಾಗೂ ಆರೋಗ್ಯವಂತರಾಗುತ್ತೀರಿ. ನಿತ್ಯವೂ ಕಾರ್ಡಿಯೋ ವ್ಯಾಯಾಮ ಮಾಡುವವರಿಗೆ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ನಡೆಯುತ್ತದೆ. ಅಲ್ಲದೆ ಏರೋಬಿಕ್ಸ್ ಮಾಡುವವರಿಗೆ ಅಧಿಕ ತೂಕ, ಬೆನ್ನು ನೋವು, ಕುತ್ತಿಗೆ ನೋವು ಮುಂತಾದ ಸಮಸ್ಯೆಗಳು ಕಡಿಮೆ. ವಾರದಲ್ಲಿ ಕನಿಷ್ಠ ನಾಲ್ಕು ಬಾರಿ 30 ನಿಮಿಷಗಳ ಕಾಲ ಏರೋಬಿಕ್ಸ್ ಅನ್ನು ನಿಮ್ಮ ಜೀವನಶೈಲಿಯ ಭಾಗವಾಗಿಸಿಕೊಳ್ಳುವುದು ಉತ್ತಮ.
ಈಜು : ನಮ್ಮನ್ನು ಫಿಟ್ ಆಗಿ ಇರಿಸುವ ಮತ್ತೊಂದು ಅದ್ಭುತ ವ್ಯಾಯಾಮವೆಂದರೆ ಈಜು. ಉಳಿದ ವ್ಯಾಯಾಮಗಳು ದೇಹವನ್ನು ದಣಿದಂತೆ ಮಾಡುತ್ತದೆ ಆದರೆ ಈಜು ದೇಹಕ್ಕೆ ಚೈತನ್ಯವನ್ನು ನೀಡುತ್ತದೆ, ಮನಸ್ಸನ್ನು ಉತ್ತೇಜಿಸುತ್ತದೆ. ನಾವು ನೀರಿನ ಮೇಲೆ ಆರಾಮವಾಗಿ ತೇಲುತ್ತಿದ್ದರೆ ನಮ್ಮ ಮನಸ್ಸಿನ ಒತ್ತಡವೂ ದೂರವಾಗುತ್ತದೆ. ನಿತ್ಯ ಈಜು ಮಾಡುವವರಿಗೆ ಅಧಿಕ ರಕ್ತದೊತ್ತಡ, ಕೀಲು ನೋವು, ಕೆಟ್ಟ ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳು ಕಾಡುವುದಿಲ್ಲ. ಇದಲ್ಲದೆ, ಅವರ ಚರ್ಮ ಕಾಂತಿಯುತವಾಗಿರುತ್ತದೆ.
ಇದನ್ನೂ ಓದಿ: ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವುದು ಅಪಾಯಕಾರಿಯೇ?
ವಾಕಿಂಗ್ : ನಡಿಗೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ವ್ಯಾಯಾಮ. ವಾಕಿಂಗ್ ಒಂದು ಸುಲಭವಾದ ವ್ಯಾಯಾಮವಾಗಿದ್ದು, ಎಲ್ಲಿಯಾದರೂ, ಯಾವಾಗ ಬೇಕಾದರೂ ಜಿಮ್‌ಗೆ ಹೋಗದೆ, ಗಂಟೆಗಟ್ಟಲೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಾವು ಫೋನ್‌ನಲ್ಲಿ ಮಾತನಾಡುವಾಗ ಅಥವಾ ಚಾಟ್ ಮಾಡುವಾಗ ನಡೆಯುತ್ತಿದ್ದೆವು ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ಕೇಂದ್ರಿಕೇತವಾಗಿ ನಡೆಯಬೇಕು.
ಪ್ರತಿದಿನ 15 ರಿಂದ 20 ನಿಮಿಷಗಳ ವೇಗದ ನಡಿಗೆಯನ್ನು ಮಾಡಬೇಕು. ನಿಮ್ಮ ದೇಹವು ನಿಮ್ಮ ನಡಿಗೆಯನ್ನು ಎಷ್ಟು ಬಲವಾಗಿ ಬೆಂಬಲಿಸುತ್ತದೆ ಎಂಬುದರ ಆಧಾರದ ಮೇಲೆ ನಿಮ್ಮ ನಡಿಗೆಯ ವೇಗವನ್ನು ಹೆಚ್ಚಿಸಿಕೊಳ್ಳಿ. ನಡೆಯುವಾಗ ಉಸಿರಾಟದ ಮೇಲೆ ಕೇಂದ್ರೀಕರಿಸಬೇಕು. ದಿನಕ್ಕೆ ಕನಿಷ್ಠ 25 ರಿಂದ 30 ನಿಮಿಷಗಳ ಕಾಲ ವಾಕಿಂಗ್ ಮಾಡುವವರು, ರಕ್ತದೊತ್ತಡ ಮತ್ತು ಅಧಿಕ ತೂಕದ ಸಮಸ್ಯೆಯಿಂದ ದೂರವಿರುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.