Honey Real Or Fake: ಆಯುರ್ವೇದದಲ್ಲಿ ಜೇನುತುಪ್ಪದ ಪ್ರಯೋಜನಗಳನ್ನು (benefits of honey) ತಿಳಿಸಲಾಗಿದೆ. ಜೇನುತುಪ್ಪ ಸಾವಿರಾರು ವರ್ಷಗಳಿಂದ ಭಾರತೀಯ ಆಹಾರ ಪದ್ದತಿಯ ಒಂದು ಭಾಗವಾಗಿದೆ. ಜೇನುತುಪ್ಪದ ರುಚಿ ಎಂದರೆ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುತ್ತದೆ.  ಇತ್ತೀಚಿನ ದಿನಗಳಲ್ಲಿ ಜೇನುತುಪ್ಪವನ್ನು ಮಾರುಕಟ್ಟೆಯಿಂದ ಮಾತ್ರ ಖರೀದಿಸಬೇಕಾಗುತ್ತದೆ. ಈ ರೀತಿ ಪ್ರತಿ ಬಾರಿ ಮಾರುಕಟ್ಟೆಯಿಂದ ಜೇನು ಖರೀದಿಸುವಾಗಲು ಅದರ ಶುದ್ದತೆಯ (purity of honey) ಬಗ್ಗೆ ಸಣ್ಣದೊಂದು ಸಂದೇಹ ಮೂಡಿಯೇ ಮೂಡುತ್ತದೆ. ಹಾಗಿದ್ದಾರೆ ಅಸಲಿ ಜೇನು ತುಪ್ಪವನ್ನು ಕಂಡು ಹಿಡಿಯುವುದು ಹೇಗೆ ?


COMMERCIAL BREAK
SCROLL TO CONTINUE READING

ಜೇನುತುಪ್ಪ ಸೇವನೆಯಿಂದ ಆರೋಗ್ಯಕ್ಕೆ (benefits of honey) ಬಹಳಷ್ಟು ಪ್ರಯೋಜನವಿದೆ. ಹಾಗಂತ ಕಲಬೆರಕೆ ಜೇನು ಸೇವಿಸಿಯು ಪ್ರಯೋಜನವಿಲ್ಲ. ಹಾಗಿದ್ದರೆ ಅಸಲಿ ಜೇನು ತುಪ್ಪವನ್ನು ಗುರುತಿಸುವುದು ಹೇಗೆ ತಿಳಿಯಿರಿ.   


ಇದನ್ನೂ ಓದಿ  : Benefits of Cloves : ಪುರುಷರ ಆರೋಗ್ಯಕ್ಕಾಗಿ 2 ಲವಂಗ : ಈ ಸಮಯದಲ್ಲಿ ಸೇವಿಸಿ ಪಡೆಯಿರಿ ಅದ್ಭುತ ಪ್ರಯೋಜನಗಳು!


ಇಂದು ನಾವು ತಿಳಿಸುವ ಕ್ರಮದಿಂದ ಜೇನು ತುಪ್ಪ ಅಸಲಿಯೋ ನಕಲಿಯೋ ಎಂದು ಸುಲಭವಾಗಿ ಕಂಡು ಹಿಡಿಯಬಹುದು. 


1. ಈ ವಿಧಾನವನ್ನು ಬಹಳ ಹಿಂದಿನಿಂದಲೂ ಜನರು ಶುದ್ಧ ಜೇನುತುಪ್ಪವನ್ನು (honey) ಕಂಡು ಹಿಡಿಯಲು ಬಳಸುತ್ತಿದ್ದಾರೆ. ಒಂದು ಗಾಜಿನ ಲೋಟದಲ್ಲಿ ಬಿಸಿನೀರನ್ನು (hot water) ತೆಗೆದುಕೊಳ್ಳಿ.  ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಜೇನುತುಪ್ಪವು ನೀರಿನಲ್ಲಿ ತಕ್ಷಣ ಕರಗಿದರೆ, ಅದು ಕಲಬೆರಕೆ ಎಂದರ್ಥ. ಜೇನು ದಪ್ಪವಾದ ಎಳೆಯನ್ನು  ಮಾಡಿ ಕೆಳಭಾಗದಲ್ಲಿ ಸೇರಿಕೊಂಡರೆ ಅದು ಶುದ್ಧ ಜೇನುತುಪ್ಪ.  


2. ಮೇಣದಬತ್ತಿಯನ್ನು ಹಚ್ಚಿ. ಒಂದು ಮರದ ಕಡ್ಡಿಗೆ ಹತ್ತಿಯನ್ನು ಸುತ್ತಿ ಅದರ ಮೇಲೆ ಜೇನುತುಪ್ಪವನ್ನು ಸುರಿಯಿರಿ. ಈಗ ಜೀನು ತುಪ್ಪ ಹಚ್ಚಿದ ಕಡ್ಡಿಯನ್ನು ಬೆಂಕಿಯ ಸಮೀಪ ತನ್ನಿ. ಜೇನುತುಪ್ಪವನ್ನು ಹಚ್ಚಿದ ಕಡ್ಡಿ ತಕ್ಷಣ ಬೆಂಕಿ ಹೊತ್ತಿಕೊಂಡರೆ ಅದು ಶುದ್ದ ಜೇನು. ಬೆಂಕಿಹೊತ್ತಿಕೊಳ್ಳ ಲು ಸಮಿ ತೆಗೆದುಕೊಂಡರೆ ಅರ್ಥ ಮಾಡಿ ಕೊಳ್ಳಿ ಅದು ಕಲಬೆರಕೆ ಎಂದು.  


ಇದನ್ನೂ ಓದಿ  : Thyroid Early 8 Symptoms: ನಾವು ನಿರ್ಲಕ್ಷಿಸುವ ಈ ಸಮಸ್ಯೆಗಳು ಥೈರಾಯ್ಡ್‌ನ ಆರಂಭಿಕ ಲಕ್ಷಣಗಳಾಗಿರಬಹುದು


3.ಒಂದು ಟಿಶ್ಯೂ ಪೇಪರ್ (tissue paper) ತೆಗೆದುಕೊಳ್ಳಿ. ಅದರ ಮೇಲೆ ಒಂದು ಹನಿ ಜೇನುತುಪ್ಪವನ್ನು ಹಾಕಿ. ಶುದ್ಧ ಜೇನುತುಪ್ಪವು ಕಾಗದದ ಮೇಲೆ ಹಾಗೇಉಳಿಯುತ್ತದೆ.


4. ಶುದ್ಧ ಜೇನು ದಪ್ಪವಾಗಿರುತ್ತದೆ. ಹೆಬ್ಬೆರಳು ಮತ್ತು ಬೆರಳಿನ ನಡುವೆ ಅದರ ಒಂದು ಹನಿ ಇರಿಸಿ. ಎಳೆಗಳನ್ನು ಮಾಡಲು ಪ್ರಯತ್ನಿಸಿ. ನಿಜವಾದ ಜೇನುತುಪ್ಪದಲ್ಲಿ ದಪ್ಪ ಎಳೆಗಳು ರೂಪುಗೊಳ್ಳುತ್ತವೆ.


5. ಬೆರಳಿಗೆ ಜೇನುತುಪ್ಪವನ್ನು ಹಚ್ಚಿಕೊಳ್ಳಿ. ನಿಜವಾದ ಜೇನು ಬೆರಳ ತುದಿಯಲ್ಲೇ ಉಳಿಯುತ್ತದೆ. ಮತ್ತು ನಕಲಿ ಜೇನುತುಪ್ಪವು ತಕ್ಷಣ ಹರಡಲು ಪ್ರಾರಂಭಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.