ಮಕ್ಕಳಿಗೆ ಆತ್ಮ ವಿಶ್ವಾಸ ಬಹಳ ಮುಖ್ಯ ಅದು ಹೇಗೆ ಸಾದ್ಯ ಎಂಬುದು ಪೋಷಕರ ಚಿಂತೆ. ಮುಖ್ಯವಾಗಿ ಮಕ್ಕಳಿಗೆ ಬೇಕಾಗಿರುವುದು ಸಂಸ್ಕಾರ, ಸಂಸ್ಕೃತಿ, ಕಷ್ಟ, ದುಡ್ಡಿನ ಕೊರತೆ, ಶಿಸ್ತು, ಎಲ್ಲವನ್ನು ಕಲಿಸಬೇಕು. ಇದರಲ್ಲಿ ಮುಖ್ಯವಾಗಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದನ್ನು ನಾವು ಕಲಿಸಬೇಕಾಗುತದೆ. ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲವು ಅಂಶಗಳು ಇಲ್ಲಿವೆ ನೋಡಿ 


COMMERCIAL BREAK
SCROLL TO CONTINUE READING

ಪಾಸಿಟಿವ್‌ ಮಾತುಗಳನ್ನೇ ಆಡಿ 
ಮಕ್ಕಳ ಎದುರು ಎಂದಿಗೂ ನೆಗೆಟಿವ್‌ ಮಾತುಗಳನ್ನು ಆಡದಿರಿ ಏಕೆಂದರೆ ಅವು ಮಕ್ಕಳ ಮೇಲೆ ಋನಾತ್ಮಕ ಪರಿಣಾಮವನ್ನು ಬೀರಬಹುದು. ಮಕ್ಕಳಿಗೆ ಅತೀಯಾಗಿ ಬಿಗಿ ಅಂದರೆ ಹೆದರಿಸುವುದನ್ನು ಕಡಿಮೆ ಮಾಡಬೇಕು. ಪರೀಕ್ಷಾ ಸಮಯದಲ್ಲಿ ಪದೇ ಪದೇ ಓದು ಎಂದು ಹಿಂಸಿಸುವುದು, ಓದದಿದ್ದರೆ ಫೇಲಾಗುತ್ತಿಯಾ ಎಂದು ಭಯಪಡಿಸುವುದು. ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಮಕ್ಕಳನ್ನು ವೇದಿಕೆ ಮೇಲೆ ಕಳುಹಿಸಬೇಕು. ಕತ್ತಲೆಯಲ್ಲಿ ನಡೆದಾಡುವುದನ್ನು ಕಲಿಸಬೇಕು. ನಿರ್ಭಂದಗಳನ್ನು ಹೇರಬಾರದು.


ಇದನ್ನೂ ಓದಿ-ಅಪ್ಪಿತಪ್ಪಿಯೂ ಮನೆಯ ಹತ್ತಿರ ಈ ಗಿಡಗಳನ್ನು ನೆಡಬೇಡಿ : ದರಿದ್ರ, ಕೌಟುಂಬಿಕ ಜಗಳ ಕಟ್ಟಿಟ್ಟ ಬುತ್ತಿ


ಮಕ್ಕಳನ್ನು ಮುದ್ದು ಮಾಡುವುದಕ್ಕೆ ಮಿತಿ ಇರಲಿ
ಮಕ್ಕಳು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುವುದು ತುಂಬಾ ಕೆಟ್ಟದ್ದು. ಅಂದರೆ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುವುದನ್ನು ಬಿಡಬೇಕು. ಏಕೆಂದರೆ ಭವಿಷ್ಯದಲ್ಲಿ ಅದೇ ಅಭ್ಯಾಸವಾಗಿಬಿಡುತ್ತದೆ. ಪ್ರತಿ ಬಾರಿ ಕೇಳಿದ್ದನ್ನು ಕೊಡಿಸಿ ಒಂದು ಬಾರಿ ಇಲ್ಲವೆಂದರೆ ಡಿಸ್ಟರ್ಬ್‌ ಆಗುತ್ತಾರೆ. ನಾವು ಬೇಡ ಎನ್ನುವುದು ಅವರಿಗೆ ಗೊತ್ತಿರಬೇಕು ಇದರಿಂದ ಮಕ್ಕಳು ತಾಳ್ಮೆಯನ್ನು ಕಲಿಯುತ್ತಾರೆ.


ಮಕ್ಕಳ ಆಯ್ಕೆಗೂ ಅವಕಾಶ ನೀಡಿ
ಬೆಳಿಗ್ಗೆ ಅಮ್ಮ ಮಾಡಿದ ತಿಂಡಿ ಬಗ್ಗೆ ಮಕ್ಕಳು ಕಿರಿಕಿರಿ ಮಾಡುವುದುಂಟು. ಇದು ಬೇಡ ಅದು ಬೇಕು ಎನ್ನವುದು ಮಕ್ಕಳ ಸಾಮಾನ್ಯ ಸ್ವಭಾವ. ಅವರಿಗೆ ಬೇಕಾದ ತಿಂಡಿಯನ್ನು ಮಾಡಿಕೊಡಿ ಇಷ್ಟಪಟ್ಟು ತಿನ್ನುತ್ತಾರೆ. 


ಇದನ್ನೂ ಓದಿ-Astro Tips: ಈ ರಾಶಿಯ ಜನರು ಕೊನೆ ಉಸಿರು ಇರುವವರೆಗೂ ದ್ವೇಷ ಹೊಂದಿರುತ್ತಾರೆ!


ಅವರ ಚಿಕ್ಕ ಪುಟ್ಟ ಜಗಳಗಳನ್ನು ಅವರೆ ಬಗೆ ಹರಿಸಿಕೊಳ್ಳಲಿ
ಶಾಲೆಯಲ್ಲಿ ಮಕ್ಕಳು ತಮ್ಮ ಸ್ನೇಹಿತರೋಂದಿಗೆ ಜಗಳವಾಡುತ್ತಾರೆ. ಅಮ್ಮನ ಮುಂದೆ ಬಂದು ಹೇಳುತ್ತಾರೆ. ಆಗ ಒಳ್ಳೆಯ ಮಾತುಗಳನ್ನಾಡುವುದು ಉತ್ತಮ. ನಿಮ್ಮ ಸ್ನೇಹವನ್ನು ನೀವೆ ಸರಿ ಮಾಡಿಕೊಳ್ಳಿ ಎಂದು ಬುದ್ದಿಬವಾದದ ಮಾತುಗಳನ್ನು ಹೇಳಿ. ಇದರಿಂದಲೇ ಅವರಿಗೆ ಮುಂದಿನ ದಿನಗಳಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವುದನ್ನು ಕಲಿಯುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.