Weight loss in Hypothyroidism:  ಇತ್ತೀಚೆನ ದಿನಗಳಲ್ಲಿ ಥೈರಾಯ್ಡ್ ಹಾರ್ಮೋನ್‌ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿದೆ. ಈ ಥೈರಾಯ್ಡ್‌ ಹಾರ್ಮೋನ್‌ ಚಯಾಪಚಯ ಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸಲು,  ದೇಹದ ಇತರ ಅಂಗಾಂಗಗಳು ಕಾರ್ಯ ನಿರ್ವಹಿಸಿಲು ಅತ್ಯಂತ ಉಪಯುಕ್ತ. 


COMMERCIAL BREAK
SCROLL TO CONTINUE READING

ಈ ಥೈರಾಯ್ಡ್‌ ಹಾರ್ಮೋನ್‌ ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟೇ ಹಾನಿ ಸಹ. ಹೌದು ಈ ಹಾರ್ಮೋನ್‌ ನಿಗದಿತ ಪ್ರಮಾಣಗಿಂತ ಕಡಿಮೆ ಉತ್ಪತ್ತಿಯಾದರೆ ಹೈಪೋಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಜೊತೆಯಾಗಿ ಇನ್ನೊಂದು ಸಮಸ್ಯೆ ಉಧ್ಭವವಾಗುತ್ತದೆ. ಅದೇ ತೂಕ ಹೆಚ್ಚಾಗುವುದು. 


ಹಾಗಾದರೇ ಹೈಪೋಥೈರಾಯ್ಡ್ ಸಮಸ್ಯೆ ಇರುವವರು ತೂಕ ಕಡಿಮೆ ಮಾಡುವುದು ಹೇಗೆ ಅಂತೀರಾ...ಏನು ಬೇಡ ಈ ಟಿಪ್ಸ್‌ ಫಾಲೋ ಮಾಡಿ..


ನಿಮ್ಮ ದೇಹಕ್ಕೆ ಯಾವುದು ಸೂಕ್ತವೋ ಅದನ್ನೇ ಮಾಡಿ
ಬೇರೆ ಯಾರದೋ ಸಲಹೆಗಳಂತೆ ನಡೆದುಕೊಳ್ಳುವುದನ್ನು ಕಡಿಮೆ ಮಾಡಬೇಕು. ಹೌದು ಏಕೆಂದರೆ ಬೇರೆಯವರ ದೇಹಕ್ಕೆ ವರ್ಕ್‌ ಆಗಿರುವುದು ನಿಮಗೂ ವರ್ಕ್‌ ಆಗುತ್ತೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಹೀಗಾಗಿ ನಿಮ್ಮ ದೇಹಕ್ಕೆ ಯಾವುದು ಸೂಕ್ತವೋ ಅದನ್ನೇ ಮಾಡಿ. 


ಪೋಷಕಾಂಶವಿರುವ ಆಹಾರ ಸೇವಿಸಿ 
ಈ ಹಾರ್ಮೋನ್‌ ಸಮಸ್ಯೆ ಇರುವವರು ಹೆಚ್ಚು ಪೋಷಕಾಂಶವಿರುವ ಆಹಾರವನ್ನು ಸೇವಿಸಬೇಕು. ಆದಷ್ಟೂ ಈ ಕರಿದ ತಿಂಡಿಗಳು ಹಾಗೂ ಸಕ್ಕರೆ ಅಂಶವಿರುವ ಆಹಾರಗಳನ್ನು ಮಿತವಾಗಿಡಬೇಕು. ಜೊತೆಗೆ ಹೆಚ್ಚು ಕ್ಯಾಲೋರಿ ಇರುವ ಆಹಾರದ ಕಡೆಗೆ ಹೆಚ್ಚು ಗಮನಹರಿಸಬೇಕು. 


ಇದನ್ನೂ ಓದಿ-ಅಪಧಮನಿಗಳಲ್ಲಿನ ಹಟಮಾರಿ ಜಿಡ್ಡು ತೊಲಗಿಸಲು ನಿಮ್ಮ ಆಹಾರದಲ್ಲಿರಲಿ ಈ ಪದಾರ್ಥಗಳು!


ಆಹಾರವನ್ನು ಮಿತವಾಗಿ ಸೇವಿಸಿ
ಈ ಹೈಪೋಥೈರಾಯ್ಡ್ ಹಾರ್ಮೋನ್‌ ಸಮಸ್ಯೆ ಇರುವವರಿಗೆ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಇತರರಂತೆ ಬೇಗ ಜೀರ್ಣವಾಗುವುದಿಲ್ಲ. ಹೀಗಾಗಿ ಹೆಚ್ಚು ಆಹಾರ ಸೇವಿಸಿದರೇ ಅದು ಜೀರ್ಣವಾಗುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗೆ ಮಾಡಿದರೆ ನೀವು ತೂಕವನ್ನು ನಿಯಂತ್ರಿಸಬಹುದು.


ಹೈಪೋಥೈರಾಯ್ಡ್ ಹಾರ್ಮೋನ್‌ ಸಮಸ್ಯೆ ಇರುವವರು ಈ ರೀತಿಯ ಆಹಾರ ಸೇವಿಸಿ
*ದೇಹಕ್ಕೆ ಉತ್ತಮವಾಗಿರುವ ಹಣ್ಣುಗಳನ್ನು ಸೇವಿಸಿ
*ಹಸಿತರಕಾರಿಗಳನ್ನು ಹೆಚ್ಚಾಗಿ ಸೇವಿಸಿ
*ಮಾಂಸಹಾರವನ್ನು ಸೇವಿಸಿ ಆದರೆ ಮಿತವಾಗಿರಲಿ
*ಮೊಸರು, ಹಾಲು, ಬೆಣ್ಣೆ, ತೆಂಗಿನೆಣ್ಣೆ ಇವುಗಳನ್ನು ಆಹಾರಕ್ರಮದಲ್ಲಿ ಅಳವಡಿಸಿ
*ಸಜ್ಜೆ, ನವಣೆ, ಕುಚಲಕ್ಕಿ, ಓಟ್ಸ್‌ನಂತಹ ಆಹಾರ ಎಲ್ಲರಿಗೂ ಉತ್ತಮ
*ಕೆಫಿನ್‌ ಅಥವಾ ಸಕ್ಕರೆ ಬಳಸದ ಕಾಫಿ, ಟೀ ಕುಡಿಯಿರಿ.


ಯೋಗ, ವ್ಯಾಯಾಮ ಮಾಡಿ
ಪ್ರತಿದಿನದ ನಿಮ್ಮ ದಿನಚರಿಯಲ್ಲಿ ಯೋಗ ಮಾಡುವುದರಿಂದ ಥೈರಾಯ್ಡ್ ಹಾರ್ಮೋನ್‌ಗಳು ನಿಯಂತ್ರಣಕ್ಕೆ ಬರುತ್ತವೆ. ತೂಕವೂ ಇಳಿಯುವುದು. ಆದರೆ ಹೆಚ್ಚು ದೇಹವನ್ನು ದಂಡಿಸಬೇಡಿ.. ನಿಮ್ಮ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ವ್ಯಾಯಾಮ ಮಾಡಿ. ಇದು ನಿಮ್ಮ ತೂಕವನ್ನು ಹೆಚ್ಚಿಸಲು ಬಹಳ ಉಪಯುಕ್ತ. 


ಇದನ್ನೂ ಓದಿ-ಶನಿಯ ಸಾಡೇಸಾತಿಯಿಂದ ಮುಕ್ತಿ ನೀಡುತ್ತೇ ಈ ಒಂದು ಚಿಕ್ಕ ಉಪಾಯ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ