ನವದೆಹಲಿ : ಮೊಟ್ಟೆ ವೆಜ್ ಅಥವಾ ನಾನ್ ವೆಜ್ (Non veg) ಈ ವಾದದ ಇದ್ದೇ ಇದೆ. ಇದರ ನಡುವೆಯ  ವೆಜ್ ಎನ್ನುತ್ತಲೇ ಶಾಖಾಹಾರಿಗಳು ಮೊಟ್ಟೆಯನ್ನು ಹೊಟ್ಟೆಗಿಳಿಸುತ್ತಾರೆ.  ಇರಲಿ ಬಿಡಿ. ಮೊಟ್ಟೆ ಆರೋಗ್ಯಕ್ಕೆ  (health benefits of egg) ತುಂಬಾ ಒಳ್ಳೆಯದು.  ಮೊಟ್ಟೆ ಪ್ರೊಟಿನ್ ನ ಪವರ್ ಹೌಸ್.  ಮೊಟ್ಟೆಯ ಆಮ್ಲೇಟ್ ಎಲ್ಲರಿಗೂ ಇಷ್ಟ. ಈಗ ಮನೆಯಲ್ಲಿ ಮಾಡುವ ಆಮ್ಲೇಟನ್ನು ಇನ್ನಷ್ಟು ಟೇಸ್ಟಿ ಮತ್ತು ಸಾಫ್ಟ್ ಆಗಿ ( Soft Omelette) ಮಾಡುವುದು ಹೇಗೆ ನೋಡೋಣ. 


COMMERCIAL BREAK
SCROLL TO CONTINUE READING

1.  ಆಮ್ಲೆಟ್ (omelette) ಮಾಡಲು ಬಳಸುವ ಮೊಟ್ಟೆ ರೂಮ್ ಟೆಂಪರೇಚರ್ ನಲ್ಲಿ ಇರಬೇಕು. ಅಂದರೆ, ಫ್ರಿಜ್ ನಲ್ಲಿ ತೆಗೆದು ಕೂಡಲೇ ಅಮ್ಲೇಟ್ ಮಾಡಬಾರದು.  ಕೋಲ್ಡ್ ಆಗಿರುವ ಮೊಟ್ಟೆಯಲ್ಲಿ ಆಮ್ಲೇಟ್ ಮಾಡಿದರೆ ಅದು ಓವರ್ ಹೀಟ್ ಆಗುವ ಸಾಧ್ಯತೆ ಇದೆ. 


ಇದನ್ನೂ ಓದಿ : Honey Benefits : ಚರ್ಮದ ಎಲ್ಲಾ ಸಮಸ್ಯೆಗಳಿಗೆ ಜೇನು ತುಪ್ಪ : ಬಳಸುವುದು ಹೇಗೆ? ಇಲ್ಲಿ ನೋಡಿ


2. ನಿಮ್ಮ  ಆಮ್ಲೇಟ್ ಸಾಫ್ಟ್ ಮತ್ತು ಪಲ್ಫೀ ಆಗಬೇಕಾದರೆ, ಪಾತ್ರೆಗೆ ಮೊಟ್ಟೆಯೊಡೆದು ಹಾಕುವಾಗ ಸ್ವಲ್ಪ ಹಾಲು (Milk) ಅಥವಾ ಕ್ರೀಂ ಹಾಕಿ.  ಹೀಗೆ ಮಾಡಿದರೆ ಆಮ್ಲೇಟ್ ಉಬ್ಬುತ್ತದೆ ( fluffy omelette). ರುಚಿಯೂ ಬದಲಾಗುತ್ತದೆ.


3. ಮೊಟ್ಟೆಯೊಡೆದು ಹಾಕಿದ ಪಾತ್ರೆಗೆ ಸ್ವಲ್ಪ ಸೋಡಾ ನೀರು (soda) ಸೇರಿಸಿ ತಿರುಗಿಸಿ ಹಾಕಿದರೂ ಆಮ್ಲೇಟ್ ಕಿಲಕಿಲ  ಉಬ್ಬಿ ಬರುತ್ತದೆ. 


4. ಆಮ್ಲೇಟ್ ಯಾವ ಪಾತ್ರೆಯಲ್ಲಿ ಮಾಡುತ್ತೀರಿ ಎನ್ನುವುದು ಕೂಡಾ ಆಮ್ಲೇಟಿನ ರುಚಿಯನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ, ನಾನ್ ಸ್ಟಿಕ್ ತವಾವನ್ನು (Non stick tawa) ಆಮ್ಲೇಟ್ ಮಾಡಲು ಬಳಸುವುದು ಉತ್ತಮ.


ಇದನ್ನೂ ಓದಿ : Vitamin K Deficiency Symptoms: ವಿಟಮಿನ್ 'ಕೆ' ಕೊರತೆಯಿದ್ದಾಗ ಕಂಡುಬರುವ ಲಕ್ಷಣಗಳಿವು


5. ಪರ್ಫೆಕ್ಟ್ ಆಮ್ಲೇಟ್ ಮಾಡಬೇಕಾದರೆ ಒಲೆಯ ಬೆಂಕಿ ಏಕ್ ದಂ ಹೆಚ್ಚೂ ಇರಬಾರದು, ತೀರಾ ಕಡಿಮೆಯೂ ಇರಬಾರದು. ಮೀಡಿಯಂ ಉರಿಯಲ್ಲಿ ಆಮ್ಲೇಟ್ ಕುಕ್ ಮಾಡಿ. 


6. ಇನ್ನು ತವಾ ಕೂಡಾ ತೀರಾ ದೊಡ್ಡದೂ ಇರಬಾರದು, ತೀರಾ ಸಣ್ಣದೂ ಇರಬಾರದು. ಮೀಡಿಯಂ ತವಾ ಇದ್ದರೆ ಉತ್ತಮ.


7.  ಆಮ್ಲೇಟ್ ಮಾಡುವಾಗ ಎಣ್ಣೆ ಬದಲು ಬೆಣ್ಣೆ (Butter) ಗಳಸಿದರೆ ತುಂಬಾ ರುಚಿ ಇರುತ್ತದೆ.


8. ಆಮ್ಲೇಟ್ ಟಾಪಿಂಗ್ ಮಾಡುವಾಗ ತೀರಾ ಹೆವಿಯಾಗಿ ಡೆಕೋರೇಟ್ ಮಾಡಬೇಡಿ. ಟಾಪಿಂಗ್ ಗೆ ಹದವಾಗಿಕತ್ತರಿಸಿದ ಟೊಮ್ಯಾಟೊ(tomato), ಈರುಳ್ಳಿ, ಪನೀರ್ ಪೀಸ್, ಬೆಣ್ಣೆ, ಕೊತ್ತಂಬರಿ ಸ್ವಲ್ಪ ಹಿತವಾಗಿ ಬಳಸಿ. ರುಚಿ ಇನ್ನೂ ಹೆಚ್ಚುತ್ತದೆ.


ಇದನ್ನೂ ಓದಿ : face care tips : ಮುಖಕ್ಕೆ ಈ ಐದು ವಸ್ತುಗಳನ್ನು ಹಚ್ಚುವ ತಪ್ಪು ಎಂದೂ ಮಾಡಬೇಡಿ


9. ಮುಖ್ಯವಾಗಿ, ಮಧ್ಯಮ ಗಾತ್ರದ ತವಾ ದಲ್ಲಿ ಸಿಂಗಲ್ ಅಥವಾ ಡಬ್ಬಲ್ ಆಮ್ಲೇಟ್ ಮಾತ್ರ ಮಾಡಿ. ಅದಕ್ಕಿಂತ ಜಾಸ್ತಿ ಮಾಡಿದರೆ, ಅಮ್ಲೇಟ್ ಸುಟ್ಟು ಹೋಗುವ ಎಲ್ಲಾ ಸಾಧ್ಯತೆ ಇರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ