ಬೆಂಗಳೂರು : ಇಂದಿನ ಅನಾರೋಗ್ಯಕರ ಜೀವನಶೈಲಿ (lifestyle)ಮತ್ತು ಆಹಾರ ಪದ್ಧತಿಯಿಂದಾಗಿ  ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಇದಲ್ಲದೆ, ಅತಿಯಾದ ಒತ್ತಡ ಮತ್ತು ಕಳಪೆ ಗುಣ ಮಟ್ಟದ ನೀರಿನಿಂದಲೂ ಸಮಯಕ್ಕಿಂತ ಮುಂಚೆಯೇ ತಲೆಯ ಮೇಲೆ ಬೆಳ್ಳಗಾಗಲು ಆರಂಭಿಸುತ್ತದೆ (white hair problem).  ಈ ಸಮಸ್ಯೆಯನ್ನು ತಪ್ಪಿಸಲು, ಯುವಕರು ಕೆಲವು ತಪ್ಪು ಕ್ರಮಗಳನ್ನು ಅನುಸರಿಸಿಬಿಡುತ್ತಾರೆ. ಅಂದರೆ ಬಿಳಿ  ಕೂದಲು ಕಂಡ ತಕ್ಷಣ ಕಲರ್ ಮಾಡುವುದು, ಅಥವಾ  ಬಿಳಿ ಕೂದಲನ್ನು ಕೀಳುವುದು ಮಾಡಿದಾಗ ಬಿಳಿ ಕೂದಲು ಕಡಿಮೆಯಾಗುವ ಬದಲಿಉ ಹೆಚ್ಚಾಗಲು ಆರಂಭವಾಗುತ್ತದೆ (White hair home remedy). 


COMMERCIAL BREAK
SCROLL TO CONTINUE READING

ನೀವು ಮೊದಲ  ಬಾರಿಗೆ ಬಿಳಿ ಕೂದಲನ್ನು ನೋಡಿದಾಗ ಏನು ಮಾಡಬೇಕು?
ಬಿಳಿ ಕೂದಲು  ಮೂಡುವುದನ್ನು ಕಂಡಾಗ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು (White hair sollution). ಕೂದಲು ಅಕಾಲಿಕವಾಗಿ ಬಿಳಿಯಾಗಲು ಪ್ರಾರಂಭಿಸಿದರೆ, ಬಿಳಿ ಕೂದಲನ್ನು ಕೀಳುವ ತಪ್ಪು ಮಾಡಲೇ ಬೇಡಿ. 


ಇದನ್ನೂ ಓದಿ : ಬೇಸಿಗೆಯಲ್ಲಿ ಈರುಳ್ಳಿ ತಿಂದರೆ ಹೀಟ್ ಸ್ಟ್ರೋಕ್ ಸೇರಿ ಈ ಸಮಸ್ಯೆಗಳಿಂದ ಸಿಗುತ್ತದೆ ಪರಿಹಾರ


ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ :
ಬಿಳಿ ಕೂದಲು ಪ್ರಾರಂಭವಾದಾಗ, ಕೆಫೀನ್ ಹೊಂದಿರುವ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿ. ಇದಲ್ಲದೆ, ಫೋಲಿಕ್ ಆಮ್ಲ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ.  
 
ಮೆಹಂದಿ ಬಳಸಿ :
ಬಿಳಿ ಕೂದಲು ತಡೆಯಲು ಮೆಹಂದಿ ಬಳಸಿ (Henna for white hair). ಇದು ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುವ ಕೆಲಸ ಕೂಡಾ ಮಾಡುತ್ತದೆ. ಇದನ್ನು ನಿಯಮಿತವಾಗಿ ಅನ್ವಯಿಸುವುದರಿಂದ ನಿಮ್ಮ ಕೂದಲು ಹೊಳೆಯುತ್ತದೆ.


ಇದನ್ನೂ ಓದಿ : Dry Fig With Milk: ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಈ ಡ್ರೈಫ್ರೂಟ್ ಸೇವಿಸಿ, ಬ್ಲಡ್ ಪ್ರೆಶರ್ ನಿಯಂತ್ರಣದಲ್ಲಿರುತ್ತದೆ
 
ತೈಲ ಆಧಾರಿತ ಬಣ್ಣವನ್ನು ಬಳಸಿ :
ಬಿಳಿ ಕೂದಲಿಗೆ ಬಣ್ಣ ಹಚ್ಚುವುದರಿಂದ ಅವುಗಳ ನೈಸರ್ಗಿಕ ಬಣ್ಣ ಮಾಯವಾಗುತ್ತದೆ (Oil based colour for white hair). ನಿಮ್ಮ ಕೂದಲಿನ ಬಣ್ಣವನ್ನು ಆಯ್ಕೆಮಾಡುವಾಗ, ಎಣ್ಣೆ ಆಧಾರಿತ ಕೂದಲಿನ ಬಣ್ಣವನ್ನು ಆಯ್ಕೆ ಮಾಡಬೇಕು ಎನ್ನುವುದು ನೆನಪಿರಲಿ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.