Burn Hip Fat : ಪ್ಯಾಟ್‌ ಬರ್ನ್‌ ಮಾಡೋದು ದೊಡ್ಡ ಸಮಸ್ಯೆ. ಮಹಿಳೆಯರಿಗೆ ಹಿಪ್ಸ್‌ ಪ್ಯಾಟ್‌ ಕರಗಿಸುವುದಂತೂ ಬಗೆಹರಿಸಲಾರದ ಸಮಸ್ಯೆಯಾಗಿ ಉಳಿದುಕೊಳ್ಳುತ್ತದೆ. ಇದರಿಂದ ಅವರ ಬಾಹ್ಯ ನೋಟ ಸುಂದರವಾಗಿ ಕಾಣುವುದಿಲ್ಲ ಎಂಬ ಕೊರಗು ಅವರಿಗಿರುತ್ತದೆ. ಅದಕ್ಕೆಂದು ಊಟ ಬಿಟ್ಟು ಡೈಯೆಟ್‌ ಮಾಡುವ ಮೂಲಕ ಪ್ಯಾಟ್‌ ಕರಗಿಸಲು ಶತ ಪ್ರಯತ್ನ ಮಾಡ್ತಾರೆ.. ಇಲ್ಲಿ ಕೆಲವೊಂದಿಷ್ಟು ವ್ಯಾಯಾಮದ ವಿಧಾನಗಳನ್ನು ನೀಡಲಾಗಿದ್ದು, ಅವರುಗಳನ್ನು ದಿನನಿತ್ಯ ಮಾಡಿದ್ರೆ ಕೊಬ್ಬನ್ನು ಕಳೆದುಕೊಳ್ಳಬಹುದಾಗಿದೆ. ಹಾಗಿದ್ರೆ ಇನ್ಯಾಕೆ ತಡ.. ಮುಂದೆ ಓದಿ..


COMMERCIAL BREAK
SCROLL TO CONTINUE READING

ಸ್ಕ್ವಾಟ್ಗಳು(Squats) : ಸ್ಕ್ವಾಟ್‌ಗಳು ಬಹುಮುಖ ವ್ಯಾಯಾಮವಾಗಿದೆ. ಈ ವ್ಯಾಯಾಮ ನಿಮ್ಮ ಕೆಳಗಿನ ದೇಹದ ಅನೇಕ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ದೇಹದ ತೂಕದಿಂದ ನೀವು ಸ್ಕ್ವಾಟ್‌ಗಳನ್ನು ಮಾಡಬಹುದು. ಒಮ್ಮೆ ನೀವು ಈ ವ್ಯಾಯಾಮವನ್ನು ಕರಗತ ಮಾಡಿಕೊಂಡ ನಂತರ, ಬೇಕಾದಲ್ಲಿ ಕೈಯಲ್ಲಿ ಡಂಬಲ್ಸ್‌ ಹಿಡಿದು ಮಾಡಬಹುದು.


ಸೈಡ್ ಲಾಂಗ್ಸ್‌ (Side lunges) : ಈ ವ್ಯಾಯಾಮವನ್ನು ಲ್ಯಾಟರಲ್ ಲಂಗ್‌ ಎಂದೂ ಕರೆಯುತ್ತಾರೆ. ಈ ವ್ಯಾಯಾಮ ತೊಡೆಯ ಹೊರಭಾಗ ಮತ್ತು ಸೊಂಟದ ಪ್ರದೇಶದ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ. 


ಇದನ್ನೂ ಓದಿ:ಧನು ರಾಶಿಯಲ್ಲಿ ಬುಧನ ಸಂಕ್ರಮಣ: ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ


ಫೈರ್‌ ಹೈಡ್ರಂಟ್‌ (Fire hydrants) : ಫೈರ್ ಹೈಡ್ರಂಟ್ ವ್ಯಾಯಾಮವು ನಿಮ್ಮ ಗ್ಲುಟ್ಸ್ ಮತ್ತು ಹಿಪ್ ಪ್ರದೇಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಸ್ಥಿರತೆಗಾಗಿ ನಿಮ್ಮ ಕೋರ್ ಸ್ನಾಯುಗಳನ್ನು ಸಹ ಬಳಸುತ್ತದೆ. ನಿಮ್ಮ ಮೊಣಕಾಲುಗಳೊಂದಿಗೆ ನೀವು ಸಮಸ್ಯೆಗಳನ್ನು ಹೊಂದಿದ್ದರೆ, ಈ ವ್ಯಾಯಾಮಕ್ಕಾಗಿ ನೀವು ಚಾಪೆಯನ್ನು ಬಳಸಿ ಮಾಡಬಹುದು.


ವಾಲ್‌ ಸಿಟ್ಸ್‌ (Wall sits) : ವಾಲ್ ಸ್ಕ್ವಾಟ್‌ಗಳು ಎಂದೂ ಈ ವ್ಯಾಯಾಮವನ್ನು ಕರೆಯಲಾಗುತ್ತದೆ. ಮನೆಯ ಗೋಡೆಗೆ ಒರಗಿ ಖುರ್ಚಿಯ ಮೇಲೆ ಕುಳಿತುಕೊಲ್ಳುವ ವಿಧಾನದಂತೆ ಕುಳಿತಕೊಳ್ಳಬೇಕು. ನಿಮ್ಮ ತೊಡೆಗಳು, ಸೊಂಟ ಮತ್ತು ಹಿಪ್ಸ್‌ ಮೇಲೆ ಇದು ಪರಿಣಾಮಕಾರಿ. ನಿಮ್ಮ ಸ್ನಾಯುವಿನ ಸಹಿಷ್ಣುತೆಯನ್ನು ಪರೀಕ್ಷಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಇದು ಉತ್ತಮ ಕ್ರಮ.


ಇದನ್ನೂ ಓದಿ: Garuda Purana : ಮನುಷ್ಯ ಸಾಯುವ ಮೊದಲು ಅವನ ದೇಹದಲ್ಲಿ ಕಂಡು ಬರುತ್ತವೆ ಈ 5 ಸಂಕೇತಗಳು!


ಬೆಂಡೆಂಡ್‌ ವಾಕ್‌ (Banded walk) : ಬ್ಯಾಂಡೆಡ್ ವಾಕ್ ಅಂದ್ರೆ ನಿಮ್ಮ ಎರಡೂ ಕಾಲುಗಳಿಗೆ ರಬ್ಬರ ಬಳಸಿ ಮಾಡುವ ಒಂದು ವ್ಯಾಯಾಮದ ವಿಧಾನ. ಈ ವ್ಯಾಯಾಮದಲ್ಲಿ ನಿಮ್ಮ ಸೊಂಟ ಭಾಗದ ಮೇಲೆ ಹೆಚ್ಚು ಒತ್ತಡ ಬಿಳುತ್ತದೆ. ನಿರ್ದಿಷ್ಟ ಪ್ರಮಾಣದ ವೇಗದಿಂದ ಒಂದು ಕಾಲನ್ನು ಚಲಾಯಿಸುವುದರಿಂದ ನಿಮ್ಮ ಸೊಂಟ ಮತ್ತು ಗ್ಲುಟ್ಸ್ ಬಲವಾಗುತ್ತವೆ.


6. ಸ್ಟೆಪ್‌ ಅಪ್‌ ವಿಡ್‌ ವೆಟ್ಸ್‌ ( Step-ups with weights) ಸ್ಟೆಪ್-ಅಪ್‌ಗಳು ನಿಮ್ಮ ಗ್ಲುಟ್ಸ್, ಸೊಂಟ ಮತ್ತು ತೊಡೆಗಳಲ್ಲಿನ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸಮತೋಲನ ಮತ್ತು ಸ್ಥಿರತೆಯನ್ನು ಸುಧಾರಿಸಬಹುದು. ಮೊಣಕಾಲು ಎತ್ತರದ ಬೆಂಚ್ ಮೇಲೆ ಕೈಯಲ್ಲಿ ಡಂಬಲ್ಸ್‌ ಹಿಡಿದುಕೊಂಡು ಮೆಟ್ಟಿಲು ಹತ್ತುವ ರೀತಿಯಲ್ಲಿ ಬೆಂಚ್‌ ಮೇಲೆ ಹೆಜ್ಜೆಯನ್ನು ಇಟ್ಟು ತೊಡೆಯ ಮೇಲೆ ಬಲವನ್ನು ಹಾಕಿ ಹೆಜ್ಜೆ ಇಡುಬೇಕು.


ಇದನ್ನೂ ಓದಿ: High Cholesterol ನಿಯಂತ್ರಣಕ್ಕೆ ಈ ಡ್ರೈಫ್ರೂಟ್ ಗಳು ನಿಮ್ಮ ಆಹಾರದಲ್ಲಿರಲಿ


7. ಸೈಡ್‌ ಲೈಯಿಂಗ್‌ ಲೆಗ್‌ ರೈಸ್‌ (Side-lying leg raise) : ಸೈಡ್-ಲೈಯಿಂಗ್ ಲೆಗ್ ರೈಸ್ ಒಂದು ಪ್ರತ್ಯೇಕ ವ್ಯಾಯಾಮವಾಗಿದ್ದು ಅದು ಸೊಂಟವನ್ನು ಬಲಪಡಿಸುತ್ತದೆ. ಈ ವ್ಯಾಯಾಮ ಬಾಡಿ ಶೇಪ್‌ ಬರಿಸಲು ಉತ್ತಮ ವಿಧಾನವಾಗಿದೆ. ನಿಮ್ಮ ಬಲಭಾಗದಲ್ಲಿ ಚಾಪೆಯ ಮೇಲೆ ಮಲಗಿಕೊಳ್ಳಿ.
ನಿಮ್ಮ ಎಡ ಕಾಲನ್ನು ಎತ್ತಿ ಹೋಗಬಹುದಾದಷ್ಟು ನಿಧಾನವಾಗಿ ಮೇಲಕ್ಕೆತ್ತಿ. ನಿಮ್ಮ ಕಾಲ್ಬೆರಳುಗಳನ್ನು ಮುಂದಕ್ಕಿರಲಿ. ಮೇಲ್ಭಾಗಕ್ಕೆ ಕಾಲು ಹೋದ ನಂತರ ಸ್ಟಾಪ್‌ ಮಾಡಿ. ನಂತರ ನಿಮ್ಮ ಲೆಗ್ ಅನ್ನು ಆರಂಭಿಕ ಸ್ಥಾನಕ್ಕೆ ತನ್ನಿ. ಹೀಗೆ ಎರಡು ಬದಿಯಲ್ಲಿ ಎರಡೂ ಕಾಲುಗಳಿಂದ ಮಾಡಬೇಕು.



ಸೂಚನೆ : ಇಲ್ಲಿ ಹೇಳಿರುವ ವ್ಯಾಯಾಮ ವಿಧಾನಗಳು ದೇಹದ ಆರೋಗ್ಯದ ದೃಷ್ಟಿಯಿಂದಲೇ ಹೇಳಲಾಗಿದೆ. ಆದರೂ ಇವುಗಳನ್ನು ನೀವು ದಯವಿಟ್ಟು ಸರಿಯಾದ ತರಬೇತಿ ಪಡೆದು ಮಾಡಿ ಇಲ್ಲವೆ ತರಬೇತುದಾರರ ಸಮಕ್ಷಮದಲ್ಲಿ ಮಾಡಿದರೆ ಉತ್ತಮ. ಇಲ್ಲದಿದ್ದರೆ ಅಪಾಯ ಒದಗುವ ಅವಕಾಶಗಳಿರುತ್ತವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.