Vastu Tips in Kannada : ವಾಸ್ತು ಪ್ರಕಾರ, ನಮ್ಮ ಮನೆಯಲ್ಲಿರುವ ಕೆಲವು ವಸ್ತುಗಳಿಂದ ಮನೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜನ ಈ ವಿಷಯದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇದು ಮನೆಯಲ್ಲಿ ಅಶುಭ ಸಂಕೇತಗಳನ್ನು ತರುತ್ತದೆ. ಇಂದು ನಾವು ಈ ವಿಷಯದ ಬಗ್ಗೆ ಮಾಹಿತಿ ತಂದಿದ್ದೇವೆ. ಯಾವ ವಸ್ತುಗಳು ಮನೆಯಲ್ಲಿವೆ, ಅವುಗಳಲಿಂದ ಮನೆಯಲ್ಲಿ ಹೇಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿದೆ ಓದಿ...


COMMERCIAL BREAK
SCROLL TO CONTINUE READING

ತಕ್ಷಣ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ


ಒಡೆದ ವಿಗ್ರಹಗಳು ನಮ್ಮ ಮನೆಯಲ್ಲಿದ್ದರೆ ಈ ನಕಾರಾತ್ಮಕ ಶಕ್ತಿ ಮನೆಗೆ ತಗಲುತ್ತದೆ. ಹೀಗಾಗಿ, ತಕ್ಷಣ ಈ ವಿಗ್ರಹಗಳನ್ನು ಮನೆಯಿಂದ ಹೊರಹಾಕಿ.


ಇದನ್ನೂ ಓದಿ : Vastu Tips : ಗ್ರಹ ದೋಷಕ್ಕೆ ಪರಿಹಾರ ನೀಡುತ್ತದೆ ಅಡುಗೆ ಮನೆಯಲ್ಲಿರುವ ಈ ವಸ್ತು!


ತಾಜ್ ಮಹಲ್ ಅಥವಾ ಸಮಾಧಿಯಂತಹ ಯಾರೊಬ್ಬರ ಸಾವಿನ ಸಂಕೇತವಾಗಿರುವ ಮೂರ್ತಿ, ಚಿತ್ರಕಲೆ, ವಿಗ್ರಹ ಇದ್ದರೆ. ಅದು ಕೂಡ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತದೆ.


ಹಳೆ ಹರಿದ ಬಟ್ಟೆಗಳನ್ನು ಮನೆಯಲ್ಲಿ ಕಟ್ಟಿ ಇಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯೂ ಹುಟ್ಟುತ್ತದೆ. ಮನೆಯಲ್ಲಿ ನಿಷ್ಪ್ರಯೋಜಕ ವಸ್ತುಗಳಿದ್ದರೆ, ತಕ್ಷಣ ಅವುಗಳನ್ನು ಮನೆಯಿಂದ ಹೊರಹಾಕಿ. ಅವುಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಡಬೇಡಿ. ಈ ಕಾರಣದಿಂದಾಗಿ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುತ್ತದೆ. ಅಲ್ಲದೆ, ಈ ವಸ್ತುಗಳು ಸಮೃದ್ಧಿಗೆ ಅಡ್ಡಿಯಾಗುತ್ತವೆ.


ನಿಮ್ಮ ಮನೆಯಲ್ಲಿ ಬಳೆಕೆಯಾದ ರೂಂ ಅಥವಾ ಯಾವಾಗಲು ಬಾಗಿಲು ಮುಚ್ಚಿರುತ್ತಿದ್ದರೆ. ತಕ್ಷಣ ಅದನ್ನು ತೆಗೆದುಹಾಕಿ. ಅಲ್ಲದೆ, ಬಂದು ಬಿದ್ದಿರುವ ಗಡಿಯಾರವು ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು.


ನಿಮ್ಮ ಮನೆಯಲ್ಲಿ ಹಳೆಯ ಬೂಟು ಮತ್ತು ಚಪ್ಪಲಿಗಳಿದ್ದರೆ, ಅವುಗಳನ್ನು ಸಹ ಮನೆಯಿಂದ ಹೊರ ಹಾಕಿರಿ. ಈ ಕಾರಣದಿಂದಾಗಿ, ಮನೆಯಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತದೆ. ಮನೆಯಲ್ಲಿ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಇಡಬೇಡಿ.


ಇದನ್ನೂ ಓದಿ : New Year 2023: ಹೊಸ ವರ್ಷದ ಮೊದಲ ದಿನವೇ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಯಾರಿಗೆ ಲಾಭ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.