Benifits of green tea : ಗ್ರೀನ್‌ ಟೀಯಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಏಜಿಂಗ್ ಗುಣಗಳು ಹಲವು ರೀತಿಯ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇದಲ್ಲದೆ, ಇದು ಚರ್ಮದ ಟೋನ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

* ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸಲು ಗ್ರೀನ್ ಟೀ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ, ಗ್ರೀನ್ ಟೀಯನ್ನು ಕುದಿಸಿದ ನಂತರ, ಅದನ್ನು ಫಿಲ್ಟರ್ ಮಾಡಿ, ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ 10 ನಿಮಿಷಗಳ ಕಾಲ ಹಚ್ಚಿಕೊಳ್ಳಿ. ಈ ಪ್ಯಾಕ್‌ನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಮುಖದಲ್ಲಿನ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸುತ್ತದೆ.


ಇದನ್ನೂ ಓದಿ-ನಿಮ್ಮ ಬಿಳಿ ಕೂದಲನ್ನು ಈ ರೀತಿ ಪರ್ಮನೆಂಟ್ ಆಗಿ ಕಪ್ಪಾಗಿಸಿ, ಮೆಹಂದಿ ಅವಶ್ಯಕತೆ ಬೀಳುವುದಿಲ್ಲ!


* ಸ್ಕಿನ್ ಟೋನ್ ಹೆಚ್ಚಿಸಲು ಗ್ರೀನ್ ಟೀ ಕೂಡ ಉಪಯುಕ್ತ. ಇದಕ್ಕಾಗಿ ಗ್ರೀನ್ ಟೀಯಲ್ಲಿ ಸ್ವಲ್ಪ ರೋಸ್ ವಾಟರ್ ಮಿಕ್ಸ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಇದರಿಂದ ಟೀ ಬಣ್ಣ ಬಿಡಲು ಶುರುವಾಗುತ್ತದೆ. ಆಗ ಹತ್ತಿಯ ಸಹಾಯದಿಂದ ಇಡೀ ಮುಖವನ್ನು ಸ್ವಚ್ಛಗೊಳಿಸಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮುಖದ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ.


* ಇದು ಕಣ್ಣುಗಳ ಊತವನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕಾಗಿ ಗ್ರೀನ್‌ ಟೀಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಕುದಿಸಿ ಮತ್ತು ಆ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ. ಕಣ್ಣುಗಳ ಊತ ಕಡಿಮೆಮಾಡಿಕೊಳ್ಳಿ. 


ಇದನ್ನೂ ಓದಿ-ರಾತ್ರಿ ಮಲಗುವ ಮುನ್ನ ಈ ಡ್ರಿಂಕ್ ಸೇವಿಸಿ, ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಿ!


* ಬಿಸಿಲ ಬೇಗೆಯ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಹೌದು ಗ್ರೀನ್‌ ಟೀಯನ್ನು ಕುದಿಸಿ ಸ್ನಾನದ ನೀರಿಗೆ ಹಾಕಿ. ಹೀಗೆ ಮಾಡುವುದರಿಂದ ಸನ್ ಬರ್ನ್ ಸಮಸ್ಯೆ ದೂರವಾಗುತ್ತದೆ. 


* ಸುಕ್ಕುಗಳನ್ನು ಹೋಗಲಾಡಿಸಲು ಸಹಕಾರಿ ಈ ಗ್ರೀನ್‌ ಟೀ. ಹೌದು ಗ್ರೀನ್ ಟೀಯಲ್ಲಿ ಕೆಲವು ಹನಿ ನಿಂಬೆಹಣ್ಣಿನ ರಸವನ್ನು ಹಾಕಿ ಮತ್ತು ಈ ನೀರಿನಿಂದ ದಿನಕ್ಕೆ 6-7 ಬಾರಿ ನಿಮ್ಮ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.