Multani Mitti For Hair Fall: ಕೂದಲು ಉದುರುವಿಕೆಗೆ ಬ್ರೇಕ್ ಹಾಕಲು ಮುಲ್ತಾನಿ ಮಿಟ್ಟಿಯಲ್ಲಿ 5 ಪದಾರ್ಥಗಳನ್ನು ಬೆರೆಸಿ ಕೂದಲಿಗೆ ಹಚ್ಚಿ!
Multani Mitti Hair Remedy: ನಿಮ್ಮ ತಲೆ ಕೂದಲುಗಳು ಕೂಡ ತುಂಬಾ ಉದುರುತ್ತಿವೆಯೇ? ಇಂತಹ ಪರಿಸ್ಥಿತಿಯಲ್ಲಿ, ಮುಲ್ತಾನಿ ಮಿಟ್ಟಿಯಲ್ಲಿ ಕೆಲ ವಿಶೇಷ ಸಂಗತಿಗಳನ್ನು ಬೆರೆಸಿ ಅದನ್ನು ಅನ್ವಯಿಸುವುದು ನಿಮಗೆ ಸಾಕಷ್ಟು ಪ್ರಯೋಜನ ನೀಡಲಿದೆ (Lifestyle News In Kannada).
How To Use Multani Mitti For Reducing Hair Fall: ಪೌಷ್ಟಿಕಾಂಶದ ಕೊರತೆ ಮತ್ತು ಕಳಪೆ ಜೀವನಶೈಲಿಯಿಂದ ಕೂದಲು ಹಾಳಾಗುತ್ತವೆ. ಈ ಕಾರಣದಿಂದಾಗಿ, ಕೂದಲು ಶುಷ್ಕ ಮತ್ತು ಫ್ರಿಜ್ ಆಗುವುದಲ್ಲದೆ, ಉದುರಾಳು ಪ್ರಾರಂಭಿಸುತ್ತದೆ. ಇದಲ್ಲದೇ ಕೂದಲಿಗೆ ಆರೈಕೆ ಮಾಡದಿರುವುದು ಕೂಡ ಬೇರುಗಳು ದುರ್ಬಲವಾಗಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ, ಅತಿಯಾದ ಕೂದಲು ಉದುರುವಿಕೆ ಸಂಭವಿಸಬಹುದು. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮುಲ್ತಾನಿ ಮಿಟ್ಟಿಯನ್ನು ಬಳಸಬಹುದು. ಮುಲ್ತಾನಿ ಮಿಟ್ಟಿಯಲ್ಲಿರುವ ಅಗತ್ಯ ಪೋಷಕಾಂಶಗಳು ಕೂದಲನ್ನು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತವೇ. ಇದರ ಬಳಕೆಯಿಂದ ಒಣ ಮತ್ತು ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯೂ ಕಡಿಮೆಯಾಗುತ್ತದೆ. ಅಲ್ಲದೆ, ಕೂದಲಿನ ಬೇರುಗಳು ಬಲವಾಗುತ್ತವೆ. ಕೂದಲು ಉದುರುವುದನ್ನು ತಡೆಯಲು ಮುಲ್ತಾನಿ ಮಿಟ್ಟಿಯಲ್ಲಿ ಏನನ್ನು ಬೆರೆಸಿ ತಲೆಗೆ ಅನ್ವಯಿಸಬಹುದು ತಿಳಿದುಕೊಳ್ಳೋಣ ಬನ್ನಿ (Lifestyle News In Kannada).
ಮುಲ್ತಾನಿ ಮಿಟ್ಟಿ ಮತ್ತು ಮೊಸರು (Multani Mitti And Curd For Hair Fall)
ಮುಲ್ತಾನಿ ಮಿಟ್ಟಿಗೆ ಮೊಸರನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ತಲೆಯ ಕೊಳೆ ನಿವಾರಣೆಯಾಗುತ್ತದೆ. ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪೇಸ್ಟ್ ತಯಾರಿಸಲು, ಒಂದು ಬಟ್ಟಲಿನಲ್ಲಿ 2 ಚಮಚ ಮುಲ್ತಾನಿ ಮಿಟ್ಟಿ ತೆಗೆದುಕೊಳ್ಳಿ. ಈಗ ಅದಕ್ಕೆ 3 ಚಮಚ ಮೊಸರು ಬೆರೆಸಿ. ಪೇಸ್ಟ್ ತಯಾರಿಸಿ ನೆತ್ತಿಯ ಮೇಲೆ ಹಚ್ಚಿ 20 ನಿಮಿಷಗಳ ನಂತರ ನೀರಿನಿಂದ ತೊಳೆದುಕೊಳ್ಳಿ.
ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾ ಜೆಲ್ (Multani Mitti And Aloe Vera Gel For Hair Fall)
ಮುಲ್ತಾನಿ ಮಿಟ್ಟಿಗೆ ಅಲೋವೆರಾ ಜೆಲ್ ಬೆರೆಸಿ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದನ್ನು ಬಳಸುವುದರಿಂದ ನೀವು ಒಣ ಮತ್ತು ಸುಕ್ಕುಗಟ್ಟಿದ ಕೂದಲಿನಿಂದಲೂ ಪರಿಹಾರವನ್ನು ಪಡೆಯಬಹುದು. ಈ ಹೇರ್ ಮಾಸ್ಕ್ ತಯಾರಿಸಲು ನೀವು 2 ಚಮಚ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಳ್ಳಬೇಕು. ಈಗ ಅದಕ್ಕೆ 3 ಚಮಚ ಅಲೋವೆರಾ ಜೆಲ್ ಬೆರೆಸಿ. ಪೇಸ್ಟ್ ತಯಾರಿಸಿ ನೆತ್ತಿಯ ಮೇಲೆ ಹಚ್ಚಿ ಮತ್ತು ಕೂದಲನ್ನು ತೊಳೆಯಿರಿ.
ಮುಲ್ತಾನಿ ಮಿಟ್ಟಿ ಮತ್ತು ಚಹಾ ನೀರು (Multani Mitti And Tea Water For Hair Fall)
ನೀವು ಚಹಾ ಎಲೆಯ ನೀರನ್ನು ಬೆರೆಸಿ ಮುಲ್ತಾನಿ ಮಿಟ್ಟಿಯನ್ನು ಕೂದಲಿಗೆ ಅನ್ವಯಿಸಬಹುದು. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ನೀವು ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಬೇಕು. ಈಗ ಅದರ ನೀರನ್ನು ಫಿಲ್ಟರ್ ಮಾಡಿ. ಅದು ತಣ್ಣಗಾದ ಬಳಿಕ ಅದಕ್ಕೆ ಮುಲ್ತಾನಿ ಮಿಟ್ಟಿ ಹಾಕಿ ಪೇಸ್ಟ್ ತಯಾರಿಸಿ. ಕೂದಲಿನ ಮೇಲೆ 30 ನಿಮಿಷಗಳ ಕಾಲ ಇರಿಸಿ ಮತ್ತು ಒಣಗಿದ ನಂತರ ನೀರಿನಿಂದ ತೊಳೆಯಿರಿ.
ಮುಲ್ತಾನಿ ಮಿಟ್ಟಿ ಮತ್ತು ಆಮ್ಲಾ (Multani Mitti And Amla For Hair Fall)
ನೀವು ಮುಲ್ತಾನಿ ಮಿಟ್ಟಿಯನ್ನು ಆಮ್ಲಾದೊಂದಿಗೆ ಬೆರೆಸಿದರೆ ಅದು ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಯ ತುರಿಕೆಯನ್ನು ಸಹ ನಿವಾರಿಸುತ್ತದೆ. ಹೇರ್ ಮಾಸ್ಕ್ ತಯಾರಿಸಲು, ನೀವು ಮುಲ್ತಾನಿ ಮಿಟ್ಟಿಯಲ್ಲಿ ಆಮ್ಲಾ, ಶಿಕಾಕಾಯಿ, ರೀತಾ ಮತ್ತು ನೀರನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು. ಈ ಹೇರ್ ಮಾಸ್ಕ್ ಅನ್ನು ಕೂದಲಿನ ಮೇಲೆ 30-40 ನಿಮಿಷಗಳ ಕಾಲ ಇರಿಸಿ. ಒಣಗಿದ ನಂತರ, ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಇದನ್ನೂ ಓದಿ-Lemon Water: ಈ ಐದು ಜನ ಮರೆತೂ ಕೂಡ ನಿಂಬೆ ನೀರು ಸೇವಿಸಬಾರದು, ಆರೋಗ್ಯಕ್ಕೆ ಲಾಭದ ಬದಲು ಹಾನಿಯುಂಟಾಗುತ್ತದೆ!
ಮುಲ್ತಾನಿ ಮಿಟ್ಟಿ ಮತ್ತು ಹಾಲು (Multani Mitti And Milk For Hair Fall)
ನೆತ್ತಿಯಲ್ಲಿ ಹೆಚ್ಚಿದ ಶುಷ್ಕತೆಯಿಂದಾಗಿ ಕೂದಲು ಕೂಡ ದುರ್ಬಲವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಮುಲ್ತಾನಿ ಮಿಟ್ಟಿಯನ್ನು ಹಾಲಿನೊಂದಿಗೆ ಬೆರೆಸಬಹುದು. ಹಾಲು ನಿಮ್ಮ ನೆತ್ತಿಯನ್ನು ತೇವಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮುಲ್ತಾನಿ ಮಿಟ್ಟಿ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಈ ಮಿಶ್ರಣವು ಕೂದಲನ್ನು ಮೃದುವಾಗಿ ಮತ್ತು ನಯವಾಗಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ-Weight Loss: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಎರಡೂ ಪದಾರ್ಥಗಳನ್ನು ಏಕಕಾಲಕ್ಕೆ ಸೇವಿಸಿ!
(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ