ಬೆಂಗಳೂರು : ದೀಪಾವಳಿ ಹಿಂದೂಗಳ ಪಾಲಿನ ದೊಡ್ಡ ಹಬ್ಬ. ಬೆಳಕಿನ ಹಬ್ಬಕಾಗಿ ಪ್ರತಿಯೊಬ್ಬರೂ ಕಾತುರದಿಂದ ಕಾಯುತ್ತಿರುತ್ತಾರೆ. ನರಕ ಚತುರ್ದಶಿಯ ಮೊದಲ ದಿನ ಧನ್ವಂತರಿ ದೇವರನ್ನು ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಈ ಬಾರಿ ಧನ್ತೇರಸ್ ಹಬ್ಬವು ಅಕ್ಟೋಬರ್ 23 ರಂದು ಬರುತ್ತದೆ. ಇದೇ ದಿನ ಶನಿದೇವರ ನೇರ ನಡೆ ಆರಂಭವಾಗಲಿದೆ.  ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಹಿಮ್ಮುಖ ಚಲನೆ, ಪಥ ಬದಲಾವಣೆ ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯ ಜನರಿಗೆ ಈ ಸಮಯವು ತುಂಬಾ ಮಂಗಳಕರವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಶನಿಯ ಪಥ ಬದಲಾವಣೆ ಶುಭಕರವಾಗಿರುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತಿವೆ.  ವಿದೇಶ ಪ್ರವಾಸದ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯ  ಸೂಕ್ತವಾಗಿರುತ್ತದೆ. 


ಇದನ್ನೂ ಓದಿ : Cheek Astrology: ಕೆನ್ನೆಯ ಆಕಾರದಲ್ಲಿ ತಿಳಿಯಬಹುದು ನಿಮ್ಮ ಶ್ರೀಮಂತಿಕೆಯ ರಹಸ್ಯ!


ಮಿಥುನ ರಾಶಿ : ಶನಿಯ ಪಥ ಬದಲಾವಣೆ ಮತ್ತು ಕುಬೇರ ದೇವನ ಆಶೀರ್ವಾದವು ಈ  ರಾಶಿಯವರ ಮೇಲೆ ಹೆಚ್ಚೇ ಇರಲಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಈ ರಾಶಿಯವರ ಮೇಲೆ ಹಣದ ಮಳೆ ಸುರಿಯಲಿದೆ ಎಂದೇ ಹೇಳಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ವೇತನ ಹೆಚ್ಚಾಗಬಹುದು. ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದರೆ, ಯಶಸ್ವಿಯಾಗಬಹುದು. 


ಸಿಂಹ ರಾಶಿ : ಈ ಸಮಯವು ಈ ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಹಠಾತ್ ಹಣದ ಲಾಭವಾಗಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ಯುವಕರಿಗೂ ಈ ಸಮಯ ಫಲಪ್ರದವಾಗಲಿದೆ. ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯ ಸರಿಯಾಗಿದೆ. ಶನಿದೇವನ ಕೃಪೆಯಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ಆಸ್ತಿಯಲ್ಲಿ ಹೂಡಿಕೆ ಕೂಡ ಮಾಡಬಹುದು. 


ಇದನ್ನೂ ಓದಿ : Vastu for Home Temple: ಮನೆಯ ಈ ಭಾಗದಲ್ಲಿ ದೇವರ ಕೋಣೆ ಇದ್ದರೆ ಅಭಿವೃದ್ಧಿ-ಅಂತಸ್ತು ಹೆಚ್ಚಾಗೋದು ಖಂಡಿತ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.