Husband Wife: ಗಂಡ ಮನೆಯಲ್ಲಿ ಯಾವಾಗಲೂ ಗುಟ್ಕಾ ಇಟ್ಟಿರುತ್ತಿದ್ದ. ಸಮಯ ಕಳೆದಂತೆ ಗಂಡ ಇಟ್ಟಿದ್ದ ಗುಟ್ಕಾವನ್ನು ಹೆಂಡತಿ ಸೇವಿಸುವ ಹವ್ಯಾಸ ಮಾಡಿಕೊಂಡಳು. ಕ್ರಮೇಣ ಹೆಂಡತಿ ಗುಟ್ಕಾ ಸೇವೆನೆಯನ್ನು ಬಿಟ್ಟಿರಲಾರದಾದಳು. 


COMMERCIAL BREAK
SCROLL TO CONTINUE READING

ಗುಟ್ಕಾ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗುಟ್ಕಾ ಸೇವೆನೆಯಿಂದ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳು ಸಹ ಉದ್ಭವಿಸುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುತ್ತವೆ. ಆದರೆ ಇದು ಗುಟ್ಕಾ ಸೇವೆಯನೆಯಿಂದ ಉಂಟಾಗಿರುವ ವಿಭಿನ್ನ ಪ್ರಕರಣ. ಗುಟ್ಕಾ ಸೇವಿಸುವ ಅಭ್ಯಾಸದಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವ ಪ್ರಕರಣ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. 


ಆಗ್ರಾದ ಈ ನಿವಾಸಿಗಳು 2022ರಲ್ಲಿ ವಿವಾಹವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿಗೆ ಗುಟ್ಕಾ ತಿನ್ನುವ ಚಟ ಇತ್ತು. ಎಲ್ಲಾ ಹೆಂಡತಿಯರಂತೆ ಆರಂಭದಲ್ಲಿ ಪತಿಯ ಗುಟ್ಕಾ ಸೇವಿಸುವ ಚಟವನ್ನು ಪತ್ನಿ ವಿರೋದಿಸಿದಳು. ಆದರೂ ಏನೂ ಪ್ರಯೋಜನ ಆಗಲಿಲ್ಲ. ಪತಿ ಗುಟ್ಕಾ ತಿನ್ನುವ ಅಭ್ಯಾಸವನ್ನು ಬಿಡಲಿಲ್ಲ. ಆದರೂ ಸಂಬಂಧ ಚೆನ್ನಾಗಿಯೇ ಇತ್ತು.


ಸ್ವಲ್ಪ ದಿನಗಳ ಬಳಿಕ ಪತಿ ಗುಟ್ಕಾವನ್ನು ಮನೆಗೆ ತರಲು ಆರಂಭಿಸಿದ. ಮನೆಯಲ್ಲಿ ಇಡಲು ಆರಂಭಿಸಿದ. ಕ್ರಮೇಣ ಪತಿಗೆ ಗುಟ್ಕಾ ತಿನ್ನುವುದನ್ನು ನಿಲ್ಲಿಸು ಎಂದು ಪೀಡಿಸುತ್ತಿದ್ದ ಪತ್ನಿಯೇ ಮನೆಯಲ್ಲಿ ಗಂಡ ಇಟ್ಟಿದ್ದ ಗುಟ್ಕಾವನ್ನು ಸೇವೆಸಲು ಆರಂಭಿಸಿದಳು. ಕುತೂಹಲಕ್ಕಾಗಿ ಪತ್ನಿ ಆರಂಭಿಸಿದ ಗುಟ್ಕಾ ಸೇವೆನೆ ಕ್ರಮೇಣ ಅಭ್ಯಾಸವೇ ಆಗಿಹೋಯಿತು.


ಆಗ ಗುಟ್ಕಾ ತಿನ್ನುವುದನ್ನು ನಿಲ್ಲಿಸು ಎಂದು ಹೇಳುವ ಸರದಿ ಗಂಡನದಾಯಿತು. ಹೆಂಡತಿ ಬಳಿ ಗುಟ್ಕಾ ತಿನ್ನುವುದನ್ನು ನಿಲ್ಲಿಸು ಎಂದು ಗಂಡ ಪರಿ ಪರಿಯಾಗಿ ಬೇಡಿಕೊಂಡ. ಪ್ರಯೋಜನ ಆಗಲಿಲ್ಲ. ಕಡೆಗೆ ಇದೇ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳ ಶುರುವಾಯಿತು. ಕುಟುಂಬಸ್ಥರು-ಹಿರಿಯರು ರಾಜಿ ಮಾಡಲು ಮುಂದಾದರು. ಆದರೂ ಸಮಸ್ಯೆ ಬಗೆಹರಿಯಲಿಲ್ಲ. ಮುಂದೇನಾಯಿತು ಎನ್ನುವುದು ಇನ್ನೂ ಇಂಟರೆಸ್ಟಿಂಗ್. 


ಹೆಂಡತಿ ಹತ್ರ ಗುಟ್ಕಾ ತಿನ್ನುವುದನ್ನು ನಿಲ್ಲಿಸು ಅಂತಾ ಗೋಗರೆದು, ಭೋರ್ಗರೆದು ಸುಸ್ತಾದ ಗಂಡ ಒಂದು ದಿನ ಇದ್ದಕ್ಕಿದ್ದಂತೆ ಪತ್ನಿಯನ್ನು ಆಕೆಯ ತಾಯಿಯ ಮನೆಗೆ ಕರೆದೊಯ್ದು ಬಿಟ್ಟವನೆ ಮತ್ತೆ ವಾಪಸ್ ಕರತರಲಿಲ್ಲ. ಹೆಂಡತಿ ಕೇಳಿಕೊಂಡರೂ ಗಂಡನ ಮನ ಕರಗಲಿಲ್ಲ. ಇದರಿಂದ ಕೋಪಗೊಂಡ ಹೆಂಡತಿ ನೇರವಾಗಿ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಪತಿ-ಪತ್ನಿಯರ ನಡುವೆ ಇದ್ದ ಪೀಕಲಾಟ ಪೊಲೀಸರಿಗೂ ವ್ಯಾಪಿಸಿತು. ಕೌಟುಂಬಿಕ ವಿಚಾರವಾಗಿದ್ದರಿಂದ ಪೊಲೀಸರು ಇಬ್ಬರಿಗೂ ಕೌನ್ಸಿಲಿಂಗ್ ಮಾಡಲು ನಿರ್ಧರಿಸಿದರು. 


ಪತಿ ಮತ್ತು ಪತ್ನಿ ಇಬ್ಬರನ್ನೂ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಕಳುಹಿಸಿ ಕೌನ್ಸಲಿಂಗ್ ನಡೆಸಲಾಯಿತು. ಕೌನ್ಸೆಲಿಂಗ್ ವೇಳೆ ಇಬ್ಬರೂ ತಮ್ಮ ತಮ್ಮ ದೂರುಗಳನ್ನು ದಾಖಲಿಸಿದ್ದಾರೆ. ಪದೇ ಪದೇ ನಿರಾಕರಿಸಿದರೂ ಪತ್ನಿ ಗುಟ್ಕಾ ತಿನ್ನುತ್ತಾಳೆ ಎಂದು ಪತಿ ಹೇಳಿದ್ದಾನೆ. ಈ ಬಗ್ಗೆ ಪತ್ನಿ ಸ್ವಲ್ಪ ಗುಟ್ಕಾ ಮಾತ್ರ ತಿನ್ನುತ್ತೇನೆ ಎಂದು ಸಮಾಜಾಯಿಷಿ ನೀಡಿದ್ದಾಳೆ. ಇವರನ್ನು ಕೌನ್ಸಿಲಿಂಗ್ ಮಾಡಿದ ಆಪ್ತಸಮಾಲೋಚಕ ಡಾ. ಸತೀಶ್ ಖೀರವಾರ್ ಅವರು ಇಬ್ಬರೂ ಗುಟ್ಕಾ ತಿನ್ನುವುದನ್ನು ಬಿಟ್ಟುಬಿಡಿ ಎಂದು ಸಲಹೆ ನೀಡಿದ್ದಾರೆ. ಇಬ್ಬರೂ ‘ಇನ್ನು ಮುಂದೆ ಗುಟ್ಕಾ ಸೇವಿಸುವುದಿಲ್ಲ’ ಎಂದು ಆಪ್ತಸಮಾಲೋಚಕರ ಎದುರು ಹೇಳಿದ್ದಾರೆ. ಈ ಮೂಲಕ ಈ ಪ್ರಕರಣ ಸುಖಾಂತವನ್ನು ಕಂಡಿದೆ ಎಂದು ತಿಳಿದುಬಂದಿದೆ.


‘ಗುಟ್ಕಾ ಸೇವನೆಯಿಂದ ಕೂದಲು ಉದುರುತ್ತಿದೆ’
ಬಹಳ ಅಚ್ಚರಿಯ ಬೆಳವಣಿಗೆ ಏನೆಂದರೆ ಇದೇ ವರ್ಷದ ಮೇ ತಿಂಗಳಲ್ಲಿ ಇದೇ ಆಗ್ರಾದಲ್ಲಿ ಇಂತಹದ್ದೇ ದಂಪತಿಗಳ ಗುಟ್ಕಾ ಸೇವನೆ ಪ್ರಕರಣ ವರದಿಯಾಗಿತ್ತು. ‘ಗುಟ್ಖಾ ಸೇವನೆಯಿಂದ ಪತ್ನಿಯ ಕೂದಲು ಉದುರುತ್ತಿದೆ, ಆಕೆಯ ಸೌಂದರ್ಯ ಕ್ಷೀಣಿಸುತ್ತಿದೆ, ಈ ಕಾರಣದಿಂದಾಗಿ ಜನರು ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಆಕೆಗೆ ಗುಟ್ಕಾ ತಿನ್ನುವುದನ್ನು ಬಿಡು ಎಂದರೆ ಕೇಳುತ್ತಿಲ್ಲ. ನೀವು ಕ್ರಮ ಕೈಗೊಳ್ಳಿ’ ಎಂದು ಪೊಲೀಸರಿಗೆ ದೂರು ನೀಡಿದ್ದ. 


ಆಗಲೂ ಆಗ್ರಾ ಪೊಲೀಸರು ಗಂಡ-ಹೆಂಡತಿಯರಿಬ್ಬರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಪ್ರಕರಣ ಪೊಲೀಸ್ ಠಾಣೆಯಲ್ಲಿ ಬಗೆಹರಿಯದೆ ಪತಿ-ಪತ್ನಿಯರನ್ನು ಕೌನ್ಸೆಲಿಂಗ್‌ಗೆ ಕಳುಹಿಸಿದ್ದರು. ಕೌನ್ಸಿಲಿಂಗ್ ವೇಳೆ ಆಪ್ತಸಮಾಲೋಚಕರು ಗುಟ್ಕಾ ಸೇವನೆಯಿಂದ ಅರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಮತ್ತು ಮಾನಸಿಕ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು. ಬಳಿಕ ಗುಟ್ಕಾ ಸೇವನೆ ತ್ಯಜಿಸುವ ನಿರ್ಧಾರಕ್ಕೆ ಬಂದು ತಮ್ಮ ದಾಂಪತ್ಯದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.