Relationship Advice: ಗಂಡ-ಹೆಂಡತಿ ಬೇರೆ ಬೇರೆ ಹಾಸಿಗೆಗಳ ಮೇಲೆ ಮಲಗಿದರೆ ಅದರಿಂದ ಅವರಿಗೆ ಅನೇಕ ಪ್ರಯೋಜನಗಳಿವೆ. ಪ್ರತಿ 4 ಜೋಡಿಗಳಲ್ಲಿ 1 ದಂಪತಿ ಜೋಡಿ ವಿಭಿನ್ನ ಹಾಸಿಗೆಗಳ ಮೇಲೆ ಮಲಗುತ್ತಾರೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. 2017 ರಲ್ಲಿ ನ್ಯಾಷನಲ್ ಸ್ಲಿಪ್ ಫೌಂಡೇಶನ್‌ನ ಸಮೀಕ್ಷೆಯು ವಿವಿಧ ಹಾಸಿಗೆಗಳ ಮೇಲೆ ಮಲಗುವ ಪತಿ-ಪತ್ನಿಯರ ನಡುವಿನ ಬಾಂಧವ್ಯ ಉತ್ತಮವಾಗಿರುತ್ತದೆ ಎಂದು ಹೇಳಿದೆ. ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇಂತಹ ದಂಪತಿಗಳು ತಮ್ಮ ಜೀವನವನ್ನು ಉತ್ತಮಗೊಳಿಸುತ್ತಾರೆ ಮತ್ತು ಅವರ ಜೀವನವು ಒಟ್ಟಿಗೆ ಮಲಗುವ ದಂಪತಿ ಜೋಡಿಗಳ ಜೀವನಕ್ಕಿಂತ  ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಎಂದು ಸಂಶೋಧನೆ ಹೇಳಿದೆ.


COMMERCIAL BREAK
SCROLL TO CONTINUE READING

ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ
ಮೊದಲನೆಯದು ಗಂಡ ಹೆಂಡತಿ ಬೇರೆ ಬೇರೆಯಾಗಿ ಮಲಗುವುದು ತಪ್ಪಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ವೈಯಕ್ತಿಕ ಜೀವನದಲ್ಲಿ ಸ್ವಾತಂತ್ರ್ಯ ಬೇಕು ಎಂದು ಬಯಸುತ್ತಾನೆ. ದಂಪತಿಗಳ ವೈಯಕ್ತಿಕ ಸಂಬಂಧ ಹೇಗಿರುತ್ತದೆ ಮತ್ತು ಅವರು ಈ ಸಂಬಂಧದಲ್ಲಿ ಹೇಗೆ ಬದುಕಲು ಇಷ್ಟಪಡುತ್ತಾರೆ ಎಂಬುದು ಆಯಾ ಜೋಡಿಗಳ ಮೇಲೆ  ಅವಲಂಬಿಸಿರುತ್ತದೆ. ಹೇಗಾಗಿ ಪ್ರತ್ಯೇಕವಾಗಿ ಮಲಗುವುದರಿಂದ ಕೂಡ ಅನೇಕ ಪ್ರಯೋಜನಗಳಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದರಿಂದ ಯಾವುದೇ ಹಾನಿ ಇಲ್ಲ. ಗಂಡ ಹೆಂಡತಿ ಬೇರೆ ಬೇರೆಯಾಗಿ ಮಲಗಿದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದಲ್ಲ. ಹಾಗೆ ಯೋಚಿಸುವುದು ಸಂಪೂರ್ಣವಾಗಿ ತಪ್ಪು.


ಇಬ್ಬರಿಗೂ ಒಳ್ಳೆಯ ನಿದ್ದೆ ಬರುತ್ತದೆ
ದಂಪತಿಗಳು ಪ್ರತ್ಯೇಕವಾಗಿ ಮಲಗಿದರೆ, ರಾತ್ರಿಯಲ್ಲಿ ಅವರು ಚೆನ್ನಾಗಿ ನಿದ್ರೆ ಮಾಡುತ್ತಾರೆ. ಅಡಚಣೆ ಕಡಿಮೆ ಇರುತ್ತದೆ. ಸಂಗಾತಿ ರಾತ್ರಿಯಲ್ಲಿ ಟಿವಿ ವೀಕ್ಷಿಸಲು ಅಥವಾ ಕಚೇರಿ ಕೆಲಸ ಮಾಡಲು ಬಯಸಿದರೆ, ಅವನು ಅದನ್ನು ಸಹ ಮಾಡಬಹುದು. ದೈಹಿಕ ಅನ್ಯೋನ್ಯತೆ ಹಾಗೂ ಭಾವನಾತ್ಮಕ ಅನ್ಯೋನ್ಯತೆಯ ಅವಶ್ಯಕತೆ ಯಾವಾಗಲೂ ಇದ್ದೆ ಇರುತ್ತದೆ.


ಇದನ್ನೂ ಓದಿ-ನಿದ್ರಾಹೀನತೆ ಸಮಸ್ಯೆಗೆ ರಾಮಬಾಣ ಈ ಸ್ಪೆಷಲ್ ಚಹಾ, ಒಮ್ಮೆ ಟ್ರೈ ಮಾಡಿ ನೋಡಿ


ಲೈಂಗಿಕ ಜೀವನ ಉತ್ತಮವಾಗುತ್ತದೆ
ಪ್ರತ್ಯೇಕವಾಗಿ ಮಲಗುವ ದಂಪತಿಗಳು ಉತ್ತಮ ಲೈಂಗಿಕ ಜೀವನವನ್ನು ಹೊಂದಿರುತ್ತಾರೆ. ಸಂಶೋಧನೆಯ ಪ್ರಕಾರ, ಯಾವ ದಂಪತಿಗಳು ಪರಸ್ಪರ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುತ್ತಾರೆ, ಅವರ ಲೈಂಗಿಕ ಜೀವನವು ಉತ್ತಮವಾಗಿರುತ್ತದೆ. ಮೊದಲನೆಯದಾಗಿ, ಅವರಿಗೆ ಅದು ಕಿರಿಕಿರಿಯುಂಟುಮಾಡುವುದಿಲ್ಲ ಮತ್ತು ದಣಿದಂತೆ ಎನಿಸುವುದಿಲ್ಲ. ದೈಹಿಕ ಸಮಸ್ಯೆಗಳಿಗೂ ಇದು ಒಳ್ಳೆಯದು. ಅನೇಕ ಬಾರಿ ಮಹಿಳೆಯರು ತಮ್ಮ ದೇಹದ ಬಗ್ಗೆ ಅನಾನುಕೂಲತೆಯನ್ನು ಅನುಭವಿಸುತ್ತಾರೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ಏಕಾಂತದಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದು  ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದೇ ಕಾರಣದಿಂದ ಕೆಲವೊಮ್ಮೆ ಒಂಟಿಯಾಗಿಯೇ ಮಲಗಬೇಕು.


ಇದನ್ನೂ ಓದಿ-ನೀವು ಮಲಗುವ ಶೈಲಿ ನಿಮ್ಮ ವ್ಯಕ್ತಿತ್ವದ ಗುಟ್ಟು ಬಹಿರಂಗಪಡಿಸುತ್ತದೆ... ಎಚ್ಚರ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.