Money remedies: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ಈಗಲೇ ಈ ಕೆಲಸ ಮಾಡಿ
ಹಣದ ಜ್ಯೋತಿಷ್ಯ ಪರಿಹಾರಗಳು: ನೀವು ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಬಯಸಿದರೆ ಈ ತೆಂಗಿನಕಾಯಿ ಪರಿಹಾರವು ನಿಮಗೆ ಪರಿಣಾಮಕಾರಿ. ಸಂಪತ್ತಿಗೆ ತೆಂಗಿನಕಾಯಿ ಮದ್ದು ಏನು ಅನ್ನೋದರ ಬಗ್ಗೆ ತಿಳಿಯಿರಿ.
ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ನೀವು ತೊಂದರೆಗೀಡಾಗಿದ್ದೀರಾ? ಎಷ್ಟೇ ಹಣ ಸಂಪಾದಿಸುತ್ತಿದ್ದರೂ ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ನಿಮಗೆ ಬಡಪಾಯಿಯ ಸ್ಥಿತಿ ಬಂದಿದ್ಯಾ? ಸಂಪಾದನೆಯ ಹೊರತಾಗಿಯೂ ಇತರರ ಮುಂದೆ ಕೈ ಚಾಚಬೇಕಾದ ಪರಿಸ್ಥಿತಿ ಇದೆಯೇ? ಈ ಎಲ್ಲಾ ಸಮಸ್ಯೆಗಳಿಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.
ಈ ಒಂದೇ ಒಂದು ಕೆಲಸವನ್ನು ಮಾಡುವುದರಿಂದ ನೀವು ಸುಲಭವಾಗಿ ಶ್ರೀಮಂತರಾಗುತ್ತೀರಿ. ನೀವು ಎಷ್ಟೇ ತೊಂದರೆಯಲ್ಲಿದ್ದರೂ ಹಣದ ಸಮಸ್ಯೆ ನಿಮ್ಮನ್ನು ಕಾಡವುದಿಲ್ಲ. ಇದಕ್ಕೆ ನೀವು ಹೆಚ್ಚೇನೂ ಮಾಡಬೇಕಿಲ್ಲ. ಒಂದು ತೆಂಗಿನಕಾಯಿಯನ್ನು ಮನೆಗೆ ತಂದು ಅದರ ಪರಿಹಾರ ಮಾಡಿ. ಇದರೊಂದಿಗೆ ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಯ ಆಶೀರ್ವಾದವು ನಿಮಗೆ ಸಿಗುತ್ತದೆ. ನೀವು ಬೇಗನೆ ಶ್ರೀಮಂತರಾಗುತ್ತೀರಿ. ತೆಂಗಿನಕಾಯಿಯ ಈ ಪರಿಹಾರದ ಬಗ್ಗೆ ತಿಳಿಯಿರಿ.
ಇದನ್ನೂ ಓದಿ: Shani Dashmi Drishti : ಈ ರಾಶಿಗಳ ಮೇಲೆ ಬೀಳಲಿದೆ ಶನಿಯ ಕೃಪೆ... ಬದಲಾಗುತ್ತೆ ನಿಮ್ಮ ಅದೃಷ್ಟ..!
ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ!
ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಶುಭ ಕಾರ್ಯಕ್ರಮದ ಪೂಜೆಯ ಸಮಯದಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಲಕ್ಷ್ಮಿದೇವಿಗೆ ತೆಂಗಿನಕಾಯಿ ತುಂಬಾ ಇಷ್ಟವೆಂದು ನಂಬಲಾಗಿದೆ. ತೆಂಗಿನಕಾಯಿಯ ಈ ಪರಿಹಾರವು ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ. ನೀವು ದುಡಿದ ಹಣ ನಿಮ್ಮ ಜೇಬಿನಲ್ಲಿಯೇ ಇರುತ್ತದೆ.
ಸುಖ-ಸಂಪತ್ತಿಗೆ ಹೀಗೆ ಮಾಡಿ
ಸಂಪತ್ತಿನ ಈ ಪರಿಹಾರಕ್ಕಾಗಿ ಮೊದಲು ಒಂದು ತೆಂಗಿನಕಾಯಿಯನ್ನು ತೆಗೆದುಕೊಳ್ಳಿ. ಅದರೊಂದಿಗೆ ಕಮಲದ ಹೂವು, ಮೊಸರು, ಬಿಳಿ ಬಟ್ಟೆ ಮತ್ತು ಬಿಳಿ ಸಿಹಿತಿಂಡಿಗಳನ್ನು ತೆಗೆದುಕೊಳ್ಳಿ. ನಂತರ ಅದನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿಗೆ ಅರ್ಪಿಸಿ. ಇದರ ನಂತರ ಕೆಂಪು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ತೆಂಗಿನಕಾಯಿ ಕಟ್ಟಿಕೊಳ್ಳಿ. ನಂತರ ಅದನ್ನು ಮನೆಯಲ್ಲಿ ಯಾರೂ ನೋಡದಂತಹ ಸ್ಥಳದಲ್ಲಿ ಇರಿಸಿ.
ಇದನ್ನೂ ಓದಿ: Shani Dosh: ಶನಿಯ ಸಾಡೆಸಾತಿಯಿಂದ ಮುಕ್ತಿ ಪಡೆಯಬೇಕೇ? ಈ ಉಪಾಯ ಟ್ರೈಮಾಡಿ ನೋಡಿ!
ಮನೆಯ ಮೇಲಿನ ಕೆಟ್ಟಕಣ್ಣು ದೂರವಾಗುತ್ತದೆ
ಇದಲ್ಲದೇ ನಿಮ್ಮ ಮನೆಯ ಮೇಲೆ ದುಷ್ಟ ಕಣ್ಣು ಇದ್ದರೂ ತೆಂಗಿನಕಾಯಿ ಮದ್ದು ಕೂಡ ಮಾಡಬಹುದು. ಇದಕ್ಕಾಗಿ ತೆಂಗಿನಕಾಯಿಗೆ ಕಾಜಲ್ ತಿಲಕವನ್ನು ಹಚ್ಚಿ ಮತ್ತು ಅದನ್ನು ತೆಗೆದುಕೊಂಡು ನದಿಯಲ್ಲಿ ಹರಿಬಿಡಿ. ಇದು ಮನೆಯ ಮೇಲೆ ಉಂಟಾಗುವ ಕೆಟ್ಟದೃಷ್ಟಿಯನ್ನು ತೆಗೆದುಹಾಕುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.