Multan Mitti Face Pack: ಮುಲ್ತಾನಿ ಮಿಟ್ಟಿಯನ್ನು ಅನಾದಿ ಕಾಲದಿಂದಲೂ ಚರ್ಮದ ಆರೈಕೆಯಲ್ಲಿ ಸೇರಿಸಲಾಗಿದೆ. ಇದು ನಿಮ್ಮ ಚರ್ಮವನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ನಿಮ್ಮ ಡೆಡ್ ಸ್ಕಿನ್ ಸಹ ಸುಲಭವಾಗಿ ತೆಗೆಯಲ್ಪಡುತ್ತದೆ. ಇದರಿಂದಾಗಿ ನಿಮ್ಮ ಮೈಬಣ್ಣವೂ ಸುಧಾರಿಸುತ್ತದೆ. ಅದಕ್ಕಾಗಿಯೇ ಇಂದು ನಾವು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಮಾಡುವ ವಿಧಾನವನ್ನು ನಿಮಗೆ ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಮುಲ್ತಾನಿ ಮಿಟ್ಟಿಯೊಂದಿಗೆ ಅಲೋವೆರಾ ಜೆಲ್ ಅನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ನಿಮ್ಮ ಚರ್ಮಕ್ಕೆ ಗುಲಾಬಿ ಹೊಳಪನ್ನು ನೀಡುತ್ತದೆ. ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವುದರಿಂದಾಗುವ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ.


ಇದನ್ನೂ ಓದಿ: Egg Side Effects : ಮೊಟ್ಟೆ ಜೊತೆ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನು!


ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಮಾಡಲು ಬೇಕಾಗುವ ಸಾಮಾಗ್ರಿಗಳು-


  • ಮುಲ್ತಾನಿ ಮಿಟ್ಟಿ

  • ಅಲೋವೆರಾ ಜೆಲ್

  • ರೋಸ್ ವಾಟರ್


ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಮಾಡುವುದು ಹೇಗೆ?


  • ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಮಾಡಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ.

  • ನಂತರ ಅದಕ್ಕೆ ಮುಲ್ತಾನಿ ಮಿಟ್ಟಿ, ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಸೇರಿಸಿ

  • ನಂತರ ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

  • ಸಿದ್ಧಪಡಿಸಿದ ಫೇಸ್ ಮಾಸ್ಕ್ ನ್ನು ಹಚ್ಚುವ ಮೊದಲು ಚೆನ್ನಾಗಿ ಮುಖವನ್ನು ತೊಳೆಯಿರಿ

  • ಇದರ ನಂತರ, ಅದನ್ನು ನಿಮ್ಮ ಸಂಪೂರ್ಣ ಮುಖಕ್ಕೆ ಚೆನ್ನಾಗಿ ಹಚ್ಚಿರಿ.

  • ಮುಖದ ಮೇಲೆ ಸುಮಾರು 15 ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ: Diabetes: ರಕ್ತದಲ್ಲಿನ ಸಕ್ಕರೆ ಮಟ್ಟ ಕಂಟ್ರೋಲ್‌ನಲ್ಲಿಡುತ್ತೆ ಈ ವಿಶೇಷ ಚಹಾ


ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾ ಜೆಲ್‌ನ ಪ್ರಯೋಜನಗಳು:


ಫೇಸ್ ಪ್ಯಾಕ್ ನಿಮ್ಮ ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸುತ್ತದೆ. ಇದರೊಂದಿಗೆ ನಿಮ್ಮ ಮೈಬಣ್ಣವೂ ಸುಧಾರಿಸುತ್ತದೆ. ಇದು ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಸಣ್ಣ ವಯಸ್ಸಿನವರಂತೆ ಕಾಣುತ್ತದೆ. ಈ ಫೇಸ್ ಪ್ಯಾಕ್ ನಿಮ್ಮ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ನಿಮ್ಮ ಕಪ್ಪು ಕತ್ತಿನ ಸಮಸ್ಯೆಯನ್ನೂ ಹೋಗಲಾಡಿಸುತ್ತದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತದೆ.  ಈ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ಮುಖದ ಡೆಡ್ ಸ್ಕಿನ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಿಮಗೆ ಮೃದುವಾದ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.


(ಸೂಚನೆ: ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.