ಹಸ್ತದಲ್ಲಿ ಈ ರೇಖೆಯಿದ್ದರೆ ಆಗಲಿದೆ ಹಠಾತ್ ಧನಲಾಭ, ಪ್ರಯಾಣದ ಸಮಯದಲ್ಲಿ ಮೂಡುತ್ತದೆ ಪ್ರೀತಿ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಸ್ತದ ಚಂದ್ರ ಪರ್ವತವು ಹಠಾತ್ ಆರ್ಥಿಕ ಲಾಭ ಮತ್ತು ವಿದೇಶಿ ಪ್ರಯಾಣವನ್ನು ತೋರಿಸುತ್ತದೆ.
ನವದೆಹಲಿ : ವ್ಯಕ್ತಿಯ ಭವಿಷ್ಯವನ್ನು ಊಹಿಸಲು ಹಸ್ತರೇಖೆಗಳು (Palmistry), ಪರ್ವತಗಳು ಮತ್ತು ವಿಶೇಷ ಚಿಹ್ನೆಗಳನ್ನು ಗುರುತಿಸಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಸ್ತದ ಚಂದ್ರ ಪರ್ವತವು ಹಠಾತ್ ಆರ್ಥಿಕ ಲಾಭ ಮತ್ತು ವಿದೇಶಿ ಪ್ರಯಾಣವನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎಷ್ಟು ಹಣವನ್ನು ಗಳಿಸುತ್ತಾನೆ ಅಥವಾ ಪ್ರಯಾಣದ ಸಮಯದಲ್ಲಿ ವ್ಯಕ್ತಿಯು ಯಾವ ಪ್ರಯೋಜನವನ್ನು ಪಡೆಯುತ್ತಾನೆ ಎನ್ನುವುದನ್ನು ಕೈಯಲ್ಲಿರುವ ಚಂದ್ರ ಪರ್ವತ ಹೇಳುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ಪ್ರಯಾಣದ ರೇಖೆಯು ಚಂದ್ರ ಪರ್ವತವನ್ನು ಬಿಟ್ಟು ಗುರು ಪರ್ವತಕ್ಕೆ ಹೋದರೆ, ವ್ಯಕ್ತಿಗೆ ದೀರ್ಘಾವಧಿಯವರೆಗೆ ವಿದೇಶ ಪ್ರಯಾಣ ಯೋಗ ಇರುತ್ತದೆ. ಮತ್ತೊಂದೆಡೆ, ಒಂದು ರೇಖೆಯು ಚಂದ್ರ ಪರ್ವತದಿಂದ ಬುಧದ ಪರ್ವತಕ್ಕೆ ಹೋದರೆ, ಪ್ರಯಾಣದ ಸಮಯದಲ್ಲಿ ಹಠಾತ್ ಹಣ ಲಾಭವಾಗುವ ಸಂಭವ ಇರುತ್ತದೆ. ಇದರ ಹೊರತಾಗಿ, ಪ್ರಯಾಣದ ರೇಖೆ ಚಂದ್ರ ಪರ್ವತವನ್ನು ಬಿಟ್ಟು ಅಂಗೈಯ ಮಧ್ಯದಲ್ಲಿ ತಿರುಗಿದರೆ, ವ್ಯಕ್ತಿಯು ವಿದೇಶದಲ್ಲಿ ಉದ್ಯೋಗ ಅಥವಾ ವ್ಯಾಪಾರವನ್ನು ಮಾದುತ್ತಿದ್ದರೂ ಬಲವಂತವಾಗಿ ತನ್ನ ತಾಯ್ನಾಡಿಗೆ ಮರಳಬೇಕಾಗುತ್ತದೆ.
ಇದನ್ನೂ ಓದಿ : ಕನಸಿನ ಮನೆ ಹೊಂದುವ ಬಯಕೆಯನ್ನು ಈಡೇರಿಸುತ್ತದೆ ಈ ಚಮತ್ಕಾರಿ ಉಪಾಯ
ಪುರುಷ ಅಥವಾ ಮಹಿಳೆಯ ಅಂಗೈಯ ಪ್ರಯಾಣದ ರೇಖೆಯು ಚಂದ್ರ ಪರ್ವತವನ್ನು ಬಿಟ್ಟು ಹೃದಯ ರೇಖೆಯನ್ನು ಭೇಟಿಯಾದರೆ, ಪ್ರಯಾಣದ ಸಮಯದಲ್ಲಿ ಪ್ರೀತಿಯ ಯೋಗವೂ ಇರುತ್ತದೆ. ಪ್ರೇಮವು ಮದುವೆಗೆ (Love marriage) ತಿರುಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಪ್ರಯಾಣದ ರೇಖೆಯಲ್ಲಿ ಅಡ್ಡ ಅಥವಾ ಚೌಕದ ಗುರುತು ಇದ್ದರೆ, ವಿದೇಶಿ ಪ್ರಯಾಣದ ಕಾರ್ಯಕ್ರಮವನ್ನು ಮಾಡಿದ ನಂತರ ಇದ್ದಕ್ಕಿದ್ದಂತೆ ಮುಂದೂಡಲಾಗುತ್ತದೆ.
ಪ್ರಯಾಣದ ರೇಖೆಯು ಚಂದ್ರ ಪರ್ವತದಿಂದ ಹೊರಬಂದು ಮಸ್ತಿಷ್ಕ ರೇಖೆಯನ್ನು ಭೇಟಿಯಾದರೆ, ನಂತರ ವ್ಯಕ್ತಿಯು ಪ್ರಯಾಣದಲ್ಲಿ ಕೆಲವು ರೀತಿಯ ವ್ಯಾಪಾರ (Business) ಒಪ್ಪಂದಕ್ಕೆ ಪ್ರವೇಶಿಸಬೇಕಾಗುತ್ತದೆ. ಮತ್ತೊಂದೆಡೆ, ಅಂಗೈಯಲ್ಲಿ ಶುಕ್ರ ಮತ್ತು ಚಂದ್ರ ಪರ್ವತವು ಮುಂದುವರಿದರೆ, ಜೀವನ ರೇಖೆಯು ಸಂಪೂರ್ಣ ಶುಕ್ರ ಪರ್ವತದ (Venus Mountain) ಮೂಲಕ್ಕೆ ಹೋಗಬೇಕು. ಅಲ್ಲದೆ, ಚಂದ್ರ ಪರ್ವತದ ಮೇಲೆ ಸ್ಪಷ್ಟವಾದ ಪ್ರಯಾಣದ ಮಾರ್ಗವಿದ್ದರೆ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಬಾರಿ ವಿದೇಶ ಪ್ರಯಾಣದ ಯೋಗ ಇರುತ್ತದೆ.
ಇದನ್ನೂ ಓದಿ : Kuber Mantra: ಮಾತೆ ಲಕ್ಷ್ಮೀ ಜೊತೆಗೆ ಈ ದೇವರನ್ನು ಆರಾಧಿಸುವುದರಿಂದ ಸಿಗುತ್ತೆ ಸಂಪತ್ತು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.