plants that repel snakes: ಕೆಲವು ರೀತಿಯ ಸಸ್ಯಗಳ ವಾಸನೆಯನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾಗಾಗಿ ಮನೆಗಳ ಬಳಿ ಆ ಗಿಡಗಳನ್ನು ಬೆಳೆಸಿದರೆ ಹಾವುಗಳು ಅವುಗಳ ಬಳಿ ಸುಳಿಯುವುದಿಲ್ಲ.. ಇದರಿಂದ ಹಾವುಗಳು ಮನೆಗೆ ನುಸುಳುವ ಸಂಭವನೀಯತೆ ಬಹುತೇಕ ಕಡಿಮೆಯಾಗುತ್ತದೆ.. 


COMMERCIAL BREAK
SCROLL TO CONTINUE READING

ಮಾರಿಗೋಲ್ಡ್ಸ್: ನಾವು ಮಾರಿಗೋಲ್ಡ್ ಗಿಡಗಳನ್ನು ಬೆಳೆಸುವುದರಿಂದ ಸುಂದರವಾದ ಗಾರ್ಡನ್‌ ಜೊತೆಗೆ ಹಾವುಗಳಿಂದ ರಕ್ಷಣೆಯೂ ಸಿಗುತ್ತದೆ.. ಈ ಹೂವುಗಳ ವಾಸನೆ ಹಾವುಗಳಿಗೆ ವಿಷದಂತೆ ಭಾಸವಾಗುತ್ತದೆ.. ಆದ್ದರಿಂದ ಹಾವುಗಳು ಅವುಗಳ ಹತ್ತಿರ ಬರುವುದಿಲ್ಲ. ಹಾಗಾಗಿ ಮನೆ ಗೇಟ್‌ಗಳ ಸುತ್ತ ಈ ಗಿಡಗಳನ್ನು ಬೆಳೆಸುವುದು ಒಳ್ಳೆಯದು.


ಇದನ್ನೂ ಓದಿ-ಕೂದಲಿಗೆ ಡೈ ಅಲ್ಲ, ಸೋರೆಕಾಯಿಯನ್ನು ಹೀಗೆ ಬಳಸಿ !ಹತ್ತೇ ನಿಮಿಷ ಸಾಕು ಬಿಳಿ ಕೂದಲು ಕಪ್ಪಾಗಲು !


ಸ್ನೇಕ್ ಪ್ಲಾಂಟ್: ಸ್ನೇಕ್ ಪ್ಲಾಂಟ್ ಅನ್ನು ಮನೆಯೊಳಗೆ ಕೂಡ ಬೆಳೆಸಬಹುದು. ಇದಕ್ಕೆ ಹೆಚ್ಚು ಸೂರ್ಯನ ಬೆಳಕು ಬೇಕಾಗಿಲ್ಲ. ಇವು ಮನೆಗಳಲ್ಲಿ ಬಹಳ ಸುಂದರವಾಗಿ ಕಾಣುತ್ತವೆ. ಇದಲ್ಲದೆ, ಈ ಸಸ್ಯಗಳು ಬೆಳೆಯಲು ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಈ ಗಿಡಗಳು ಮನೆಯಲ್ಲಿದ್ದರೆ ಹಾವುಗಳು ಮನೆ ಸುತ್ತ ಹಾಯುವುದು ಕಡಿಮೆಯಾಗುತ್ತದೆ.


ಲೆಮನ್‌ಗ್ರಾಸ್: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಲೆಮನ್ ಗ್ರಾಸ್ನ ಬಳಕೆ ಹೆಚ್ಚಾಗಿದೆ. ಈ ಔಷಧೀಯ ಸಸ್ಯವನ್ನು ಅಡುಗೆಯಲ್ಲಿ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಸಸ್ಯವು ಉತ್ತಮ ಪರಿಮಳವನ್ನು ಹೊರಸೂಸುತ್ತದೆ. ಈ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿದರೆ, ಮನೆಯ ಸುತ್ತಮುತ್ತ, ಕಿಟಕಿಗಳ ಬಳಿ ಇಟ್ಟರೆ ಹಾವು ಬರುವುದಿಲ್ಲ.


 ಸರ್ಪಗಂಧ: ಈ ಸಸ್ಯವನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಇದನ್ನು ಮನೆಯ ಸುತ್ತ ಮುತ್ತ ನೆಟ್ಟರೆ ಹಾವುಗಳು ಸೇರಿದಂತೆ ಯಾವುದೇ ಹುಳು ಹುಪ್ಪಡಿ ಮನೆಯತ್ತ ಸುಳಿಯುವುದಿಲ್ಲ..  


ಇದನ್ನೂ ಓದಿ-ಸಿಸೇರಿಯನ್ ಹೆರಿಗೆಯಾ? ದೇಹವನ್ನು ಕಾಪಾಡಿಕೊಳ್ಳಲು ಈ ಮನೆಮದ್ದುಗಳನ್ನು ಅನುಸರಿಸಿ


ಈರುಳ್ಳಿ ಮತ್ತು ಬೆಳ್ಳುಳ್ಳಿ: ಈರುಳ್ಳಿ ಮತ್ತು ಬೆಳ್ಳುಳ್ಳಿಯ ಕಟುವಾದ ವಾಸನೆಯನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾವುಗಳು ಈ ವಾಸನೆಯನ್ನು ಒಂದು ಕ್ಷಣವೂ ಸಹಿಸುವುದಿಲ್ಲ. ಹೀಗಾಗಿ ಮನೆಯ ಸುತ್ತ ಈರುಳ್ಳಿ, ಬೆಳ್ಳುಳ್ಳಿ ಗಿಡಗಳನ್ನು ನೆಟ್ಟರೆ ಹಾವು ಬರುವುದಿಲ್ಲ.. 


ಲ್ಯಾವೆಂಡರ್: ಲ್ಯಾವೆಂಡರ್ ನೋಡಲು ತುಂಬಾ ಸುಂದರವಾಗಿರುತ್ತದೆ. ಅವುಗಳಿಂದ ಬರುವ ಸುಗಂಧವೂ ಹಾಗೇ ಅಮಲೇರಿಸುತ್ತದೆ. ಆದರೆ ಹಾವುಗಳು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯ ಸಮೀಪ ಈ ಗಿಡಗಳನ್ನು ಬೆಳೆಸಿದರೆ ಹಾವುಗಳ ಭಯ ಇರುವುದಿಲ್ಲ..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews