ನವದೆಹಲಿ : ಜೀವನದಲ್ಲಿ ಸಿಗುವ ಯಶಸ್ಸು ಮತ್ತು ಎದುರಾಗುವ ವೈಫಲ್ಯ ಅನೇಕ ವಿಷಯಗಳನ್ನು ಅವಲಂಬಿತವಾಗಿರುತ್ತದೆ. ವ್ಯಕ್ತಿಯ ಶ್ರಮ, ಅದೃಷ್ಟ, ಬುದ್ಧಿವಂತಿಕೆ, ಅಭ್ಯಾಸಗಳು, ಗುಣ ಎಲ್ಲವನ್ನೂ ಇದು ಒಳಗೊಂಡಿರುತ್ತದೆ. ಇವುಗಳಲ್ಲಿ ಕೆಲವು ಗುಣಗಳು ಹುಟ್ಟಿನಿಂದಲೇ ಮನುಷ್ಯನೊಂದಿಗೆ ಬರುತ್ತದೆ. ಇನ್ನು ಕೆಲವು  ಗುಣಗಳನ್ನು ನಂತರ ಬೆಳೆಸಿಕೊಳ್ಳಬೇಕಾಗುತ್ತದೆ. ಚಾಣಕ್ಯ ನೀತಿಯಲ್ಲಿ (Chanakya Niti), ಅಂತಹ ಗುಣಗಳನ್ನು ಉಲ್ಲೇಖಿಸಲಾಗಿದೆ.  ಈ ಗುಣಗಳು ವ್ಯಕ್ತಿಯ ಎಂಥಹ ಅದೃಷ್ಟವನ್ನು ಕೂಡಾ ಬದಲಿಸಿಬಿಡಬಹುದು.  


COMMERCIAL BREAK
SCROLL TO CONTINUE READING

ಈ ಗುಣಗಳಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತಾ :  
ಈ ಕೆಲವು ಗುಣಗಳು ಇಲ್ಲದೆ ಜೀವನದಲ್ಲಿ ಯಶಸ್ವಿಯಾಗುವುದು (Success) ಅಸಾಧ್ಯ. ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಸಿಕ್ಕಿದರೆ ಅದನ್ನುಹಾಗೆಯೇ  ಕಾಪಾಡಿಕೊಳ್ಳುವುದು ಕೂಡಾ ಮುಖ್ಯ.


ಇದನ್ನೂ ಓದಿ : Astrology: ತುಂಬಾ ಬುದ್ಧಿವಂತರಂತೆ ಈ 5 ರಾಶಿಯ ಜನ, ಈ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆಯೇ; ಪರಿಶೀಲಿಸಿ


ದಾನ: 
ಇತರರು ದುಃಖದಲ್ಲಿರುವಾಗ ಅವರ ಕಷ್ಟಕ್ಕೆ ಸಹಾಯವಾಗುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ದಾನ (Donation) ಮಾಡುವ ಗುಣವು ಇತರರ ದುಃಖವನ್ನು ಅರ್ಥ ಮಾಡಿಕೊಳ್ಳಲು  ಮತ್ತು ಅವರಿಗೆ ಸಹಾಯ ಮಾಡಲು ವ್ಯಕ್ತಿಯನ್ನು ಪ್ರೇರೇಪಿಸುತ್ತದೆ. ಇತರರ ಕಷ್ಟಗ ಬಗ್ಗೆ ಯೋಚಿಸುವ ಜನರು ಯಾವಾಗಲೂ ಯಶಸ್ವಿಯಾಗುತ್ತಾರೆ. 


ದೇವರನ್ನು ಆರಾಧಿಸುವುದು : 
ದೇವರಲ್ಲಿ (God) ನಂಬಿಕೆ ಇರುವುದು, ನಂಬಿಕೆಯನ್ನು ಹೊಂದಿರುವುದು ಬಹಳ ಮುಖ್ಯ. ನಿಮ್ಮ ಗುರಿ ಏನು ಎನ್ನುವುದನ್ನು ದೇವರ ಮುಂದಿಟ್ಟು, ಅವುಗಳನ್ನು ಪೂರೈಸುವತ್ತ ಹೆಜ್ಜೆ ಹಾಕಿ. ಯಶಸ್ಸು ಖಂಡಿತಾ ನಿಮಗೆ ಒಲಿಯುತ್ತದೆ. 


ಇದನ್ನೂ ಓದಿ : ನಿಮ್ಮ ಮನೆಯಲ್ಲಿಯೂ ಈ ರೀತಿಯ ಮನಿಪ್ಲಾಂಟ್‌ ಇದೆಯಾ? ಈ ವಿಷಯಗಳ ಬಗ್ಗೆ ಇರಲಿ ಎಚ್ಚರ..! ಇಲ್ಲವಾದರೆ ನಷ್ಟ ಖಂಡಿತಾ


ತಾಳ್ಮೆ : 
ತಾಳ್ಮೆ ಮಾನವನ ಪ್ರಮುಖ ಆಭರಣ ಎಂದೇ ಹೇಳಲಾಗುತ್ತದೆ. ತಾಳ್ಮೆ ಯಾರಿಗೆ  ಇರುತ್ತದೆಯೋ ಅವರು ಜೀವನದ  ಕಷ್ಟದ ಸನ್ನಿವೇಶಗಳನ್ನು ಮೀರಿ ಮುಂದೆ ಬರುತ್ತಾರೆ. ಆದರೂ,  ತಾಳ್ಮೆಯಿಂದಿರುವ ಸಾಮರ್ಥ್ಯ ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾಗಿರುತ್ತದೆ. 


ಸಿಹಿಯಾಗಿ ಮಾತನಾಡುವುದು: 
ನಮಗೆ  ಇಷ್ಟವಿಲ್ಲದಿರುವ ಮಾತನ್ನು ಕೇಳಿದಾಗ, ಅಥವಾ ನಮ್ಮ ಇಷ್ಟಕ್ಕೆ ವಿರುದ್ಧವಾಗಿ ಏನಾದರೂ ನಡೆದಾಗ, ಜನ ಅತಿಯಾಗಿ ಕೋಪಗೊಳ್ಳುತ್ತಾರೆ. ಕೆಲವರು ಈರೀತಿ ಕೋಪಗೊಂಡಾಗಲೂ ಕೆಟ್ಟದ್ದನ್ನು ಮಾತನಾಡುವುದಿಲ್ಲ. ಇಂಥಹ ಜನರಿ ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ಅದಕ್ಕಾಗಿಯೇ ಯಾವಾಗಲೂ ಸಿಹಿಯಾಗಿ ಮಾತನಾಡಬೇಕು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.