House Cleaning Tips: ಸಾಮಾನ್ಯವಾಗಿ ಜನರು ಮನೆಯ ಹಳದಿ ನೆಲದಿಂದ ತುಂಬಾ ಅಸಮಾಧಾನಗೊಳ್ಳುತ್ತಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲುಯಾವ ವಿಧಾನಗಳನ್ನು ಅನುಸರಿಸುತ್ತೀರಿ ಎಂಬುದು ತಿಳಿದಿಲ್ಲ. ಆದರೆ ಈ ಲೇಖನದಲ್ಲಿ ನೀಡಲಾದ ಕೆಲವು ಸಲಹೆಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ಇದರ ಸಹಾಯದಿಂದ ನಿಮ್ಮ ಮನೆಯ ನೆಲವನ್ನು ಬಿಳಿಯಾಗಿಸಬಹುದು. ಮಾತ್ರವಲ್ಲದೆ ಹೊಳೆಯುವಂತೆ ಮಾಡಬಹುದು. ಆ ವಿಧಾನಗಳು ಯಾವುವು ಮತ್ತು ಅವುಗಳನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಮರಿದ ಹ್ಯಾಟ್ರಿಕ್ ಗೆಲುವಿನ ಕನಸು: ಇಂಗ್ಲೆಂಡ್ ವಿರುದ್ಧ ಸೋಲುಂಡ ಟೀಂ ಇಂಡಿಯಾ ವನಿತೆಯರು


1. ನೀವು ಮನೆಯ ನೆಲವನ್ನು ಹೊಳೆಯುವಂತೆ ಮಾಡಲು ಬಯಸಿದರೆ, ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಬಳಿಕ ನೆಲವನ್ನು ಸ್ವಚ್ಛಗೊಳಿಸಿದೆ. ಈ ರೀತಿ ಮಾಡುವುದರಿಂದ ನೆಲವನ್ನು ಹೊಳೆಯುವಂತೆ ಮಾಡುವುದಲ್ಲದೆ ಹಳದಿ ಬಣ್ಣವನ್ನು ಸಹ ಹೋಗಲಾಡಿಸಬಹುದು.


2. ನೆಲವನ್ನು ಹೊಳೆಯುವಂತೆ ಮಾಡಲು ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು. ಅಡುಗೆ ಸೋಡಾದ ಪುಡಿಯನ್ನು ಒಂದು ಮಗ್ ನೀರಿನಲ್ಲಿ ಬೆರೆಸಿ ಹತ್ತಿ ಬಟ್ಟೆಯನ್ನು ಅದ್ದಿ ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ನೆಲವನ್ನು ಬೇಗನೆ ಸ್ವಚ್ಛಗೊಳಿಸಬಹುದು. ಅಲ್ಲದೆ ಕಲೆಗಳನ್ನು ಸಹ ತೆಗೆದುಹಾಕಬಹುದು.


3. ಒಂದು ಮಗ್ ನೀರಿನಲ್ಲಿ ಸೀಮೆಎಣ್ಣೆ ಬೆರೆಸಿ. ಅದರಲ್ಲಿ ಹತ್ತಿ ಬಟ್ಟೆಯನ್ನು ನೆನೆಸಿಡಿ. ಬಳಿಕ ನೆಲದ ಮೇಲಿರುವ ಕಲೆಗಳನ್ನು ಆ ಬಟ್ಟೆಯಿಂದ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಿದ ನಂತರ, ಉಗುರು ಬೆಚ್ಚಗಿನ ನೀರಿನಿಂದ ನೆಲವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೆಲವನ್ನು ಸ್ವಚ್ಛಗೊಳಿಸಬಹುದು.


ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ


ನೀವು ನೆಲವನ್ನು ಸ್ವಚ್ಛಗೊಳಿಸಿದಾಗಲೆಲ್ಲಾ ರಬ್ಬರ್ ಕೈಗವಸುಗಳನ್ನು ಧರಿಸಿ.


ದಪ್ಪ ಬಟ್ಟೆಯಿಂದ ಒರೆಸಿ. ತೆಳುವಾದ ಬಟ್ಟೆಯು ಬೇಗನೆ ಹರಿದು ಹೋಗಬಹುದು, ಜೊತೆಗೆ ಚೆನ್ನಾಗಿ ಸ್ವಚ್ಛಗೊಳಿಸುವುದಿಲ್ಲ.


ಇದನ್ನೂ ಓದಿ: ಶನಿದೋಷ ನಿವಾರಣೆಗೆ ಈ ಖಾರದ ಮಸಾಲೆ ವಸ್ತುವಿನಿಂದ ಪರಿಹಾರ ಮಾಡಿ: ಕ್ಷಣದಲ್ಲಿ ಪರಿಹಾರ ಖಂಡಿತ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ