ಮಹಿಳೆಯರೇ ಏಕಾಂಗಿಯಾಗಿ ಪ್ರವಾಸ ಮಾಡೋಕೆ ಭಯನಾ..? ಚಿಂತೆ ಬಿಡಿ.. ಇಲ್ಲಿವೆ ಕೆಲ ಟಿಪ್ಸ್..
Travel and Tourisum: ಸೋಲೋ ಪ್ರವಾಸ ಮಾಡಲು ಭಯ ಪಡುವ ಮಹಿಳೆಯರಿಗೆಂದು ಕೆಲ ಸಂಸ್ಥೆಗಳು ಇವೆ. ಹಾಗಾದರೆ ಯಾವೆಲ್ಲ ಸಂಸ್ಥೆಗಳು ಮಹಿಳೆಯರಿಗೆ ಮಾತ್ರ ಪ್ರವಾಸವನ್ನೂ ಆಯೋಜಿಸುತ್ತವೆ ಎನ್ನುವ ಮಾಹಿತಿ ಇಲ್ಲಿದೆ.
Trips idea: ಎಲ್ಲರಿಗೂ ಸೋಲೋ ಪ್ರವಾಸ ಅಂದ್ರೆ ಅಷ್ಟಕಷ್ಟೆ. ಅದರಲ್ಲೂ ಮಹಿಳೆಯರಿಗೆ ಸೋಲೋ ಪ್ರವಾಸ ಅಂದ್ರೆ ಸ್ವಲ್ಪ ಯೋಚಿಸಿ ತಿರ್ಮಾನ ತೆಗೆದುಕೊಳ್ಳಬೇಕಾದ ವಿಚಾರ ಸಂಗತಿಯಾಗಿದೆ. ಭಾರತದಂತಹ ದೇಶದಲ್ಲಿ ಪ್ರವಾಸೋದ್ಯಮದ ಬಗೆಗಿನ ಒಲವು ಇತ್ತೀಚೆಗೆ ಯುವಜನರಲ್ಲಿ ಬದಲಾಗುತ್ತಿದ್ದರೂ, ಎಲ್ಲ ಮಹಿಳೆಯರು ಸೋಲೋ ಪ್ರವಾಸ ಮಾಡುವ ಧೈರ್ಯವನ್ನು ಅಷ್ಟಾಗಿ ಮಾಡುವುದಿಲ್ಲ. ಕೆಲವರಿಗೆ ಧೈರ್ಯ ಇದ್ದರೂ ಮನೆಯಲ್ಲಿ ಒಪ್ಪಿಗೆ ಇರುವುದಿಲ್ಲ, ಇನ್ನೂ ಕೆಲವರ ಸಮಸ್ಯೆಯೇ ಬೇರೆ.
ಸೋಲೋ ಪ್ರವಾಸದಲ್ಲಿ ಯಾರೂ ಜೊತೆಗಿಲ್ಲದೆ ಏಕತಾನತೆ ಕಾಡುತ್ತದೆ. ಏನಾದರೂ ಆರೋಗ್ಯ ಸಮಸ್ಯೆ ಇತ್ಯಾದಿ ಆದರೆ ನಮ್ಮ ಜೊತೆ ಯಾರೂ ಇಲ್ಲ ಎಂಬ ಭಯ ಕಾಡುತ್ತದೆ, ಸೋಲೋ ಪ್ರವಾಸ ಎಂದರೆ ರಿಸ್ಕ್ ಜಾಸ್ತಿ ಎನ್ನುವಂತಹದ್ದು ಇನ್ನೂ ಅನೇಕ ರೀತಿಯ ಸಮಸ್ಯೆಗಳು ಕಾಡುವುದು ಸರ್ವೇ ಸಾಮಾನ್ಯ. ಆದರೆ ಇವರಲ್ಲಿ ಒಂದಷ್ಟು ಮಹಿಳೆಯರಿಗೆ ಪ್ರವಾಸ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಒಬ್ಬಂಟಿಯಾಗಿ ಹೋಗಬೇಕೆಂಬ ಹತಾಶಭಾವ. ಹೀಗಾಗಿ ಸಾಮಾನ್ಯ ಭಾರತೀಯ ಮಹಿಳೆಯರಿಗೆ ಪ್ರವಾಸ ಎಂದರೆ, ಬಹಳ ಯೋಚಸಿ, ಯೋಜನೆ ಮಾಡುವಂತ ಪರಿಸ್ಥಿತಿ ಇಂದಿಗೂ ನಮ್ಮಲ್ಲಿ ಕಾಣಬಹುದು.
ಹೌದು, ಅದಕ್ಕಾಗಿಯೇ ಇಂಥ ಮಹಿಳೆಯರಿಗೆಂದೇ ಭಾರತದಲ್ಲಿ ಹಲವಾರು ಪ್ರವಾಸ ಸಂಸ್ಥೆಗಳಿವೆ, ಗುಂಪುಗಳಿವೆ. ಮಹಿಳೆಯರಿಂದ, ಮಹಿಳೆಯರಿಗಾಗಿಯೇ, ಮಹಿಳೆಯರಿಗೋಸ್ಕರ ಇರುವ ಪ್ರವಾಸದ ಗುಂಪುಗಳು ಕೂಡ ಮಾಡಲಾಗಿದೆ. ಇಂತಹ ಗುಂಪುಗಳು ಮಹಿಳೆಯರಿಗಾಗಿಯೇ ಅನೇಕ ರೀತಿಯ ಗುಂಪು ಪ್ರವಾಸಗಳನ್ನು ಆಗಾಗ ಆಯೋಜಿಸುತ್ತಲೇ ಇರುತ್ತವೆ. ಕೇವಲ ಮಹಿಳೆಯರು ಮಾತ್ರ ಈ ಪ್ರವಾಸದಲ್ಲಿ ಭಾಗವಹಿಸಬಹುದು.
ತನಗೆ ಇಷ್ಟವಿರುವ ಯಾವುದೇ ಪ್ಯಾಕೇಜನ್ನು ಆಯ್ದುಕೊಂಡು ಮಹಿಳೆಯರ ಗುಂಪಿನಲ್ಲಿ ಪ್ರವಾಸವನ್ನು ಕೈಗೋಳ್ಳಬಹುದು. ಈ ಸಂಸ್ಥೆ ಅಥವಾ ಗುಂಪುಗಳಿಂದ ಯಾವುದೇ ಭಯವಿಲ್ಲದ, ಎಲ್ಲ ಬಗೆಯ ಸುರಕ್ಷತೆಗಳನ್ನೂ ನೀಡುವ, ಹೊಸ ಮಹಿಳೆಯರ ಸ್ನೇಹ ಸಂಪಾದಿಸಬಲ್ಲ ಪ್ರವಾಸವನ್ನು ಆಯೋಜಿಸುತ್ತಾರೆ. ಹಾಗಾದರೆ ಬನ್ನಿ, ಯಾವೆಲ್ಲ ಸಂಸ್ಥೆಗಳು ಮಹಿಳೆಯರ ಪ್ರವಾಸವನ್ನೂ ಮಾತ್ರ ಆಯೋಜಿಸುತ್ತವೆ ಎಂದು ನೋಡೋಣ.
ಇದನ್ನೂ ಓದಿ: ಭೃಂಗರಾಜ ಎಣ್ಣೆಯು ಕೂದಲಿಗೆ ಮಾತ್ರವಲ್ಲದೆ ಈ ರೋಗಗಳಿಗೂ ರಾಮಬಾಣವಾಗಿ ಕೆಲಸ ಮಾಡುತ್ತದೆ
ವಾವ್ ಕ್ಲಬ್
ಮಹಿಳೆಯರಿಗಾಗಿಯೇ ಮೀಸಲಾದ ಟ್ರಾವೆಲ್ ಕ್ಲಬ್ ಇದಾಗಿದೆ. ವಯಸ್ಸಿನ ಹೊರತಾಗಿಯೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಪ್ರವಾಸಗಳನ್ನು ಆಯೋಜಿಸುವ ವಾವ್ ಕ್ಲಬ್ ಇದು ಭಾರತದಲ್ಲಿ ಪ್ರಾರಂಭಿಸಿದ ಮೊದಲ ಕಂಪನಿಯಾಗಿದೆ. ಸಾಕಷ್ಟು ಪ್ರವಾಸಗಳನ್ನು ಮಾಡಿ ಅನುಭವವಿರುವ ಹಾಗೂ ಬರಹಗಾರ್ತಿ ಸುಮಿತ್ರಾ ಅವರು ವಿಮೆನ್ ಆನ್ ವಾಂಡರ್‌ಲಸ್ಟ್ ಎಂಬ ಪ್ರವಾಸಿ ಸಂಸ್ಥೆಯನ್ನು ಆರಂಭಿಸಿದ್ದರು. ಬಹಳಷ್ಟು ಸೋಲೋ ಪ್ರವಾಸಗಳನ್ನು ಮಾಡಿರುವ ಇವರಿಗೆ, ಭಾರತದಲ್ಲಿ ಮಹಿಳೆಯರಿಗಾಗಿಯೇ ಮೀಸಲಿರುವ ಪ್ರವಾಸಿ ಸಂಸ್ಥೆಗಳು ಯಾವುದು ಇಲ್ಲದಿರುವುದನ್ನು ಗುರುತಿಸಿಕೊಂಡಿದಲ್ಲದೆ, ಮಹಿಳಾ ಪ್ರವಾಸಿ ಸಹವರ್ತಿ ಹುಡುಕುವುದು ಬಹಳ ಕಷ್ಟ ಎಂಬುದನ್ನು ಅರಿತುಕೊಂಡು ತನ್ನದೇ ಒಂದು ಸಂಸ್ಥೆ ಕಟ್ಟುವ ಕನಸು ಕಂಡು ಅದರಂತೆ ನನಸೂ ಕೂಡ ಮಾಡಿಕೊಂಡಿದ್ದಾರೆ. 2005ರಲ್ಲಿ ಹುಟ್ಟಿಕೊಂಡ ಈ ಸಂಸ್ಥೆ, ಈವರೆಗೆ 100ಕ್ಕೂ ಹೆಚ್ಚು ಪ್ರವಾಸಗಳನ್ನು ಆಯೋಜಿಸಿದ್ದು, 50ಕ್ಕೂ ಹೆಚ್ಚು ಬಗೆಯ ಪ್ಯಾಕೇಜುಗಳು ಇವರ ಬಳಿ ಇವೆ.
ಗರ್ಲ್ಸ್ ಆನ್ ದಿ ಗೋ
ಭಾರತದ ಒಳಗೆ ಮತ್ತು ಹೊರಗಡೆ ಪ್ರಪಂಚದಾದ್ಯಂತ ಪ್ರವಾಸವನ್ನು ಮಾಡುಬೇಕು ಎಂಬ ಯೋಚನೆಗಳಿದ್ದರೆ, ಜೆಮ್‌ಶೇಡ್‌ಪುರದ ಪ್ರಿಯಾ ಬೋಸ್ ಅವರ ಪ್ರಾರಂಭಿಸಿ ಗರ್ಲ್ಸ್ ಆನ್ ದಿ ಗೋ ಸಂಸ್ಥೆ ಇದೆ. ಇವರು ಹೆಚ್ಚಿನದಾಗಿ ಮಹಿಳೆಯರಿಂದ ಮಹಿಳೆಯರಿಗೋಸ್ಕರವೇ ಇರುವ ಈ ಸಂಸ್ಥೆ ಹೆಚ್ಚಿನದಾಗಿ ನ್ಯೂಜಿಲ್ಯಾಂಡ್, ಮಂಗೋಲಿಯಾ, ಸ್ಪೈನ್, ಅಂಟಾರ್ಟಿಕಾ , ನಾರ್ವೆ, ಭೂತಾನ್ ಅಲ್ಲದೇ ಪ್ರಪಂಚದ ಮೂಲೆ ಮೂಲೆಗಳಿಗೂ ತುಂಬಾ ಯಶಸ್ವಿ ಪೂರ್ಣವಾದ ಪ್ರವಾಸ ಯೋಜನೆಗಳನ್ನು ಆಯೋಜಿಸಿತ್ತಾರೆ.
ಇದನ್ನೂ ಓದಿ: ಕೊಡೈಕೆನಾಲ್ ಪ್ರವಾಸಿಗರಿಗೆ ಮನಮೋಹಕ ಪರಿಸರ, ಬಜೆಟ್ ಸ್ನೇಹಿ ರೆಸಾರ್ಟ್‌ಗಳು
ಚಿಂದಿ ಸಫರ್
ಹೆಚ್ಚಿನದಾಗಿ ಪ್ರವಾಸ ಕೈಗೋಳ್ಳುವವರು ಬಜೆಟ್ ನೋಡಿಯೇ ಪ್ರವಾಸಕ್ಕೆ ಹೋಗುವುದಾ.. ಬೇಡವಾ..? ಎಂದು ಯೋಚಿಸುತ್ತಿರುತ್ತಾರೆ. ಅಂತವರಿಗಾಗಿಯೇ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕಡಿಮೆ ಬಜೆಟ್‌ನಲ್ಲಿ ಪ್ರವಾಸವನ್ನು ಬಯಸುವ ಮಹಿಳೆಯರಿಗಾಗಿ ಇರುವ ಸಂಸ್ಥೆ ಇದಾಗಿದೆ. ಈ ಸಂಸ್ಥೆಯಲ್ಲಿ ಹೆಚ್ಚೆಂದರೆ ಹತ್ತು ಮಹಿಳೆಯರು ಒಟ್ಟಿಗೆ ಪ್ರವಾಸವನ್ನು ಕೈಗೋಳ್ಳಬಹುದಾಗಿದೆ. ಅಲ್ಲದೇ ಮಹಿಳೆಯರಿಗಾಗಿಯೇ ವಿಶೇಷ ಪ್ಯಾಕೇಜ್‌ಗಳ ಸೌಲಭ್ಯಗಳಿರುತ್ತವೆ. ಈ ಸಂಸ್ಥೆ ಕೇವಲ ಭಾರತದೋಳಗೆ ಅಂದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದೆಲ್ಲೆಡೆ ಹಲವು ಕಡೆ ಪ್ರವಾಸಗಳನ್ನು ಕಡಿಮೆ ವೆಚ್ಚದಲ್ಲಿಯೇ ಹಮ್ಮಿಕೋಳ್ಳುತ್ತಾರೆ.
F5 ಎಸ್ಕೇಪ್ಸ್
ಈ ಸಂಸ್ಥೆಯನ್ನು ಮಹಿಳೆಯರಿಗೋಸ್ಕರ ಅಂತಾನೇ ಮಾಲಿನಿ ಗೌರಿಶಂಕರ್ ಅವರು ಪ್ರಾರಂಭಿಸಿದ್ರು. ಮುಖ್ಯವಾಗಿ ಭಾರತದೊಳಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಅನೇಕ ರೀತಿಯ ಪ್ರವಾಸಗಳನ್ನು ಮಹಿಳೆಯರಿಗೆಂದು ಆಯೋಜಿಸುತ್ತಾರೆ. ಯಾರು ಸೋಲೋ ಪ್ರವಾಸ ಮಾಡಲು ಭಯ ಪಡುತ್ತಿರೋ ಅಂತವರಿ ಈ ಸಂಸ್ಥೆ ಬಹಳ ಸಹಾಯವಾಗಿಲಿದೆ. ಇದರಿಂದ ನಿಶ್ಚಿಂತೆಯಿಂದ ಯಾವುದೇ ಭಯವಿಲ್ಲದೆ ಸೋಲೊ ಪ್ರವಾಸವನ್ನು ಕೈಗೋಳ್ಳಬಹುದು.
ಇದನ್ನೂ ಓದಿ: ಮಾದಪ್ಪನ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತರು: ಮಹಾ ಜ್ಯೋತಿ ದರ್ಶನಕ್ಕೆ ಕಾತರ
ಹಿರಿಯರು ಹೇಳುವ ಮಾತೊಂದು ಇದೆ ʼಮನಸ್ಸಿದ್ದರೇ ಮಾರ್ಗʼ ಎನ್ನುವುದು. ಈಗ ಭಾರತದಲ್ಲಿ ಮಹಿಳೆಯರಿಗಾಗಿ ಇರುವಂತ ಅನೇಕ ಸೌಲಭ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಅದರೋಳಗೆ ಮಹಿಳೆಯರಿಗೊಸ್ಕರ ಇರುವ ಪ್ರವಾಸ ಗುಂಪುಗಳು ಕೂಡ ಒಂದಾಗಿದೆ. ಈಗೀರುವ ತಂತ್ರಜ್ಞಾನಗಳ ಮೂಲಕ ಹುಡುಕಿದರೆ ಸಾಕು ಮಹಿಳೆಯರಿಗಾಗಿ ಇರುವಂತ ಅನೇಕ ಸಂಸ್ಥೆಗಳನ್ನು ಕಾಣಬಹುದಾಗಿದೆ. ಇದರೊಂದಿಗೆ ಸಮಾನ ಮನಸ್ಸಿರುವಂತಹ ಮಹಿಳೆಯರ ಗುಂಪು ಸಿಕ್ಕೆ ಸಿಗುತ್ತವೆ. ನಮ್ಮ ಆಸಕ್ತಿಗೆ ಅನುಗುಣವಾಗಿ ಬೆನ್ನು ಬಿದ್ದು ಹುಡುಕುವ ಪ್ರಯತ್ನ ನಮ್ಮಲ್ಲಿರಬೇಕು ಅಷ್ಟೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ