Hometown Astrology: ಯಾವುದೇ ಹೆಣ್ಣಾಗಲಿ, ಮದುವೆಯಾದ ಬಳಿಕ ಆಕೆಗೆ ತವರಿನ ಮೇಲೆ ಅತಿಯಾದ ಪ್ರೀತಿ ಉಕ್ಕಿಹರಿಯಲಾರಂಭಿಸುತ್ತದೆ. ಆಗಾಗ್ಗ ತವರಿಗೆ ಹೋಗಿ ತನ್ನ ಕುಟುಂಬವನ್ನು ನೋಡಬೇಕು, ಅವರ ಜೊತೆ ಕಾಲ ಕಳೆಯಬೇಕು ಎಂಬ ಆಸೆ ಆಕೆಯಲ್ಲಿರುತ್ತದೆ. ಆದರೆ ಕೆಲವೊಂದು ಬಾರಿ ಆಕೆಗೆ ಗಂಡನ ಮನೆಯ ಕೆಲಸಗಳ ಅಡ್ಡಿಯಿಂದಾಗಿ ಹೋಗಲು ಸಾಧ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಹೆಣ್ಣನ್ನು ಲಕ್ಷ್ಮೀ ರೂಪವೆಂದು ಪರಿಗಣಿಸಲಾಗುತ್ತದೆ. ಒಂದು ಮನೆಯಲ್ಲಿ ಹುಟ್ಟಿ, ಮತ್ತೊಂದು ಮನೆಯನ್ನು ಬೆಳಗಲೆಂದು ಆಕೆ ಹುಟ್ಟಿರುತ್ತಾಳೆ. ಆಕೆ ಮಾಡುವ ಪ್ರತಿಯೊಂದು ಕಾರ್ಯವೂ ಪತಿಯ ಮನೆ ಮತ್ತು ತವರಿಗೆ ಘನತೆ ಜೊತೆಗೆ ಏಳಿಗೆಗೆ ಕಾರಣವಾಗುತ್ತದೆ.


ಇದನ್ನೂ ಓದಿ: Skin Care Tips: ಕಾಂತಿಯುತ ತ್ವಚ್ವೆಗಾಗಿ ರಾತ್ರಿ ಮಲಗುವ ಮುನ್ನ ಇದನ್ನು ತಪ್ಪದೇ ಅಪ್ಲೈ ಮಾಡಿ


ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಾಹಿತ ಮಹಿಳೆಯು ಅನೇಕ ಸಂಪ್ರದಾಯ, ಪದ್ಧತಿಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ. ಅದರಲ್ಲಿ ಪ್ರಮುಖವಾದುದು, ಹೆಣ್ಣು ತನ್ನ ಗಂಡನ ಮನೆಯಿಂದ ತವರಿಗೆ ತೆರಳುವಾಗ ಪಾಲಿಸಬೇಕಾದ ಸಣ್ಣ ಸಣ್ಣ ಸಂಪ್ರದಾಯಗಳು. ಹೌದು ಮಹಿಳೆ ಕೆಲವೊಂದು ದಿನಗಳಲ್ಲಿ ತವರಿಗೆ ಹೋದರೆ ಅದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.


ಶಾಸ್ತ್ರಗಳು ಹೇಳುವಂತೆ, ಮಹಿಳೆಯರು ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿರುತ್ತಾರೆ. ಬುಧ ಮತ್ತು ಶನಿ ಗ್ರಹಗಳು ಶುಕ್ರಗ್ರಹಕ್ಕೆ ಬಹಳ ಆಪ್ತವಾದದ್ದು. ಹೀಗಾಗಿ ಬುಧವಾರ ಮತ್ತು ಶನಿವಾರದಂದು ಹೆಣ್ಣು ತವರಿಗೆ ಹೋಗಬಹುದು. ಆದರೆ ಸೂರ್ಯ ಮತ್ತು ಚಂದ್ರ ಗ್ರಹಗಳೆಂದರೆ ಅದು ಶುಕ್ರನಿಗೆ ಶತ್ರುವಿಗೆ ಸಮ. ಹೀಗಾಗಿ ರವಿವಾರದಂದು ತವರಿಗೆ ಹೋಗದಿರುವುದು ಉತ್ತಮ.


ಒಂದು ವೇಳೆ ಜಾತಕದಲ್ಲಿ ಚಂದ್ರ ಬಲಶಾಲಿಯಾಗಿದ್ದು, ಬುಧ ದುರ್ಬಲವಾಗಿದ್ದರೆ ಬುಧವಾರದಂದೂ ಸಹ ಮಹಿಳೆಯರು ತವರಿಗೆ ಹೋಗಬಾರದು ಎಂದು ಹಿಂದೂ ಗ್ರಂಥಗಳು ಹೇಳುತ್ತವೆ. ಇದರ ಜೊತೆಗೆ ಚತುರ್ಥಿ ಮತ್ತು ಅಷ್ಟಮಿಯಂದು ಅತ್ತೆ ಮನೆಯಿಂದ ಹೆಣ್ಣು ತವರಿಗೆ ಹೋದರೆ ಬಹಳ ಮಂಗಳಕರ ಎಂದು ಹೇಳಲಾಗುತ್ತದೆ.


ಇನ್ನು ತವರಿನಿಂದ ಅತ್ತೆ ಮನೆಗೆ ಶುಕ್ರವಾರ, ಹುಣ್ಣಿಮೆ ದಿನ ಅಥವಾ ಏಕಾದಶಿ ದಿನದಂದು ಬರಬಹುದು. ಇದೂ ಕೂಡ ಬಹಳ ಮಂಗಳಕರವಾಗಿದ್ದು, ಪತಿಯ ಮನೆಗೆ ಶುಭವನ್ನು ತರುತ್ತದೆ ಎನ್ನಲಾಗುತ್ತದೆ. 


ಇದನ್ನೂ ಓದಿ: ಇಂದಿನಿಂದ 9 ದಿನಗಳ ಕಾಲ ಈ ಗಿಡಗಳನ್ನು ನೆಟ್ಟರೆ, ಜೀವನದ ಎಲ್ಲಾ ಕಷ್ಟಗಳನ್ನೂ ನಿವಾರಿಸುತ್ತಾಳಂತೆ ದುರ್ಗೆ


ಇನ್ನು ಕೆಲವರು ಗ್ರಹಣಗಳ ದಿನದಂದು ತವರು ಮನೆಗೆ ಹೋಗುತ್ತಾರೆ. ಹೀಗೆ ಮಾಡಿದ್ದಲ್ಲಿ ಆರ್ಥಿಕ ಸಂಕಷ್ಟವನ್ನು ಎರಡೂ ಕುಟುಂಬಗಳು ಎದುರಿಸಬೇಕಾಗುತ್ತದೆ. ಇನ್ನು ತಾಯಿ ಮನೆಯಲ್ಲಿ ಕೆಲವರು ಕೆಲ ದಿನಗಳವರೆಗೆ ಉಳಿದುಕೊಳ್ಳುತ್ತಾರೆ. ಆದರೆ ನೀವು ಒಂಬತ್ತನೇ ದಿನದಂದು ಅತ್ತೆ ಮನೆಗೆ ಬರಬೇಡಿ. 11 ದಿನಗಳ ಕಾಲ ಉಳಿದು 12ನೇ ದಿನ ವಾಪಾಸ್ ಆಗಿ. ಇದು ಎರಡೂ ಮನೆಯಲ್ಲಿ ಅಭಿವೃದ್ಧಿ ಕಾಣಲು ಸಹಾಯಕವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.