ಮಹಿಳೆಯರು ಹೆಚ್ಚಾಗಿ ನೈಟಿ ಧರಿಸಿದ್ರೆ ʼಈʼ ಸಮಸ್ಯೆಗಳನ್ನ ನೀವೇ ಬರಮಾಡಿಕೊಂಡಂತೆ! ಯಾವೆಲ್ಲ ಸಮಸ್ಯೆಗಳು ಗೊತ್ತಾ?
Side effects nighty for women: ಈ ನೈಟಿಯ ಅರ್ಥ ರಾತ್ರಿಯ ಉಡುಪು. ಈ ಉಡುಪು ತಯಾರಿಸಿರುವ ವಿದೇಶಿ ಪ್ರಜೆಗಳೇ ರಾತ್ರಿ ಹೊರತುಪಡಿಸಿ ಇದನ್ನ ಬೆಳಗ್ಗೆ ಮತ್ತು ಹಗಲಿನಲ್ಲಿ ಬಳಸುವುದಿಲ್ಲ. ಆದರೆ ಭಾರತೀಯ ಮಹಿಳೆಯರು ಎಲ್ಲೆಡೆ ಇದನ್ನ ಸಾಧಾರಣ ಉಡುಪಿನ ರೀತಿ ಬಳಕೆ ಮಾಡುತ್ತಿದ್ದಾರೆ.
Side effects nighty: ಭಾರತದ ಸನಾತನ ಸಂಸ್ಕೃತಿಯು ಅತ್ಯಂತ ಐತಿಹಾಸಿಕವಾದುದು. ಇದು ಧಾರ್ಮಿಕ ಪರಂಪರೆ ಮತ್ತು ಕಲೆಯ ಅರಿವು ಹೊಂದಿದೆ. ಈ ಸಂಸ್ಕೃತಿಯಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು, ಮಹಾಭಾರತ, ರಾಮಾಯಣ, ಗೀತೆ ಮೊದಲಾದ ಪ್ರಮುಖ ಗ್ರಂಥಗಳು ಅತ್ಯಂತ ಪ್ರಮುಖವಾಗಿವೆ. ನಮ್ಮ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಒಂದು ಉಡುಗೆ ಅಂದರೆ ಅದು ಸೀರೆ ಅಂತಾ ಹೇಳಬಹುದು. ಈ ಒಂದು ಉಡುಗೆ ನಮ್ಮ ಹಿಂದೂ ಸಂಸ್ಕೃತಿಯ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ ಅಂತಾನೇ ಹೇಳಬಹುದು.
ಆದರೆ ದಿನದಿಂದ ದಿನಕ್ಕೆ ನಮ್ಮ ಭಾರತೀಯರು ಹೆಚ್ಚಾಗಿ ವಿದೇಶಿಯರ ಉಡುಪಿಗೆ ಮಾರು ಹೋಗುತ್ತಿದ್ದಾರೆ. ಸ್ವತಃ ವಿದೇಶಿಯರೇ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಇಲ್ಲಿನ ಆಚಾರ ವಿಚಾರಗಳನ್ನು ಕಲಿಯಲು ಹವನಿಸುತ್ತಿದ್ದಾರೆ. ಆದರೆ ಭಾರತೀಯರು ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ಚಿತ್ರ-ವಿಚಿತ್ರವಾಗಿ ಡ್ರೆಸ್ಸಿಂಗ್ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಬಹುತೇಕರಿಗೆ ಗೊತ್ತಿಲ್ಲ ಅಂತಾ ಕಾಣಿಸುತ್ತದೆ. ಮಹಿಳೆಯರು ಮನೆಯಲ್ಲಿದ್ದಾಗ ಧರಿಸುವ ನೈಟಿ ವಿದೇಶಿಯರ ಕೊಡುಗೆ.
ಇದನ್ನೂ ಓದಿ: ಕಾಂತಿಯುತವಾದ ಉದ್ದ ಕೂದಲಿಗೆ ನೈಸರ್ಗಿಕ ಪರಿಹಾರ ರೋಸ್ ವಾಟರ್...
ಈ ನೈಟಿಯ ಅರ್ಥ ರಾತ್ರಿಯ ಉಡುಪು. ಈ ಉಡುಪು ತಯಾರಿಸಿರುವ ವಿದೇಶಿ ಪ್ರಜೆಗಳೇ ರಾತ್ರಿ ಹೊರತುಪಡಿಸಿ ಇದನ್ನ ಬೆಳಗ್ಗೆ ಮತ್ತು ಹಗಲಿನಲ್ಲಿ ಬಳಸುವುದಿಲ್ಲ. ಆದರೆ ಭಾರತೀಯ ಮಹಿಳೆಯರು ಎಲ್ಲೆಡೆ ಇದನ್ನ ಸಾಧಾರಣ ಉಡುಪಿನ ರೀತಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಸೀರೆಗಿಂತ ಹೆಚ್ಚಿನ ಆರಾಮ ನೀಡುತ್ತದೆ ಎಂದು ಈ ನೈಟಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
ಮಹಿಳೆಯರು ಎಲ್ಲಾ ಸಮಯದಲ್ಲಿಯೂ ನೈಟಿ ಬಳಸುವುದುರಿಂದ ನಮ್ಮ ಆಚಾರ-ವಿಚಾರಕ್ಕೆ ಧಕ್ಕೆಯುಂಟಾಗುತ್ತದೆ. ಕೆಲಸ ಮಾಡುವ ವೇಳೆ ಅಥವಾ ಮನೆಯಲ್ಲಿರುವಾಗ ರಾತ್ರಿ ಬಳಸುವುದು ಸರಿ. ಆದರೆ ಹೊರಗಡೆ ಹೋಗುವ ಸಮಯದಲ್ಲಿ ಇದನ್ನು ಧರಿಸುವುದು ಸೂಕ್ತವಲ್ಲ. ಏಕೆಂದರೆ ಮಹಿಳೆಯರು ನಮ್ಮ ಸಂಪ್ರದಾಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಸಾಮಾನ್ಯ ಬಟ್ಟೆಗಳಲ್ಲಿ ಚೆನ್ನಾಗಿ ಕಾಣುವ ಮಹಿಳೆಯರು ನೈಟಿ ಧರಿಸಿದ ಕೂಡಲೇ ಬೇರೆಯದ್ದೇ ರೀತಿ ಕಾಣುತ್ತಾರೆ.
ಇದನ್ನೂ ಓದಿ: ಬೆಳಗಿನ ಜಾವ ಕನಸಿನಲ್ಲಿ ಚಿನ್ನ ಕಂಡರೆ ಏನರ್ಥ!? ಶುಭವೋ.. ಅಶುಭವೋ..
ನೈಟಿ ಧರಿಸುವುದರಿಂದ ಹೆಣ್ಣು ಮಕ್ಕಳ ಹೊಟ್ಟೆ ಹಾಗೂ ಎದೆಭಾಗ ಜೋತು ಬೀಳುವುದು ಅಸಹ್ಯವಾಗಿ ಕಾಣಿಸುತ್ತದೆ. ಇದರಿಂದ ಮಹಿಳೆಯರಿಗೆ ಮುಜುಗರದ ಪ್ರಸಂಗ ಎದುರಿಸಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಹೆಚ್ಚಾಗಿ ನೈಟಿ ಧರಿಸುವುದರಿಂದ ಮಹಿಳೆಯರು ರಕ್ತದ ಒತ್ತಡ ಸಮಸ್ಯೆಯನ್ನು ಎದುರಿಸುತ್ತಾರೆಂದು ಹೇಳಬಹುದು. ಫಿಟ್ ಆಗಿರುವ ನೈಟಿ ಧರಿಸುವುದರಿಂದ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಈ ಬಗ್ಗೆ ಹೆಣ್ಣು ಮಕ್ಕಳು ಯೋಚಿಸುವುದು ಉತ್ತಮ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.