ನವದೆಹಲಿ: ಮನೆ ಅಥವಾ ಕಚೇರಿಯಲ್ಲಿ ಸಂಜೆಯಾದ ತಕ್ಷಣ ಜನರು ರುಚಿಕರವಾದ ತಿಂಡಿ ತಿನ್ನಲು ಹಂಬಲಿಸುತ್ತಾರೆ. ಈ ವೇಳೆ ಹೆಚ್ಚಾಗಿ ಕರಿದ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಬೊಜ್ಜು, ಅಜೀರ್ಣ ಮತ್ತು ಇತರ ಕಾಯಿಲೆಗಳ ಅಪಾಯ ಉಂಟಾಗುತ್ತದೆ. ಹೀಗಾಗಿಯೇ ನೀವು ಸಂಜೆಯ ತಿಂಡಿಗಳಲ್ಲಿ ಆರೋಗ್ಯಕರ ಆಹಾರ ಸೇರಿಸುವುದು ಮುಖ್ಯ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ತಿನ್ನಲು ರುಚಿಕರವಾಗಿರುತ್ತದೆ. ಹಾಗಾದರೆ ಆರೋಗ್ಯಕರ ತಿಂಡಿಗಳ ಬಗ್ಗೆ ತಿಳಿಯಿರಿ.


COMMERCIAL BREAK
SCROLL TO CONTINUE READING

1. ಮಖಾನಾ: ಮಖಾನಾ ಒಣ ಹಣ್ಣುಗಳಲ್ಲಿರುವ ಪೋಷಕಾಂಶಗಳ ನಿಧಿ. ಇದು ಕ್ಯಾಲ್ಸಿಯಂ, ಪ್ರೋಟೀನ್, ಮೆಗ್ನೀಸಿಯಮ್ ಮತ್ತು ಇತರ ಅಂಶಗಳಲ್ಲಿ ಸಮೃದ್ಧವಾಗಿದೆ. ಇದು ಗ್ಲುಟನ್ ಮುಕ್ತವೂ ಆಗಿದೆ. ನೀವು ಇದನ್ನು ಸಂಜೆ ಉಪಾಹಾರದಲ್ಲಿ ಸೇರಿಸಬಹುದು. ಹುರಿದ ಮಖಾನವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಬದಲಿಗೆ ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.


2. ರಾಗಿ ಕುಕೀಸ್: ರಾಗಿಯು ಪೋಷಕಾಂಶಗಳ ಖಜಾನೆಯಾಗಿದೆ. ಇದು ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಆಹಾರದ ಫೈಬರ್ಗಳಲ್ಲಿ ಸಮೃದ್ಧವಾಗಿದೆ. ಸಂಜೆಯ ತಿಂಡಿಯಲ್ಲಿ ನೀವು ರಾಗಿಯಿಂದ ಮಾಡಿದ ಕುಕೀಗಳನ್ನು ಸೇವಿಸಬಹುದು. ಇವು ಕೂಡ ತುಂಬಾ ರುಚಿಕರವಾಗಿವೆ.


ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆಗಳಿರುವವರಿಗೆ ಮೊಟ್ಟೆ ಸೇವನೆ ತುಂಬಾ ಡೇಂಜರ್


3. ಪಫ್ಡ್ ರೈಸ್: ಸಂಜೆಯ ತಿಂಡಿಗೆ ಪಫ್ಡ್ ರೈಸ್ ಅತ್ಯುತ್ತಮ ಆಯ್ಕೆಯಾಗಿದೆ. ಹಿರಿಯರಿಂದ ಹಿಡಿದು ಚಿಕ್ಕವರವರೆಗೆ ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದರಿಂದ ಬೇಲ್ಪುರಿ, ಚಿಕ್ಕಿ ಇತ್ಯಾದಿ ಹಲವು ಬಗೆಯ ತಿಂಡಿಗಳನ್ನು ಮಾಡಬಹುದು. ಇದರಲ್ಲಿ ರುಚಿಯ ಜೊತೆಗೆ ಆರೋಗ್ಯವೂ ತುಂಬಿರುತ್ತದೆ.


4. ಡ್ರೈ ಫ್ರೂಟ್ಸ್ ತಿನ್ನಿ: ಸಂಜೆಯ ಕಡುಬಯಕೆ ಕಡಿಮೆ ಮಾಡಲು ಡ್ರೈ ಫ್ರೂಟ್ಸ್ ಸಹ ಸೇವಿಸಬಹುದು. ನಿಮ್ಮ ಹಸಿವನ್ನು ನೀಗಿಸಲು ಇದು ಉತ್ತಮ ಆಯ್ಕೆಯಾಗಿದೆ. ಬೇಕಿದ್ದರೆ ಸಂಜೆಯ ತಿಂಡಿಯಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.


ಇದನ್ನೂ ಓದಿ: Health Tips: ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯಬೇಕು ಗೊತ್ತಾ..?


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.