ನವದೆಹಲಿ : ಪ್ರತಿಯೊಬ್ಬರೂ ತಮ್ಮ ಬಳಿ ಅಪಾರ ಸಂಪತ್ತು ಇರಬೇಕು ಎಂದು ಬಯಸುತ್ತಾರೆ. ಯಾಕೆಂದರೆ ಹಣದ ಅಭಾವವಿದ್ದರೆ, ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಹಣದ ಕೊರತೆಯಿಂದಾಗಿ (Financial problem), ಮನೆಯಲ್ಲಿ ಜಗಳವಾಡುವುದು ಸಾಮಾನ್ಯ ವಿಚಾರ. ಕೆಲವೊಮ್ಮೆ ಈ ಸಣ್ಣ ಜಗಳಗಳು ಎಷ್ಟು ದೊಡ್ಡದಾಗುತ್ತವೆಯೆಂದರೆ ಒಬ್ಬ ವ್ಯಕ್ತಿ ಬೇಡ ಬೇಡ ಎಂದರೂ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾರೆ. ಹೀಗಿರುವಾಗ, ನಮ್ಮ ಜೀವನದಲ್ಲಿ ಸಿಗುವ ಕೆಲವು ಸಂಕೇತಗಳು ಲಕ್ಷ್ಮೀ ಆಗಮನದ ಮುನ್ಸೂಚನೆ ನೀಡುತ್ತದೆ.  


COMMERCIAL BREAK
SCROLL TO CONTINUE READING

ಕಪ್ಪು ಇರುವೆಗಳ ಹಿಂಡು
ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳು ಬರುವುದನ್ನು ನೋಡಿದರೆ, ಅದರಲ್ಲೂ ವಿಶೇಷವಾಗಿ ಆ ಇರುವೆಗಳು ಬಾಯಿಯಲ್ಲಿ ಧಾನ್ಯಗಳನ್ನು ತರುತ್ತಿರುವುದನ್ನು ನೋಡಿದರೆ, ಅದನ್ನು ಅತ್ಯಂತ ಶುಭ ಸಂಕೇತವಾಗಿರುತ್ತದೆ (good luck). ನಿಮ್ಮ ಮನೆಗೆ ಕಪ್ಪು ಇರುವೆಗಳ ಸಮೂಹ ಬಂದರೆ, ಮುಂದಿನ ದಿನಗಳಲ್ಲಿ ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ಲಕ್ಷ್ಮಿ ದೇವಿಯ (Godess Lakshmi) ಆಶೀರ್ವಾದ ನಿಮ್ಮ ಮೇಲೆ ಬೀರಲಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. 


ಇದನ್ನೂ ಓದಿ :  ಅಕ್ಟೋಬರ್ 11 ರಿಂದ ಬದಲಾಗಲಿದೆ ಶನಿ ಗ್ರಹದ ಚಲನೆ, ಈ ಮೂರು ರಾಶಿಯವರಿಗೆ ಸಿಗಲಿದೆ ಭಾರಿ ಶುಭ ಫಲ


ಮನೆಯಲ್ಲಿ ಪಕ್ಷಿಗಳ ಗೂಡು :
ಪಕ್ಷಿಯು ನಿಮ್ಮ ಮನೆಯಲ್ಲಿ ಗೂಡು ಕಟ್ಟಿದರೆ ಅದನ್ನು ಕೆಡವಲು ಹೋಗಬೇಡಿ. ಯಾಕೆಂದರೆ ಮನೆಯಲ್ಲಿ ಹಕ್ಕಿ ಗೂಡು ಕಟ್ಟುವುದು ಶುಭ ಸಂಕೇತವಾಗಿರುತ್ತದೆ. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು (Financial problem) ನಿವಾರಣೆಯಾಗಲಿವೆ ಮತ್ತು ಶೀಘ್ರದಲ್ಲೇ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತರಾಗಲಿದ್ದೀರಿ ಎಂದರ್ಥ. 


ಗುಡಿಸುವ ವ್ಯಕ್ತಿ:
ಮನೆಯಿಂದ ಹೊರಡುವಾಗ ಗುಡಿಸುವುದನ್ನು ನೋಡಿದರೆ, ಇದು ಕೂಡಾ ಒಳ್ಳೆಯ ಸಂಕೇತ. ಇದು ನಿಮ್ಮ ಮನೆಗೆ ಸಂಪತ್ತಿನ ಆಗಮನವಾಗುತ್ತದೆ ಎನ್ನುವುದನ್ನು ಹೇಳುತ್ತದೆ. ಇದರ ಹೊರತಾಗಿ, ಮನೆಯಿಂದ ಹೊರಡುವಾಗ ಯಾರಾದರೂ ಕಬ್ಬು ತರುವುದನ್ನು ಕಂಡರೂ ಕೂಡಾ ಶುಭ ಫಲವೇ ಸಿಗಲಿದೆ.  


ಇದನ್ನೂ ಓದಿ :  ನವರಾತ್ರಿಯಲ್ಲಿ ತಪ್ಪಿಯೂ ಮಾಡದಿರಿ ಈ ಕೆಲಸಗಳನ್ನು , ದುರ್ಗೆಯ ಮುನಿಸಿಗೆ ಕಾರಣವಾಗಬಹುದು


ಬಾಯಿಯಲ್ಲಿ ತಿಂಡಿ ಇಟ್ಟುಕೊಂಡಿರುವ ನಾಯಿ : 
ನಾಯಿಯೊಂದು ಬಾಯಿಯಲ್ಲಿ ತಿಂಡಿ ಅಥವಾ ಯಾವುದೇ ಸಸ್ಯಾಹಾರಿ ಪದಾರ್ಥವನ್ನು ತರುತ್ತಿರುವುದನ್ನು ನೋಡಿದರೆ, ಅದನ್ನೂ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಜೀವನದ ಅನೇಕ ತೊಂದರೆಗಳ ಅಂತ್ಯವನ್ನು ಸೂಚಿಸುತ್ತದೆ. 


ಈ ಸಮಯದಲ್ಲಿ ಭಿಕ್ಷುಕ ಕಂಡರೆ :
ನಿದ್ರೆಯಿಂದ ಎದ್ದಾಗ, ಭಿಕ್ಷುಕ ಬಂದರೆ, ಹೊರಗಡೆ ಸಿಲುಕಿಕೊಂಡಿರುವ ಎಲ್ಲಾ ಹಣ ನಿಮ್ಮ ಕೈ ಸೇರಲಿದೆ. ಭಿಕ್ಷುಕನನ್ನು ಬರೀ ಗೈಯಲ್ಲಿ ಹೋಗಲು ಬಿಡಬೇಡಿ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.