ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಸಾಕು ಜನ್ಮದಲ್ಲೇ ಕೂದಲು ಉದುರುವುದಿಲ್ಲ..! ಬೇಕ್ರಿದ್ರೆ ಟ್ರೈ ಮಾಡಿ ನೋಡಿ..
hair fall Solution: ಸ್ನಾನ ಮಾಡುವಾಗ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯದಿದ್ದರೆ, ಶಾಂಪೂದಲ್ಲಿನ ರಾಸಾಯನಿಕಗಳು ಉಳಿದು ನಿಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಕೂದಲು ಉದುರುವಿಕೆಗೆ ಇದು ಪ್ರಮುಖ ಕಾರಣವೂ ಆಗಿರಬಹುದು.
Hair Care Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಎಲ್ಲಾ ವಯಸ್ಸಿನವರಲ್ಲಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ಈ ಸಮಸ್ಯೆಯನ್ನು ಕಡಿಮೆ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಶಾಂಪೂ ಮತ್ತು ಎಣ್ಣೆಯನ್ನು ಆಗಾಗ್ಗೆ ಬದಲಾಯಿಸಿ ಬಳಸಿದ ನಂತರವೂ ಕೂದಲು ಉದುರುವುದು ಕಡಿಮೆಯಾಗುವುದಿಲ್ಲ.. ಅದರಲ್ಲಿಯೂ ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಬಳಸಿದರೆ ಕೂದಲು ಹೆಚ್ಚು ಹಾಳಾಗುತ್ತದೆ. ಆದರೆ ಕೆಲವೊಂದು ಮನೆ ಸಲಹೆಗಳನ್ನು ಪಾಲಿಸಿದರೆ ಕೂದಲು ಉದುರುವುದೇ ಇಲ್ಲ ಎನ್ನುತ್ತಾರೆ ತಜ್ಞರು. ಇದರೊಂದಿಗೆ ನಿಮ್ಮ ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. ಇದಕ್ಕಾಗಿ ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ..
ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಲು, ಉದ್ದ ಮತ್ತು ಆರೋಗ್ಯಕರ ಕೂದಲು ಬೆಳೆಯಲು, ಸ್ನಾನ ಮಾಡುವಾಗ ಕೆಲವು ಅಂಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ. ಕೂದಲು ಉದುರುವುದನ್ನು ತಪ್ಪಿಸಲು ಸಲ್ಫೇಟ್ ಮುಕ್ತ ಶಾಂಪೂ ಬಳಸಿ ಕೂದಲನ್ನು ತೊಳೆಯಲು ತಜ್ಞರು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ-ನಟಿ ಶೋಭಿತಾ ಶಿವಣ್ಣ ಸಾವಿನ ಪ್ರಕರಣಕ್ಕೆ ಟ್ವಿಸ್ಟ್.. ಪೋಲಿಸರಿಗೆ ಸಿಕ್ಕ ಡೆತ್ ನೋಟ್‌ನಲ್ಲಿ ಏನಿತ್ತು ಗೊತ್ತಾ..?
ಪ್ರತಿದಿನ ಸ್ನಾನ ಮಾಡುವುದರಿಂದ ಕೂದಲು ಒಣಗಬಹುದು. ಇದರಿಂದ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆ ನಾಶವಾಗಿ ಕೂದಲು ಹೆಚ್ಚು ಉದುರುತ್ತದೆ. ಇದನ್ನು ತಡೆಯಲು ವಾರಕ್ಕೆ 2-3 ಬಾರಿ ತಲೆ ಸ್ನಾನ ಮಾಡಿದರೆ ಸಾಕು. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಸ್ನಾನ ಮಾಡುವಾಗ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯದಿದ್ದರೆ, ಶಾಂಪೂದಲ್ಲಿನ ರಾಸಾಯನಿಕಗಳು ಉಳಿದು ನಿಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಕೂದಲು ಉದುರುವಿಕೆಗೆ ಇದು ಪ್ರಮುಖ ಕಾರಣವೂ ಆಗಿರಬಹುದು.
ಎಣ್ಣೆ ಹಚ್ಚದೆ ಕೂದಲು ತೊಳೆಯುವುದು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು, ಸ್ನಾನ ಮಾಡುವ ಮೊದಲು ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಉತ್ತಮ. ವಾರಕ್ಕೊಮ್ಮೆಯಾದರೂ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ, ಮಸಾಜ್ ಮಾಡಿ ಸ್ನಾನ ಮಾಡಬೇಕು. ಸ್ನಾನ ಮಾಡುವ ಮೊದಲು ತಾಜಾ ಅಲೋವೆರಾ ಜೆಲ್ ಅನ್ನು ಕೂದಲಿನ ತುದಿಗೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ಕೂದಲನ್ನು ತೊಳೆಯಿರಿ. ಇದು ಕೂದಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.