ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕದ ಗ್ರಹಗಳ ಆಧಾರದ ಮೇಲೆ ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ.  ಅದೇ ರೀತಿಯಲ್ಲಿ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ (Palmistry)ವ್ಯಕ್ತಿಯ ಕೈಯ ರೇಖೆಗಳು, ಚಿಹ್ನೆಗಳು, ಆಕಾರಗಳನ್ನು ವಿಶ್ಲೇಷಿಸಿ ಭವಿಷ್ಯವನ್ನು ತಿಳಿಯಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ಸಾಲುಗಳನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಜೀವನ ರೇಖೆ, ಅದೃಷ್ಟ ರೇಖೆ, ಹಣದ ರೇಖೆ, ಮದುವೆ ರೇಖೆ, ರಾಹು ರೇಖೆ *Rahu rekhe) ಇತ್ಯಾದಿ. ಇಂದು ನಾವು ರಾಹು ರೇಖೆಯ ಬಗ್ಗೆ ಹೇಳಲಿದ್ದೇವೆ. ಜಾತಕದಲ್ಲಿ ರಾಹುವಿನ ಅಸ್ತವ್ಯಸ್ತ ಸ್ಥಾನವು ಹೇಗೆ ಜೀವನದಲ್ಲಿ ವಿನಾಶವನ್ನು ತರುತ್ತದೆಯೋ, ಅದೇ ರೀತಿ, ಹಸ್ತದಲ್ಲಿರುವ ರಾಹು ರೇಖಾ ಸ್ಥಾನದಿಂದ ಭವಿಷ್ಯದ ಘಟನೆಗಳನ್ನು ತಿಳಿಯಬಹುದು. 


COMMERCIAL BREAK
SCROLL TO CONTINUE READING

ರಾಹು ರೇಖೆ ಅದೃಷ್ಟವನ್ನು ಬದಲಾಯಿಸುತ್ತದೆ  :
ಅಂಗೈಯಲ್ಲಿರುವ ರೇಖೆಯು ಮಂಗಳನ ಕ್ಷೇತ್ರದಿಂದ ಆರಂಭವಾಗಿ ಮಸ್ತಿಷ್ಕ ರೇಖೆಯನ್ನು ಸ್ಪರ್ಶಿಸಿದರೆ ಮತ್ತು ಜೀವನದ ರೇಖೆಯಮೂಲಕ ಹಾದು, ಹೃದಯ ರೇಖೆಯನ್ನು ದಾಟಿದರೆ ಅದನ್ನು ರಾಹು ರೇಖೆ ಎಂದು ಕರೆಯಲಾಗುತ್ತದೆ (Rahu rekhe in hand). ಅಂಗೈಯಲ್ಲಿ ಒಂದಕ್ಕಿಂತ ಹೆಚ್ಚು ರಾಹು ರೇಖೆಗಳಿರಬಹುದು. ಈ ಸಾಲುಗಳು ಹಸ್ತದ ಮಧ್ಯದಲ್ಲಿರುತ್ತವೆ. 


ಇದನ್ನೂ ಓದಿ :  Sun Transit 2022: ಸೂರ್ಯನ ರಾಶಿ ಬದಲಾವಣೆಯಿಂದ ಈ ಜನರಿಗೆ ಅದೃಷ್ಟ, ಬಹಳಷ್ಟು ಹಣ ಸಿಗಲಿದೆ!


ಕೈಯಲ್ಲಿ ಸ್ಪಷ್ಟವಾದ ರಾಹು ರೇಖೆಯನ್ನು ಹೊಂದಿದ್ದು, ಅದರ ಮೇಲೆ ಬೇರೆ ಯಾವುದೇ ರೇಖೆಗಳಿಲದಿದ್ದರೆ,  ಅಂತಹ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಾರೆ. ಈ ಜನರು ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಗೌರವವನ್ನು ಪಡೆಯುತ್ತಾರೆ (Palmistry). ಅಂತರರಾಷ್ಟ್ರೀಯ ಮಟ್ಟದವರೆಗೆ ಪ್ರಶಸ್ತಿಗಳನ್ನು ಪಡೆಯುವ ಬಲವಾದ ಸಾಧ್ಯತೆಯನ್ನು ಹೊಂದಿರುತ್ತಾರೆ.  


ಹಾಗೆಯೇ ಒಬ್ಬರ ಅಂಗೈಯಲ್ಲಿ ಒಂದಕ್ಕಿಂತ ಹೆಚ್ಚು ರಾಹು ರೇಖೆಗಳು ಒಂದೇ ಸ್ಥಳದಲ್ಲಿದ್ದು ಅವು ಮಧ್ಯದಲ್ಲಿ ಎಲ್ಲೂ ಅರ್ಧಕ್ಕೇ ತುಂಡಾಗದಿದ್ದಲ್ಲಿ, ಅಂತಹ ವ್ಯಕ್ತಿಗೆ ಉನ್ನತ ಆಡಳಿತದ ಹುದ್ದೆ ದೊರೆಯುತ್ತದೆ (Rahu rekhe in hand). ಅವರು ತಮ್ಮ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಯಶಸ್ಸನ್ನು ಪಡೆಯುತ್ತಾರೆ. 
 
ಇದನ್ನೂ ಓದಿ : Astrology : ಉದ್ಯೋಗ ಮತ್ತು ಹಣ ಪಡೆಯಲು ಈ ಮಂತ್ರ ಪಠಿಸಿ, ನಿಮ್ಮ ಆಸೆಗಳು ಈಡೇರುತ್ತದೆ


ಯಾರ ಕೈಯಲ್ಲಿ ಮಸ್ತಿಷ್ಕ ರೇಖೆ ಬುಧದ ಪರ್ವತದವರೆಗೆ ಹೋಗಿ ಅಲ್ಲಿ ದ್ವೀಪವು ರೂಪುಗೊಂಡಿದ್ದರೆ, ಇದು ತುಂಬಾ ಮಂಗಳಕರವಾಗಿರುತ್ತದೆ. ಅಂತಹವರ ಭವಿಷ್ಯ ರಾಜಕೀಯದಲ್ಲಿ ಮಿಂಚುತ್ತದೆ. ಅವರು ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.