ನವದೆಹಲಿ : ಕೈಯಲ್ಲಿರುವ ರೇಖೆಗಳ ಮೂಲಕ ಬಹಳಷ್ಟು ವಿಷಯಗಳು ತಿಳಿಯುತ್ತದೆ.  ಇವತ್ತು ನಾವು ಕೈಯಲ್ಲಿರವ ಕೆಲವು ಆಕಾರಗಳ ಬಗ್ಗೆ ಹೇಳುತ್ತೇವೆ. ಈ ಆಕಾರಗಳು ನಿಮ್ಮ ಕೈಯಲ್ಲೂ ಇದ್ದರೆ ಲಕ್ಷ್ಮೀ ದೇವಿಯ ಆಶೀರ್ವಾದ ನಿಮ್ಮ ಜೀವನದುದ್ದಕ್ಕೂ ಇರಲಿದೆ. ಅಂದರೆ ನಿಮ್ಮ ಜೀವನದಲ್ಲಿ ಹಣದ ಕೊರತೆಯಾಗುವುದೇ ಇಲ್ಲವಂತೆ. ಸಾಮುದ್ರಿಕ ಶಾಸ್ತ್ರದ (Samudrik Shastra) ಪ್ರಕಾರ, ಯಾರ ಕೈಯಲ್ಲಿ ಈ ಚಿಹ್ನೆಗಳಿರುತ್ತವೆಯೋ ಅವರು ಜೀವನ ಪೂರ್ತಿ ಅಪಾರ ಸಂಪತ್ತನ್ನು ಹೊಂದಿರುತ್ತಾರೆ. ಹಾಗಿದ್ದರೆ ಆ ಚಿಹ್ನೆಗಳು ಯಾವುವು ನೋಡೋಣ .. 


COMMERCIAL BREAK
SCROLL TO CONTINUE READING

ತ್ರಿಶೂಲ : 
ತ್ರಿಶೂಲ (Trishoola) ಅಂದರೆ, ಭಗವಾನ್ ಶಿವನ (Lord Shiva) ಸಂಕೇತ. ಸಾಮುದ್ರುಕ ಶಾಸ್ತ್ರದ ಪ್ರಕಾರ, ಯಾರ ಹಸ್ತದಲ್ಲಿ ತ್ರಿಶೂಲದ ಚಿಹ್ನೆ ಇರುತ್ತದೆಯೋ, ಅವರ ಮೇಲೆ ಯಾವತ್ತೂ ಶಿವನ ಆಶೀರ್ವಾದವಿರುತ್ತದೆ. ಇವರು ಯಾವುದೇ ಕೆಲಸವನ್ನು ಆರಂಭಿಸಿದರೂ ಅದರಲ್ಲಿ ಜಯಗಳಿಸುತ್ತಾರೆ.  ಜೀವನದ ಪ್ರತಿಸ್ತರದಲ್ಲಿ ಅದೃಷ್ಟ ಇವರ ಜೊತೆಗಿರುತ್ತದೆ. 


ಇದನ್ನೂ ಓದಿ : ಸುಖ ಶಾಂತಿ ಸಮೃದ್ಧಿಗಾಗಿ ಮನೆಯಿಂದ ತಕ್ಷಣ ಹೊರ ಹಾಕಿ ಈ ವಸ್ತುಗಳನ್ನು


ತಕ್ಕಡಿ:
ಅಂಗೈಯಲ್ಲಿ ತಕ್ಕಡಿಯ ಆಕಾರವಿದ್ದರೆ, ಅದ ನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಯಾರ ಅಂಗೈಯಲ್ಲಿ ತಕ್ಕಡಿಯಂಥ ಚಿಹ್ನೆ ಇರುತ್ತದೆಯೋ, ಆ ವ್ಯಕ್ತಿಯ ಜೀವನದಲ್ಲಿ ಎಂದಿಗೂ ಹಣದ (Money) ಕೊರತೆ ಇರುವುದಿಲ್ಲವಂತೆ. ದೇವಿಯ ಕೃಪೆ ಇವರ ಮೇಲೆ ಸದಾ ಇರುತ್ತೆಯಂತೆ. 


ಕಮಲ : 
ಕೈಯಲ್ಲಿ ಕಮಲದಂತಹ ಚಿಹ್ನೆ ಅಥವಾ ಕಮಲದ (Lotus) ಆಕಾರ ಇರುವ ವ್ಯಕ್ತಿ ಬಹಳ ಅದೃಷ್ಟಶಾಲಿ. ದೇವರ ಅನುಗ್ರಹವು ಅವನ ಮೇಲೆ ಸದಾ ಇರುತ್ತದೆ. ಲಕ್ಷ್ಮಿಗೆ  (Godess Lakshmi) ಕೂಡ ಕಮಲದ ಹೂವೆಂದರೆ ಬಹಳ ಪ್ರೀತಿ. ಆದ್ದರಿಂದ, ಯಾರ ಕೈಯಲ್ಲಿ ಕಮಲದ ಆಕಾರವಿರುತ್ತದೆಯೋ, ಅವನ ಆರ್ಥಿಕ ಸ್ಥಿತಿಯೂ ಅತ್ಯುತ್ತಮವಾಗಿರುತ್ತದೆ. 


ಇದನ್ನೂ ಓದಿ : Budh Rashi Parivartan: ಬುಧ ರಾಶಿ ಪರಿವರ್ತನೆ, ಈ ರಾಶಿಗಳಿಗೆ ಒಳ್ಳೆಯ ಸಮಯ


ಸ್ವಸ್ತಿಕ್  : ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಸ್ವಸ್ತಿಕ ಚಿಹ್ನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಶುಭ ಕೆಲಸ, ಮದುವೆ (Marriage) ಅಥವಾ ಹೊಸ ವಾಹನವನ್ನು ಮನೆಯಲ್ಲಿ ಖರೀದಿಸುವ ವೇಳೆ ಅದರ ಮೇಲೆ ಸ್ವಸ್ತಿಕದ ಚಿಹ್ನೆಯನ್ನು ಹಾಕಲಾಗುತ್ತದೆ. ಅಂಗೈಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹೊಂದಿರುವ ಜನರಲ್ಲಿ ಯಾವತ್ತೂ ಸಂಪತ್ತಿನ ಕೊರತೆಯಾಘುವುದೇ ಇಲ್ಲವಂತೆ. ಅವರು ಜೀವನದಲ್ಲಿ ಅತ್ಯಂತ ಸಂತೋಷದಿಂದ ಇರುತ್ತಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.