ನವದೆಹಲಿ : ಶನಿ ಯಾವಾಗಲೂ ಅಶುಭ ಫಲವನ್ನು ಮಾತ್ರ ನೀಡುವುದಿಲ್ಲ, ಶುಭ ಫಲವನ್ನೂ ನೀಡುತ್ತಾನೆ. ಶನಿ (shani dev) ಕರ್ಮಫಲದಾತನಾಗಿರುವುದರಿಂದ, ನಮ್ಮ ಕರ್ಮದ ಆಧಾರದ ಮೇಲೆ ಫಲ ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಪರಿಣಾಮವು ಕೂಡಾ, ಅವರ ಕರ್ಮ ಫಲದ ಮೇಲೆ ಬೀರುತ್ತದೆ. ಕೆಲವು  ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು.  


COMMERCIAL BREAK
SCROLL TO CONTINUE READING

ಈ ಅಭ್ಯಾಸಗಳು ಶನಿಯ ಕೋಪಕ್ಕೆ ಕಾರಣವಾಗುತ್ತವೆ  :
ಮನುಷ್ಯನ ಕೆಲವು ಗುಣಗಳು ಅಥವಾ ಅಭ್ಯಾಸಗಳು ಶನಿಗೆ ಇಷ್ಟವಾಗುವುದಿಲ್ಲ. ಇನ್ನು ಕೆಲವು ಗುಣಗಳು ಶನಿಗೆ (Shani Dev) ಬಹಳ  ಇಷ್ಟವಾಗುತ್ತವೆ. ಒಬ್ಬ ವ್ಯಕ್ತಿಯು ಶನಿದೇವನಿಗೆ ಇಷ್ಟವಿಲ್ಲದ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ಅವನು ತನ್ನ ಜೀವನದಲ್ಲಿ ಹಣದ ಮುಗ್ಗಟ್ಟು, ದೈಹಿಕ-ಮಾನಸಿಕ ಕಾಯಿಲೆಗಳು, ಗೌರವ ನಷ್ಟದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  


ಇದನ್ನೂ ಓದಿ : Mercury Transit: ಧನು ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಶುಭ ದಿನಗಳು ಆರಂಭ


ಈ ಅಭ್ಯಾಸಗಳಿಂದ ಶನಿ ಕೋಪಗೊಳ್ಳುತ್ತಾನೆ : 
ಕೆಲವು ಅಭ್ಯಾಸಗಳು ಮತ್ತು ಕಾರ್ಯಗಳನ್ನು ಶನಿಯು ತುಂಬಾ ಇಷ್ಟಪಡುತ್ತಾನೆ. ಈ ಗುಣಗಳಿರುವ ಜನರ ಸಾಡೇ ಸಾತಿ ಅಥವಾ ಏಳೂವರೆ ಶನಿ (Saade saati) ಮತ್ತು ಎರಡೂವರೆ ಶನಿಯ ಸಂದರ್ಭದಲ್ಲಿಯೂ, ಅವರಿಗೆ ಶುಭ ಫಲವನ್ನೇ ನೀಡುತ್ತಾನೆ.     ಆದರೆ, ಈ ಸಮಯದಲ್ಲಿ ಅನೇಕ ಜನರ ಭವಿಷ್ಯವು ಬದಲಾಗುತ್ತದೆ. ಹಾಗಿದ್ದರೆ ಶನಿ ಇಷ್ಟಪಡುವ ಗುಣಗಳು ಯಾವುವು ನೋಡೋಣ .


ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡುವ ಜನರು: 
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡುವ ಜನರಿಗೆ, ಶನಿದೇವನು ಯಾವಾಗಲೂ ದಯೆ ತೋರುತ್ತಾನೆ. ವ್ಯಕ್ತಿಯು ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ  ಮಾಡುವ ಗುಣವನ್ನು ಹೊಂದಿದ್ದರೆ, ಜಾತಕದಲ್ಲಿ ಶನಿ ಅಶುಭ ಸ್ಥಾನದಲ್ಲಿದ್ದಾಗಲೂ  ಶನಿ ದೋಷ (Shani dosha) ಕಡಿಮೆಯಾಗುತ್ತದೆ. ಅವರ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ. 


ಇದನ್ನೂ ಓದಿ: ಸಂಜೆ ಈ ಎಲೆಗಳ ಉಪಾಯ ಮಾಡಿ, ಇದರಿಂದ ನಿಮ್ಮ ಮನೆ ಸಂಪತ್ತು ಹೆಚ್ಚುತ್ತದೆ!


ಕಷ್ಟಪಟ್ಟು ದುಡಿಯುವ ಜನರು : 
ಕಷ್ಟಪಟ್ಟು ದುಡಿಯುವವರನ್ನು  ಶನಿದೇವ ಇಷ್ಟ ಪಡುತ್ತಾನೆ. ಶನಿಯ ಸಾಡೇ ಸಾತಿ, ಎರಡೂವರೆ ವರ್ಷದ ಶನಿ ದೆಸೆಯಲ್ಲಿಯೂ ಕೂಡಾ,  ಈ ಜನರು ಉತ್ತಮ ಫಲಿತಾಂಶಗಳನ್ನು ಪಡೆಯುವುದಕ್ಕೆ ಇದೇ ಕಾರಣ. ಈ ರೀತಿ ಕಷ್ಟ ಪಟ್ಟು ದುಡಿಯುವವರಿಗೆ, ಶನಿ ಯಾವತ್ತೂ ತೊಂದರೆ ನೀಡುವುದಿಲ್ಲ.  


ಸ್ವಚತೆ ಕಾಪಾಡುವವರು : 
ಯಾರು ಸದಾ ಶುಚಿಯಾಗಿರುತ್ತಾರೋ ಅವರ ಮೇಲೂ ಕೂಡಾ, ಶನಿಯ ಕೃಪೆ (Shani blessings) ಸದಾ ಇರುತ್ತದೆ. ಮತ್ತೊಂದೆಡೆ, ಶನಿಯು ಯಾವಾಗಲೂ ಕೊಳಕು ಉಗುರುಗಳನ್ನು ಹೊಂದಿರುವ ಜನರ ಮೇಲೆ ಕೆಟ್ಟ ದೃಷ್ಟಿ ಬೀರುತ್ತಾನೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.