2022 ರಲ್ಲಿ, ಶನಿದೇವನ ಕೃಪೆಯಿಂದ ಬದಲಾಗಲಿದೆ ಈ ಎರಡು ರಾಶಿಯವರ ಅದೃಷ್ಟ, ಈ ರಾಶಿಯವರಿಗೆ ಎದುರಾಗಲಿದೆ ಸಂಕಷ್ಟ
. ಜ್ಯೋತಿಷಿಗಳ ಪ್ರಕಾರ, ಹೊಸ ವರ್ಷದಲ್ಲಿ ಶನಿಯ ರಾಶಿಯ ಚಿಹ್ನೆ ಬದಲಾವಣೆಯಿಂದ ಕೆಲವು ರಾಶಿಚಕ್ರದ ಚಿಹ್ನೆಗಳ ಬಲವನ್ನು ಹೆಚ್ಚಿಸುತ್ತದೆ.
ನವದೆಹಲಿ : 2022 ರಲ್ಲಿ ಶನಿಯು (Shani transit) ತನ್ನದೇ ಆದ ರಾಶಿಚಕ್ರದಲ್ಲಿ ಸಾಗಲಿದೆ. ಜ್ಯೋತಿಷಿಗಳ ಪ್ರಕಾರ, ಹೊಸ ವರ್ಷದಲ್ಲಿ ಶನಿಯ ರಾಶಿಯ ಚಿಹ್ನೆ ಬದಲಾವಣೆಯಿಂದ ಕೆಲವು ರಾಶಿಚಕ್ರದ ಚಿಹ್ನೆಗಳ (Zodiac sign) ಬಲವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಶನಿದೇವನು ಒಟ್ಟು 3 ರಾಶಿಯ ಜನರ ಮೇಲೆ ಹೆಚ್ಚು ಪ್ರಭಾವ ಬೀರಲಿದ್ದಾನೆ.
ವೃಷಭ ರಾಶಿ :
ವೃಷಭ ರಾಶಿಯವರಿಗೆ 2022 ವಿಶೇಷವಾಗಿ ಶುಭವಾಗಿರಲಿದೆ. ಮಕರ ರಾಶಿಗೆ ಶನಿದೇವನ (Shani dev) ಪ್ರವೇಶವು, ವೃಷಭ ರಾಶಿಯವರಿಗೆ (Taurus) ಶುಭ ಫಲಿತಾಂಶಗಳನ್ನು ನೀಡುತ್ತದೆ. ಹೊಸ ವರ್ಷದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಕೆಲಸ ಕಾರ್ಯಗಳಿಗೆ , ತಂದೆಯ ಬೆಂಬಲವೂ ಇರುತ್ತದೆ. ಶಕ್ತಿ, ಗೌರವ ಮತ್ತು ಖ್ಯಾತಿಯಲ್ಲಿಯೂ ಹೆಚ್ಚಳ ಇರುತ್ತದೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದವರು ಲಾಭ ಪಡೆಯುತ್ತಾರೆ. ಹಳೆಯ ರೋಗಗಳಿಂದ ಮುಕ್ತಿ ಹೊಂದುವಿರಿ.
ಇದನ್ನೂ ಓದಿ : ಇದು ನಿಮ್ಮ ಮೂಲಾಂಕವಾಗಿದ್ದರೆ ಹೊಸ ವರ್ಷ ಹೊತ್ತುತರಲಿದೆ ಸಮೃದ್ದಿ, ಶುಕ್ರ, ಮಂಗಳನ ಕೃಪೆಯಿಂದ ಸಿಗಲಿದೆ ಅದೃಷ್ಟ
ಮಿಥುನ :
ಮಿಥುನ ರಾಶಿಯವರಿಗೆ (Gemini) ಶನಿದೇವನು ಮಿಶ್ರ ಫಲವನ್ನು ನೀದಲಿದ್ದಾನೆ. ಕುಟುಂಬದಲ್ಲಿ ಉದ್ವಿಗ್ನತೆ ಇರುತ್ತದೆ. ಅಲ್ಲದೆ, ಕುಟುಂಬದಲ್ಲಿ ಖರ್ಚು ಹೆಚ್ಚಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಕಿರಿಕಿರಿ ಉಂಟಾಗಬಹುದು. ಕಠಿಣ ಪರಿಶ್ರಮಗಳ ಹೊರತಾಗಿಯೂ ಅನುಕೂಲಕರ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಕಾಲುಗಳು ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳಿಂದ ತೊಂದರೆಗೊಳಗಾಗಬಹುದು. ಮಗುವಿನ ಆರೋಗ್ಯದ (health problem) ಬಗ್ಗೆ ಕಾಳಜಿ ಅಗತ್ಯ.
ಕರ್ಕಾಟಕ ರಾಶಿ :
ಶನಿದೇವ 2022 ರಲ್ಲಿ ಏಳನೇ ಮತ್ತು ಎಂಟನೇ ಮನೆಯಲ್ಲಿ ಒಂದು ಅಂಶವಾಗಿ ಸಾಗುತ್ತಾನೆ. ಇದು ವ್ಯವಹಾರದಲ್ಲಿ ಲಾಭ ಪಡೆಯುವಲ್ಲಿ ಸಹಕಾರಿಯಾಗುತ್ತದೆ. ಅಲ್ಲದೆ, ಹೊಸ ವ್ಯವಹಾರವನ್ನು ಪ್ರಾರಂಭಿಸುವುದು ಲಾಭದಾಯಕವಾಗಿ ಸಾಬೀತಾಗಬಹುದು. ಹೊಸ ವರ್ಷವು ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ಶನಿಯ ಸಂಚಾರದಿಂದ (Shani transit) ತಂದೆಯ ಆರೋಗ್ಯಕ್ಕೆ ತೊಂದರೆಯಾಗಬಹುದು. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಇದಲ್ಲದೇ ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ಮನೆ ಮತ್ತು ವಾಹನ ವೆಚ್ಚಗಳು ಹೆಚ್ಚಾಗುತ್ತವೆ. ಹೊಸ ವರ್ಷದಲ್ಲಿ ವಾಹನ, ಭೂಮಿ ಖರೀದಿಸಬಹುದು.
ಇದನ್ನೂ ಓದಿ : Numerology Horoscope 2022: 2022ರಲ್ಲಿ, ಈ ಸಂಖ್ಯೆಯ ಜನರಿಗೆ ಆಳುವ ಯೋಗ, ಹುಟ್ಟಿದ ದಿನಾಂಕದಿಂದ ನಿಮ್ಮ ವರ್ಷ ಹೇಗಿರುತ್ತದೆ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.