ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಇತರ ಗ್ರಹಗಳಂತೆ ಸೂರ್ಯ ಕೂಡಾ ತನ್ನ ರಾಶಿಯನ್ನು ಬದಲಾಯಿಸುತ್ತಿರುತ್ತಾನೆ. ಆದರೆ, ಸೂರ್ಯ ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಹೀಗೆ ಸೂರ್ಯ ರಾಶಿ ಬದಲಾಯಿಸುವ ಪ್ರಕ್ರಿಯೆಯನ್ನು ಸೂರ್ಯನ ರಾಶಿ ಸಂಚಾರ ಅಥವಾ ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ, ಸೂರ್ಯನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ಧನು ಸಂಕ್ರಾಂತಿ ಅಥವಾ ಧನುರ್ ಮಾಸ ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಈ ವರ್ಷ ಡಿಸೆಂಬರ್ 16  ರಿಂದ ಧನುರ್ ಮಾಸ ಪ್ರಾರಂಭವಾಗುತ್ತವೆ. 


COMMERCIAL BREAK
SCROLL TO CONTINUE READING

ಎಲ್ಲಿಂದ ಎಲ್ಲಿಯವರೆಗೆ ಧನುರ್ ಮಾಸ ? : 
ಹಿಂದೂ ಪಂಚಾಂಗ ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಡಿಸೆಂಬರ್ 16 ರಂದು ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣ ನಡೆಯಲಿದೆ. ಇದರೊಂದಿಗೆ ಧನುರ್ ಮಾಸ  ಪ್ರಾರಂಭವಾಗುತ್ತವೆ. ಜನವರಿ 14 ರ ತಡರಾತ್ರಿ, ಸೂರ್ಯ ಮತ್ತೆ ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.  ಸೂರ್ಯನ ಉದಯತಿಥಿ ಪ್ರಕಾರ, ಸೂರ್ಯ ಜನವರಿ 15 ರಂದು ಮಕರರಾಶಿಯನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ.   ಸೂರ್ಯನ ಮಕರ ರಾಶಿ ಪ್ರವೇಶವಾಗುತ್ತಿದ್ದಂತೆಯೇ ಧನುರ್ ಮಾಸ್ ಕೊನಯಾಗುತ್ತದೆ.  ಮತ್ತೆ ಶುಭ ಕಾರ್ಯಗಳನ್ನು ನಡೆಸುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : ಈ ದಿನಾಂಕದಲ್ಲಿ ಜನಿಸಿದವರ ಪಾಲಿಗೆ ಸಿಹಿಯನ್ನೇ ಹೊತ್ತು ತರಲಿದೆ 2023 .! ಹೆಗಲೇರುವುದು ಯಶಸ್ಸು


ಧನುರ್ ಮಾಸದಲ್ಲಿ ಈ ಕೆಲಸಗಳನ್ನು ಮಾಡುವಂತಿಲ್ಲ : 
ಧಾರ್ಮಿಕ ಗ್ರಂಥಗಳ ಪ್ರಕಾರ, ಧನುರ್ ಮಾಸವು ಅತ್ಯಂತ ಪವಿತ್ರವಾದುದು.  ಹೀಗಾಗಿ ಈ ಮಾಸದಲ್ಲಿ ಬೆಳ್ಳುಳ್ಳಿ-ಈರುಳ್ಳಿ ಬಳಸಬಾರದು ಎಂದು ಹೇಳಲಾಗುತ್ತದೆ. ಅಲ್ಲದೆ , ಮಾಂಸಾಹಾರ ಮತ್ತು ಮದ್ಯವನ್ನು ಈ ತಿಂಗಳಲ್ಲಿ ಸೇವಿಸಬಾರದು.


- ಧನುರ್ ಮಾಸವನ್ನು ಪೂಜೆಗಾಗಿ ಮೀಸಲಿಡುವ ತಿಂಗಳು ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಮದುವೆ, ಕ್ಷೌರ, ಗೃಹಪ್ರವೇಶ, ಹೊಸ ಕೆಲಸ ಆರಂಭಿಸುವುದು ಮುಂತಾದ ಶುಭ ಕಾರ್ಯಗಳನ್ನು ಮಾಡಬಾರದು. ಈ ಮಾಸದಲ್ಲಿ ಮಾಡುವ ಶುಭ ಕಾರ್ಯಗಳು ಕೂಡಾ ಅಶುಭ ಫಲ ನೀಡುತ್ತವೆ ಎನ್ನುವುದು ನಂಬಿಕೆ.


ಇದನ್ನೂ ಓದಿ : Samudrik Shastra : ಕನ್ನಡಿಯಲ್ಲಿ ನಿಮ್ಮನ್ನ ನೀವು ನೋಡಿಕೊಂಡರೆ ಶ್ರೀಮಂತರಾಗುತ್ತೀರಿ!


-ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ಆಹಾರ ಅಥವಾ ನೀರನ್ನು ಧನುರ್ ಮಾಸದಲ್ಲಿ ಸೇವಿಸಬಾರದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 


- ಧನುರ್ ಮಾಸದಲ್ಲಿ ಹೊಸ ಮನೆಯನ್ನು ಖರೀದಿಸುವುದು ಅಥವಾ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಸಮಯದಲ್ಲಿ ಖರೀದಿಸಿದ ಅಥವಾ ನಿರ್ಮಿಸಿದ ಮನೆಯಲ್ಲಿ ವಾಸಿಸಿದರೆ  ಜೀವನದಲ್ಲಿ ಕಷ್ಟ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಮನೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದಿಲ್ಲ ಎಂದು ಹೇಳಲಾಗುತ್ತದೆ. 


- ಧನುರ್ ಮಾಸದಲ್ಲಿ ಕಾರು, ಆಭರಣ ಇತ್ಯಾದಿ ದುಬಾರಿ ವಸ್ತುಗಳನ್ನು ಖರೀದಿಸಬಾರದು. ಒಂದು ವೇಳೆ ಈ ಮಾಸದಲ್ಲಿ ಈ ದುಬಾರಿ ವಸ್ತುಗಳನ್ನು ಖರೀದಿಸಿದರೆ ಮೇಲಿಂದ ಮೇಲೆ ಅವುಗಳ ಮೇಲೆ ಮತ್ತೆ ಮತ್ತೆ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಲಾಗುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.