ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗೆ ಶನಿಕಾಟ ಇಲ್ಲ
ಶನಿಯ ರಾಶಿ ಬದಲಾವಣೆಯು ಏಪ್ರಿಲ್ 29, 2022 ರಂದು ಸಂಭವಿಸುತ್ತದೆ. ಈ ಅವಧಿಯಲ್ಲಿ ಧನು ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ದೊರೆಯಲಿದೆ.
ನವದೆಹಲಿ : ಶನಿ ಗ್ರಹ ತನ್ನ ರಾಶಿಯನ್ನು ಬದಲಾಯಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಪ್ರಸ್ತುತ ಶನಿ ಮಕರ ರಾಶಿಯಲ್ಲಿದ್ದಾನೆ. ಇದೀಗ 2022 ರಲ್ಲಿ, ಶನಿಯು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಈ. ಸಮಯದಲ್ಲಿ ಶನಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ ಕೆಲವು ರಾಶಿಗಳ (Zodiac Sign) ಮೇಲೆ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ. ಇನ್ನು ಹೊಸ ವರ್ಷದಲ್ಲಿ ನಾಲ್ಕು ರಾಶಿಯವರಿಗೆ ಶನಿಕಾಟ ಇರುವುದೇ ಇಲ್ಲ. ಇನ್ನು 8 ರಾಶಿಗಳ ಮೇಲೆ ಶನಿಯ ರಾಶೀ ಪರಿವರ್ತನೆ ಭಾರೀ ಪರಿಣಾಮ ಬೀರಲಿದೆ.
ಶನಿಯ ರಾಶಿ ಬದಲಾವಣೆಯು ಏಪ್ರಿಲ್ 29, 2022 ರಂದು ಸಂಭವಿಸುತ್ತದೆ. ಈ ಅವಧಿಯಲ್ಲಿ ಧನು ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ದೊರೆಯಲಿದೆ. ಮತ್ತೊಂದೆಡೆ, ಮಿಥುನ ಮತ್ತು ತುಲಾ ರಾಶಿಯವರು (Libra) ಕೂಡಾ ಇದರಿಂದ ಮುಕ್ತಿ ಹೊಂದಲಿದ್ದಾರೆ. ಇನ್ನು ಮೀನ ರಾಶಿಯವರಿಗೆ ಶನಿ ಸಾಡೇ ಸತಿಯ ಮೊದಲ ಹಂತ ಆರಂಭವಾಗಲಿದೆ. ಕರ್ಕಾಟಕ (Cancer) ಮತ್ತು ವೃಶ್ಚಿಕ ರಾಶಿಯವರಿಗೂ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ.
ಇದನ್ನೂ ಓದಿ : Prayers Before Meal : ಊಟದ ತಟ್ಟೆ ನಿಮ್ಮ ಎದುರಿಗೆ ಬರುತ್ತಿದ್ದಂತೆ ತಪ್ಪದೆ ಈ ಕೆಲಸ ಮಾಡಿ!
ಮಕರ ರಾಶಿಯವರಿಗೆ ಶನಿ ಸಾಡೇ ಸತಿಯ ಕೊನೆಯ ಹಂತ ಆರಂಭವಾಗಲಿದ್ದು, ಕುಂಭ ರಾಶಿಯವರಿಗೆ ಎರಡನೇ ಹಂತ ಪ್ರಾರಂಭವಾಗುತ್ತದೆ. ಈ ವರ್ಷ ಜುಲೈ 12 ರಿಂದ, ಮಕರ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತದೆ. ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಶನಿ ಸಾಡೇ ಸಾತಿ ಅಥವಾ ಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಪಡೆದವರು ಮತ್ತೆ ಶನಿಯ (Saturn) ಪ್ರಭಾವಕ್ಕೆ ಒಳಗಾಗುತ್ತಾರೆ.
ಶನಿಯು 12 ಜುಲೈ 2022 ರಿಂದ 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಮೀನ ರಾಶಿಯವರಿಗೆ ಕೆಲಕಾಲ ಶನಿಕಾಟದಿಂದ ಮುಕ್ತಿ ಸಿಗಲಿದೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರು ಕೂಡಾ ಶನಿಯ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಶನಿಯ ದೃಷ್ಟಿ ಧನು ರಾಶಿ, ಮಕರ, ಕುಂಭ, ಮಿಥುನ, ತುಲಾ ರಾಶಿಯ ಮೇಲೆ ಇರುತ್ತದೆ. ಹೀಗೆ ನೋಡಿದರೆ 2022ರಲ್ಲಿ ಮಿಥುನ, ತುಲಾ, ಕರ್ಕಾಟಕ, ವೃಶ್ಚಿಕ (Scorpio), ಧನು (Sagittarius), ಮಕರ, ಕುಂಭ, ಮೀನ ರಾಶಿಯವರ ಮೇಲೆ ಶನಿಯು ಪ್ರಭಾವ ಬೀರುತ್ತಾನೆ. ಆದರೆ ಮೇಷ (Aries), ವೃಷಭ, ಸಿಂಹ (Leo) ಮತ್ತು ಕನ್ಯಾ ರಾಶಿಯ ಜನರಿಗೆ ಶನಿ ಕಾಟ ಇರುವುದಿಲ್ಲ.
ಇದನ್ನೂ ಓದಿ : Dream Astrology: ಸತ್ತವರು ಮತ್ತೆ ಮತ್ತೆ ಕನಸಿನಲ್ಲಿ ಕಾಣುತ್ತಾರೆಯೇ? ಜಾಗರೂಕರಾಗಿರಿ; ಈ ಚಿಹ್ನೆಗಳನ್ನು ತಿಳಿದುಕೊಳ್ಳಿ
2022 ರಲ್ಲಿ ಜೂನ್ 5 ರಂದು ಶನಿಯ ದ ಹಿಮ್ಮೆಟ್ಟುವಿಕೆಯನ್ನು ಪ್ರಾರಂಭಿಸುತ್ತದೆ ಮತ್ತು 23 ನೇ ಅಕ್ಟೋಬರ್ 2022 ಹಿಮ್ಮುಖ ಚಲನೆ ಆರಂಭವಾಗಲಿದೆ. ಶನಿಯ ಹಿಮ್ಮುಖ ಚಲನೆಯ ಅವಧಿ 141 ದಿನಗಳವರೆಗೆ ಇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ