Weight Loss At Home : ದೇಹದಲ್ಲಿ ಅಧಿಕ ಕೊಬ್ಬು ಸಂಗ್ರಹವಾಗುವುದರಿಂದ ಬೊಜ್ಜು ಉಂಟಾಗುತ್ತದೆ. ಈ ಹಿಂದೆ 35 ವರ್ಷ ಮೇಲ್ಪಟ್ಟವರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ, ಇಂದಿನ ಜೀವನಶೈಲಿಯಿಂದಾಗಿ ಅನೇಕ ಮಕ್ಕಳು ಕೂಡ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರ ಮತ್ತು ದೈಹಿಕ ಚಟುವಟಿಕೆಯ ಕೊರತೆ. ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ಎಲ್ಲವನ್ನು ಮಾಡಿದರೂ, ಅವರು ಬೇಗನೆ ತೂಕವನ್ನು ಕಳೆದುಕೊಳ್ಳುವುದಿಲ್ಲ. ಆದರೆ ಸರಿಯಾದ ಆಹಾರವನ್ನು ಆರಿಸುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವೇಗವಾಗಿ ತೂಕ ಇಳಿಸಿಕೊಳ್ಳಲು ಒಂದು ಟೇಸ್ಟಿ ವಿಧಾನ: ಸೋಯಾ ಚಂಕ್ಸ್ ಅನ್ನು ಈ ರೀತಿ ಸೇವಿಸಿ 


ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ತೂಕ ನಷ್ಟದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಒಂದು ತಿಂಗಳಲ್ಲಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉನ್ನತ ಪೌಷ್ಟಿಕ ತಜ್ಞರು ಶಿಫಾರಸು ಮಾಡಿದ ಭಾರತೀಯ ತೂಕ ನಷ್ಟ ಡಯಟ್‌ ವಿವರಗಳು ಇಲ್ಲಿವೆ.


ಉಪಹಾರ - 
ಆಯ್ಕೆ 1: ಹಣ್ಣುಗಳು ಮತ್ತು ಕಾಳುಗಳೊಂದಿಗೆ ಓಟ್ಮೀಲ್
ಆಯ್ಕೆ 2: ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿ ಅಥವಾ ದೋಸೆ
ಆಯ್ಕೆ 3: ತರಕಾರಿ ಮತ್ತು ಮೊಸರಿನೊಂದಿಗೆ ಗೋಧಿ ರವೆ ಉಪ್ಪಿಟ್ಟು


ಊಟ - 
ಆಯ್ಕೆ 1:  ದಾಲ್‌ ಮತ್ತು ಪಲ್ಯದ ಜೊತೆ ಬ್ರೌನ್ ರೈಸ್
ಆಯ್ಕೆ 2: ಚಿಕನ್ ಅಥವಾ ಮೀನಿನ ಕರಿ ಮತ್ತು ಪಲ್ಯದ ಜೊತೆ ಚಪಾತಿ
ಆಯ್ಕೆ 3: ಪಲ್ಯದ ಮತ್ತು ಫೆಟಾ ಚೀಸ್‌ನೊಂದಿಗೆ ಕ್ವಿನೋವಾ ಸಲಾಡ್


ಸ್ನ್ಯಾಕ್ಸ್‌ - 
ಆಯ್ಕೆ 1: ಸೀಸನಲ್ ತಾಜಾ ಹಣ್ಣುಗಳನ್ನು ಸೇರಿಸಬಹದು.
ಆಯ್ಕೆ 2: ಕ್ಯಾರೆಟ್ ಮತ್ತು ಸೌತೆಕಾಯಿಗಳಂತಹ ತಾಜಾ ತರಕಾರಿಗಳು.


ರಾತ್ರಿ ಊಟ - 
ಆಯ್ಕೆ 1: ತರಕಾರಿಗಳು ಮತ್ತು ಮೊಸರಿನೊಂದಿಗೆ ಖಿಚಡಿ
ಆಯ್ಕೆ 2: ಹುರಿದ ತರಕಾರಿಗಳೊಂದಿಗೆ ಬೇಯಿಸಿದ ಮೀನು
ಆಯ್ಕೆ 3: ಕುಚಲಕ್ಕಿ ಜೊತೆ ತೋಫು ಕರಿ


ತೂಕ ನಷ್ಟಕ್ಕೆ ಅನುಸರಿಸಬೇಕಾದ ಇತರ ಸಲಹೆಗಳು


ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಅನುಸರಿಸುವುದರ ಹೊರತಾಗಿ, ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಉತ್ತಮ ವ್ಯಾಯಾಮವನ್ನು ಅನುಸರಿಸುವುದು ಮುಖ್ಯವಾಗಿದೆ. ವಾರದಲ್ಲಿ ಕನಿಷ್ಟ 6 ದಿನಗಳು ಕನಿಷ್ಟ 30 ನಿಮಿಷ ವ್ಯಾಯಾಮವನ್ನು ಮಾಡಬೇಕು. 


ಫೈಬರ್ ಭರಿತ ಆಹಾರವನ್ನು ಸೇವಿಸಿ : ನಿಮ್ಮ ಆಹಾರದಲ್ಲಿ ಸಾಕಷ್ಟು ಫೈಬರ್ ಅನ್ನು ಸೇರಿಸಿ. ಇದು ನಿಮಗೆ ಹಸಿವಿನಿಂದ ದೂರವಿರಲು ಸಹಾಯ ಮಾಡುತ್ತದೆ. ಫೈಬರ್‌ನ ಉತ್ತಮ ಮೂಲಗಳಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಸೇರಿವೆ.


ಇದನ್ನೂ ಓದಿ: ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ದಿನಾಲೂ ಈ ಎಲೆ ತಿಂದರೆ ಸಾಕು!! 


ಸಂಸ್ಕರಿಸಿದ ಆಹಾರಗಳಿಗೆ ವಿದಾಯ : ಸಂಸ್ಕರಿಸಿದ ಆಹಾರಗಳ ಸೇವನೆ ತಪ್ಪಿಸಿ, ಇದು ಅನಾರೋಗ್ಯಕರ ಕೊಬ್ಬುಗಳು, ಸಕ್ಕರೆ ಮತ್ತು ಉಪ್ಪಿನ ಉತ್ತಮ ಮೂಲವಾಗಿದೆ. ಈ ಆಹಾರಗಳು ನಿಮ್ಮ ತೂಕ ನಷ್ಟ ಪ್ರಯತ್ನಗಳನ್ನು ಹಾಳುಮಾಡಬಹುದು. ಆಹಾರದಲ್ಲಿ ಮುಖ್ಯವಾಗಿ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಮಾಡಿ.


ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಸೇರಿಸಿ : ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಅನ್ನು ಸೇರಿಸುವುದು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. 


ಒತ್ತಡವನ್ನು ಚೆನ್ನಾಗಿ ನಿರ್ವಹಿಸಿ : ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಒತ್ತಡವನ್ನು ನಿರ್ವಹಿಸುವುದು ಮುಖ್ಯವಾಗಿದೆ. ಒತ್ತಡವು ಹಾರ್ಮೋನ್ ಕಾರ್ಟಿಸೋಲ್ ಉತ್ಪಾದನೆಗೆ ಕಾರಣವಾಗಬಹುದು, ಇದು ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ವ್ಯಾಯಾಮ, ಯೋಗ ಮತ್ತು ಧ್ಯಾನದಂತಹ ಆರೋಗ್ಯಕರ ಮಾರ್ಗಗಳನ್ನು ಕಂಡುಕೊಳ್ಳಿ.


ಸೂಚನೆ: ಮೇಲೆ ತಿಳಿಸಲಾದ ಎಲ್ಲಾ ತೂಕ ನಷ್ಟ ಸಲಹೆಗಳನ್ನು ಸಾಮಾನ್ಯ ಮಾಹಿತಿಯಿಂದ ಬರೆಯಲಾಗಿದೆ. ಆದಾಗ್ಯೂ, ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸಿದ ನಂತರವೇ ನಿಮ್ಮ ಆಹಾರ ಮತ್ತು ದೈನಂದಿನ ದಿನಚರಿಯಲ್ಲಿ ಬದಲಾವಣೆಗಳನ್ನು ಮಾಡಲು ಸಲಹೆ ನೀಡಲಾಗುತ್ತದೆ. ಇದನ್ನು ಜೀ ಕನ್ನಡ ನ್ಯೂಸ್‌ ಖಚಿಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.