India top Dating apps : ಕಾಲೇಜಿನ ಗೆಳತಿ/ಗೆಳೆಯ, ಪಕ್ಕದ ಮನೆ ಹುಡುಗ/ಹುಡಿಗಿಗೆ ಲೈನ್‌ ಹೊಡೆದು ಕೈಕೈ ಹಿಡಿದು ತಿರುಗಾಡುವ ಕಾಲ ಈಗಿಲ್ಲ. ಈಗ ಏನಿದ್ದರೂ ಮೊಬೈಲ್‌ನಲ್ಲಿ ಲೈನ್‌ ಹೊಡೆದು ಡೇಟಿಂಗ್‌ ಮಾಡಿ ಹಾಯ್‌.. ಬಾಯ್‌ ಅನ್ನೋದು ಮಾತ್ರ ಚಾಲ್ತಿಯಲ್ಲಿದೆ. ಡೇಟಿಂಗ್‌ ಮಾಡೋಕೂ ಸಂಗಾತಿ ಹುಡುಕೋಕೆ ಕಾಲೇಜು, ಗುಡಿ, ಪಾರ್ಕ್‌ ಅಂತ ಸುತ್ತಬೇಕಿಲ್ಲ. ಆಪ್‌ನಲ್ಲಿ ಸರ್ಚ್‌ ಮಾಡಿ ಮೀಟ್‌ ಮಾಡಿ ಸುತ್ತಾಡಿ ವರ್ಕೌಟ್‌ ಅದ್ರೆ ಮದುವೆ ಇತ್ಯಾದಿ.. ಇಲ್ಲಾ ಅಂದ್ರೆ ನೈಸ್‌ ಟು ಮೀಟ್‌ ಯೂ.. ಗುಡ್‌ ಬೈ ಅನ್ನೋದು. ಸದ್ಯ ಭಾರತದ ಯುವ ಪೀಳಿಗೆ ಇಂತಹ ಆಪ್‌ಗಳ ಹಿಂದೆ ಬಿದ್ದಿದೆ. ಹಾಗಿದ್ರೆ ಟ್ರೇಂಡಿಗ್‌ನಲ್ಲಿರುವ ಡೇಟಿಂಗ್‌ ಆಪ್‌ಗಳು ಯಾವುವು.. ಇಲ್ಲಿವೆ ನೋಡಿ.


COMMERCIAL BREAK
SCROLL TO CONTINUE READING

1. ಬಂಬಲ್(Bumble)


ಈ ಡೇಟಿಂಗ್ ಅಪ್ಲಿಕೇಶನ್ ಪ್ರಸ್ತುತ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬಹಳಷ್ಟು ಜನರು ಇದನ್ನು ಉಪಯೋಗಿಸುತ್ತಿದ್ದಾರೆ. ಫೇಮಸ್‌ ಡೇಟಿಂಗ್‌ ಆಪ್‌ನಲ್ಲಿ ಒಂದಾದ ಟಿಂಡರ್ ಅನ್ನು ಸಹ ಇದು ಹಿಂದಿಕ್ಕಿದೆ. ಈ ಅಪ್ಲಿಕೇಶನ್‌ ಸೆಕ್ಯೂರ್‌ ಆಗಿದ್ದು, ನಕಲಿ ಪ್ರೊಫೈಲ್‌ಗಳ ರಚನೆಯನ್ನು ತಡೆಯುತ್ತದೆ. ಈ ಅಪ್ಲಿಕೇಶನ್ ಉಚಿತವಾಗಿದ್ದರೂ ಸಹ ಪ್ರೀಮಿಯಂನೊಂದಿಗೆ ಸಾಕಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯಬಹುದು. ನೀವು ನಿಜವಾದ ಪ್ರೀತಿಯನ್ನು ಹುಡುಕುತ್ತಿದ್ದರೆ ಇದನ್ನು ಬಳಸಬಹುದು.


ಇದನ್ನೂ ಓದಿ: Neha Bhasin bikini Photos : ಬಾಲಿವುಡ್‌ ಸಿಂಗರ್‌ ಬಿಕಿನಿ ಅವತಾರ ನೋಡಿ ಶಾಕ್‌ ಆದ ಫ್ಯಾನ್ಸ್‌..!


2. ಟಿಂಡರ್(Tinder)


ಭಾರತದಲ್ಲಿ ಮೊದಲು ಪ್ರಾರಂಭವಾದ ಡೇಟಿಂಗ್‌ ಆಪ್‌ ಅಂದ್ರೆ ಟಿಂಡರ್. ಈ ಅಪ್ಲಿಕೇಶನ್‌ ವ್ಯಾಪಕ ಬಳಕೆದಾರರನ್ನು ಹೊಂದಿದ್ದು, ಹೆಚ್ಚು ಜನಪ್ರಿಯವಾಗಿದೆ. ಇದು ಪ್ರತಿಯೊಬ್ಬರಿಗೆ ಸುಲಭವಾಗಿ ಬಳಕೆ ಮಾಡಬಹುದಾದ ವಿನ್ಯಾಸ ಶೈಲಿಯನ್ನು ಹೊಂದಿದೆ. ಹೆಚ್ಚಿನ ವಿಭಾಗಗಳ ಕಿರಿಕಿರಿ ಇಲ್ಲಿಲ್ಲ. ಅಲ್ಲದೆ, ಸಂಪೂರ್ಣ ಗೌಪ್ಯತೆ ರಕ್ಷಣೆಯನ್ನು ಒದಗಿಸುತ್ತದೆ. ಕಡಿಮೆ ಅವಧಿಯಲ್ಲಿ ಯಾರೊಂದಿಗಾದರೂ ನೀವು ಡೇಟಿಂಗ್‌ ಮಾಡಬಹುದು. ಪ್ರೀಮಿಯಂ ಬಳಕೆದಾರರು ಹೆಚ್ಚಿನ ಡೇಟಿಂಗ್ ಆಯ್ಕೆಗಳನ್ನು ಪಡೆಯುತ್ತಾರೆ.


3. ಹ್ಯಾಪೆನ್‌ (Happn)


ಇದು ಎಲ್ಲಾ ಅಪ್ಲಿಕೇಶನ್‌ಗಳಿಗಿಂತಲೂ ವಿಭಿನ್ನವಾಗಿದೆ. ನಿಮ್ಮ ಹತ್ತಿರವಿರುವ ಈ ಆಪ್‌ ಬಳಕೆದಾರರನ್ನು ತೋರಿಸುತ್ತದೆ. ಜಸ್ಟ್‌ ರೋಡ್‌ನಲ್ಲಿ ನೋಡಿದ ಹುಡುಗಿಯೂ ಸಹ ನಿಮಗೆ ಪರಿಚಯವಾಗಬಹುದು. ಒಂದು ವೇಳೆ ಅವರು ಈ ಆಪ್‌ ಬಳಕೆದಾರರಾಗಿದ್ದರೆ ಮಾತ್ರ. ಇನ್ನು ಅಪ್ಲಿಕೇಶನ್‌ನಲ್ಲಿ ನೀವು ಇಷ್ಟ ಪಟ್ಟ ಪ್ರೊಫೈಲ್ ಅನ್ನು ಲೈಕ್‌ ಮಾಡಿದ್ರೆ ಸಾಕು, ನಿಮ್ಮ ಮೇಲೆ ಅವರಿಗೆ ಇಂಟರೆಸ್ಟ್ ಇತ್ತು ಅಂದ್ರೆ.. ನಿಮಗೆ ಸಂಗಾತಿ ಸಿಕ್ಕಂತೆ. ಅಲ್ಲದೆ, ನೀವು ನಿಮ್ಮ ಸಂಗಾತಿ ಜೊತೆಗೆ ವೀಡಿಯೊ ಕರೆ, ಚಾಟ್ ಮಾಡಬಹುದು. ಹಾಪೆನ್‌ ಒಂದು ಲೋಕೆಷನ್‌ ಅಧಾರಿತ ಅಪ್ಲಿಕೇಷನ್‌ ಆಗಿದೆ.


ಇದನ್ನೂ ಓದಿ: ನನಗೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜಾ.. ಇಷ್ಟು ಕೀಳುಮಟ್ಟಕ್ಕೆ ಇಳಿಯೊದಿಲ್ಲ..!


4. ಹೈಸ್ಲೆ(Aisle)


ಈ ಆಪ್‌ ಫರ್ಪೆಕ್ಟ್‌ ಜೀವನ ಸಂಗಾತಿ ಹುಡುಕಾಟದಲ್ಲಿದ್ದವರಿಗೆ ಸೂಕ್ತವಾಗಿದೆ. ಭವಿಷ್ಯದ ಹೆಂಡತಿ, ದೀರ್ಘ ಕಾಲದ ಸಂಬಂಧಕ್ಕೆ ಹುಡುಕಾಟದಲ್ಲಿದ್ದರೆ ಇದನ್ನು ಬಳಸಬಹುದು. ಈ ಅಪ್ಲಿಕೇಶನ್ ಕ್ಯಾಶುಯಲ್ ಡೇಟಿಂಗ್ ಮಾಡಲು ಅಲ್ಲ. ದೀರ್ಘಾವಧಿಯ ಸಂಬಂಧಗಳನ್ನು ಹುಡುಕುತ್ತಿರುವವರಿಗೆ ಉತ್ತಮ ಅಪ್ಲಿಕೇಶನ್‌ ಇದಾಗಿದೆ. ಸುತ್ತಮುತ್ತಲಿನ ಜನರಷ್ಟೇ ಅಲ್ಲ, ಬೇರೆ ದೇಶ ಅಥವಾ ಇನ್ನೊಂದು ನಗರದ ಚಂದಾದಾರರ ಪ್ರೊಫೈಲ್ ಅನ್ನು ನೋಡಿ ಇಷ್ಟಪಡಲು ಈ ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.


5. ಹಿಂಜ್(Hinge)


ನೀವು ಒಂದು ನಿರ್ದಿಷ್ಟವಾದ ಭಾವನೆ, ಹವ್ಯಾಸ, ಜೀವನ ಶೈಲಿ ಹೊಂದಿರು ಸಂಗಾತಿ ಬೇಕು ಎಂದು ಹುಡುಕುವವರಿಗೆ ಇದ ಸೂಪರ್‌ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌ನಲ್ಲಿ, ನೀವು ಪ್ರೊಫೈಲ್ ಚಿತ್ರಗಳು ಮತ್ತು ಬಯೋಗಳನ್ನು ಲೈಕ್‌ ಮಾಡಬಹುದು. ಕಾಮೆಂಟ್‌ಗಳನ್ನು ಸಹ ನೀಡಬಹುದಾಗಿದೆ. ಬಳಕೆದಾರರ ಆಸಕ್ತಿಯ ಪ್ರಕಾರವನ್ನು ಆಧರಿಸಿ, ಇತರ ವ್ಯಕ್ತಿಯನ್ನು ಅರ್ಥಮಾಡಿಕೊಂಡು ನಂತರ ಅವರನ್ನು ಸಂಪರ್ಕಿಸಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.