ಈ ಘಟನೆಗಳು ನಿಮಗೆ ಶ್ರೀಮಂತಿಕೆ ಬರುವ ಶುಭ ಸೂಚನೆ ನೀಡುತ್ತವೆ..! ಸೂಕ್ಷ್ಮವಾಗಿ ಗಮನಿಸಿ
ಇದು ಕಲಿಯುಗ. ಈ ಕಾಲದಲ್ಲಿ ಬದುಕಲು ಹಣ ತುಂಬಾ ಅವಶ್ಯಕ. ಹಣವು ಪ್ರಮುಖ ವಿಷಯವಲ್ಲ, ಆದರೆ ಅಗತ್ಯಗಳನ್ನು ಪೂರೈಸಲು ಧನ ಅತ್ಯವಶ್ಯಕ. ಸದ್ಯ ನಿಮಗೆ ಶ್ರೀಮಂತಿಗೆ ಬರುವ ಮೂನ್ಸೂಚನೆ ನೀಡುವ ಸಂಗತಿಗಳ ಬಗ್ಗೆ ತಿಳಿಯೋಣ.. ಏಕೆಂದ್ರೆ ಉದಾಸಿನ ಮಾಡಿದ್ರೆ ಹಣ ಬರುವುದನ್ನೂ ನೀವು ಕಳೆದುಕೊಳ್ಳಬೇಕಾಗುತ್ತದೆ..
Signs of wealth in astrology : ಈ ಜಗತ್ತಿನಲ್ಲಿ ನಿಮಗೆ ಯಾವುದು ಮುಖ್ಯ ಅಂತ ಕೇಳಿದ್ರೆ, ನೀವು ಹಣ ಅಂತ ಉತ್ತರಿಸುತ್ತೀರಿ. ನಿಮ್ಮ ಉತ್ತರವೂ ಸರಿಯಾಗಿದೆ. ಏಕೆಂದರೆ ಇದು ಕಲಿಯುಗ. ಈ ಕಾಲದಲ್ಲಿ ಬದುಕಲು ಹಣ ಬೇಕೆಬೇಕು. ಹಣ ಪ್ರಮುಖ ವಿಷಯವಲ್ಲ, ಆದರೆ ಅಗತ್ಯಗಳನ್ನು ಪೂರೈಸುವ ಬಹುಮುಖ್ಯ ಮಾರ್ಗ. ಹಣ ಗಳಿಸುವುದು ಅಥವಾ ಹಣ ಪಡೆಯುವುದು ಕೆಟ್ಟ ವಿಷಯವಲ್ಲ.
ಈ ಭೂಮಿಯ ಮೇಲಿನ ಭೌತಿಕ ವಸ್ತುಗಳನ್ನು ಹಣದಿಂದ ಮಾತ್ರ ಪಡೆಯಬಹುದು. ಮನಷ್ಯ ಹಣಕ್ಕಾಗಿ ಹಗಲಿರುಳು ಶ್ರಮಿಸುತ್ತಾನೆ. ಆದರೆ ಎಲ್ಲರಿಗೂ ಧನಲಾಭವಾಗುವುದಿಲ್ಲ. ಕಾರಣ ಅವರ ಹಣೆಬರಹ. ಅವನು ತನ್ನ ಹಣೆಬರಹದಲ್ಲಿ ಎಷ್ಟು ಹಣ ಪಡೆಯುತ್ತಾನೆ ಎಂದಿರುತ್ತದೆಯೋ ಅಷ್ಟು ಶ್ರೀಮಂತಿಕೆ ಅವನಿಗೆ ಲಭಿಸುತ್ತದೆ. ಇಲ್ಲವಾದ್ರೂ ಕಡುಬಡತನದಲ್ಲೇ ಜೀವನ ಕಳೆಯಬೇಕಾಗುತ್ತದೆ. ಶಾಸ್ತ್ರಗಳಲ್ಲಿ, ಸಂಪತ್ತನ್ನು ಪಡೆಯುವ ಮೊದಲು ಪ್ರತಿಯೊಬ್ಬರೂ ಪಡೆಯುವ ಹಲವಾರು ರೀತಿಯ ಚಿಹ್ನೆಗಳು ಇವೆ. ಮಾತಾ ಲಕ್ಷ್ಮಿ ನಿಮ್ಮ ಮನೆಗೆ ಯಾವಾಗ ಭೇಟಿ ನೀಡುತ್ತಾರೆ ಎಂಬುದನ್ನು ತಿಳಿಸುವ ಕೆಲವು ಚಿಹ್ನೆಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.
ಇದನ್ನೂ ಓದಿ: Vastu Tips: ಮನೆಯ ಮುಖ್ಯ ಬಾಗಿಲಿನಲ್ಲಿ ಈ ಕೆಲಸ ಮಾಡಿದ್ರೆ ಲಕ್ಷ್ಮಿದೇವಿ ಓಡಿ ಬರುತ್ತಾಳೆ!
ಹಲ್ಲಿ : ಹಲ್ಲಿಯನ್ನು ನೋಡುವುದು ಒಳ್ಳೆಯ ಶಕುನವೆಂದು ಪರಿಗಣಿಸಲಾಗುತ್ತದೆ. ಹಲ್ಲಿ ತುಳಸಿ ಗಿಡದ ಸುತ್ತಲೂ ತಿರುಗುತ್ತಿದ್ದರೆ, ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂದು ಅರ್ಥಮಾಡಿಕೊಳ್ಳಿ.
ಕನಸು : ನಿಮ್ಮ ಕನಸಿನಲ್ಲಿ ಗೂಬೆ, ಪೊರಕೆ, ಆನೆ ಮತ್ತು ಗುಲಾಬಿ ಹೂವು ಕಂಡರೆ, ಇದು ಸಾಮಾನ್ಯ ಕನಸಲ್ಲ. ಇದು ತಾಯಿ ಲಕ್ಷ್ಮಿಯ ಆಗಮನದ ಸಂಕೇತವಾಗಿದೆ.
ಗುಬ್ಬಚ್ಚಿ ಮನೆಯಲ್ಲಿ ಗೂಡು ಕಟ್ಟುತ್ತದೆ : ಗುಬ್ಬಚ್ಚಿ ಮನೆಯಲ್ಲಿ ಗೂಡು ಕಟ್ಟಿದ್ರೆ ಅದನ್ನು ತೆಗೆದುಹಾಕುವವರೇ ಹೆಚ್ಚು ಆದ್ರೆ, ಇದನ್ನು ಮಾಡಬೇಡಿ. ನಿಮ್ಮ ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದರೆ ಶುಭ ಶಕುನ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಮಾತಾ ಲಕ್ಷ್ಮಿಯ ಆಗಮನದ ಮೊದಲ ಸಂಕೇತ ಇದು.
ಪೊರಕೆ : ಪ್ರತಿ ಮನೆಯಲ್ಲೂ ಪೊರಕೆ ಬಳಸುತ್ತಾರೆ. ಜ್ಯೋತಿಷ್ಯದಲ್ಲಿ, ಪೊರಕೆಯನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಎಂದಿಗೂ ಕಾಲಿನಿಂದ ತುಳಿಯಬಾರದು. ಶಾಸ್ತ್ರಗಳ ಪ್ರಕಾರ, ಪೊರಕೆ ನೋಡಿದರೆ, ಅದು ಒಳ್ಳೆಯ ಸಂಕೇತ. ನಿಮ್ಮ ಮನೆಗೆ ಲಕ್ಷ್ಮಿ ಶೀಘ್ರದಲ್ಲೇ ಆಗಮಿಸುತ್ತಾಳೆ ಎಂದರ್ಥ.
ಹಣ ಪಡೆಯುವುದು : ರಸ್ತೆಯಲ್ಲಿ ಎಲ್ಲಿಂದಾದರೂ ಹಣ ಸಿಕ್ಕರೆ ಅದು ತಾಯಿ ಲಕ್ಷ್ಮಿ ದಯೆ ತೋರುವ ಸಂಕೇತ. ಈ ಹಣವನ್ನು ದೇವಸ್ಥಾನದಲ್ಲಿ ಅರ್ಪಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ