International Women’s Day 2023 Wishes : ಪ್ರತಿ ವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಅಮ್ಮನಾಗಿ, ಗೆಳತಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಮಗಳಾಗಿ... ಅನೇಕ ಪಾತ್ರಗಳಲ್ಲಿ ಹೆಣ್ಣು ಪಾತ್ರವಹಿಸಿತ್ತಾಳೆ. ಹೆಣ್ಣಿನ ತ್ಯಾಗ, ಪರಿಶ್ರಮ ಎಂದಿಗೂ ಮನ್ನಣೀಯ. ಇಂದು ಮಹಿಳೆಯರು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ನಿಮ್ಮ ಜೀವನದಲ್ಲಿರುವ ಮಹಿಳೆಯರಿಗೆ ವಿಶೇಷವಾಗಿ ಶುಭಕೋರಲು ಇಲ್ಲಿ ಸಂದೇಶಗಳಿವೆ.  


COMMERCIAL BREAK
SCROLL TO CONTINUE READING

ಅವಳು ಕನಸುಗಾರ್ತಿ, ಅವಳು ನಂಬಿಕೆಯುಳ್ಳವಳು, ಅವಳು ಅಂದುಕೊಂಡಿದ್ದನು ಸಾಧಿಸುವವಳು.. ಅವಳೇ "ನೀವು".. ಮಹಿಳಾ ದಿನಾಚರಣೆಯ ಶುಭಾಶಯಗಳು! 


ನಾವು ಮುದ್ದಾದ ಮಗಳಂದಿರು, ನಾವು ಸುಂದರ ಸಹೋದರಿಯರು, ನಾವು ಮೋಹಕ ಪ್ರೇಮಿಗಳು, ನಾವು ಪ್ರೀತಿಯ ಪತ್ನಿಯರು, ನಾವು ಮಮತೆಯ ತಾಯಂದಿರು, ನಾವು ಶಕ್ತಿಯ ಮೂಲ, ನಾವು ಮಹಿಳೆಯರು, ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು!


ಇದನ್ನೂ ಓದಿ : Holi 2023 : ಬಣ್ಣಗಳಲ್ಲಿ ಮಿಂದೆದ್ದ ನಟ - ನಟಿಯರು.. ಹೀಗಿತ್ತು ಸೆಲಿಬ್ರಿಟಿಗಳ ಹೋಳಿ


ತಾಯ್ತನದಿಂದ ಆರಂಭಿಸಿ ಹೆಂಡತಿ, ತಂಗಿ, ಕೊನೆಗೆ ಮಗಳವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪಾತ್ರ ಬಹುಮುಖ್ಯ. ಹಣ್ಣಿಲ್ಲದೇ ಈ ಜೀವಕ್ಕೆ ಅಸ್ತಿತ್ವವೇ ಇಲ್ಲ. ಮಹಿಳಾ ದಿನಾಚರಣೆಯ ಶುಭಾಶಯಗಳು! 


ಮಹಿಳೆಯರಿಲ್ಲದೇ ಇದ್ದಿದ್ದರೆ ಜೀವನ ಇಷ್ಟು ಸುಂದರ ಮತ್ತು ಸುಖಮಯವಾಗಿರುತ್ತಿರಲಿಲ್ಲ. ನಿಮ್ಮ ತ್ಯಾಗ, ಸಹನೆ, ಮಮತೆ, ಪ್ರೀತಿಗೆ ನಮ್ಮದೊಂದು ಸಲಾಂ.. ಮಹಿಳಾ ದಿನಾಚರಣೆಯ ಶುಭಾಶಯಗಳು. 


ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಮಹಿಳೆಯರಿಗೆ ಮತ್ತು ಹೋರಾಟವನ್ನು ಮುಂದುವರೆಸಿದ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ನಿಮ್ಮ ಧೈರ್ಯ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. 


ತಮ್ಮ ಸಮುದಾಯಗಳಲ್ಲಿ ಮತ್ತು ಪ್ರಪಂಚದಲ್ಲಿ ಬದಲಾವಣೆಯನ್ನು ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.


ನಾನು ಇರುವುದು ನಿನ್ನಿಂದ.. ನನ್ನನ್ನು ಈ ಜಗತ್ತಿಗೆ ಕರೆತಂದ ಮತ್ತು ನನಗೆ ಈ ಸುಂದರ ಜೀವನವನ್ನು ನೀಡಿದಕ್ಕಾಗಿ ಧನ್ಯವಾದ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಮ್ಮ.


ನಿನ್ನಂತೆ ಬೇರೆ ಯಾರೂ ಇಲ್ಲ. ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು!


ಇದನ್ನೂ ಓದಿ : ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗುಡ್‌ನ್ಯೂಸ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.