ಬೆಂಗಳೂರು : ಮೊಟ್ಟೆ ಎಂದರೆ ಹೆಚ್ಚಿನವರು ಬೆಳಗಿನ ಉಪಾಹಾರಕ್ಕಾಗಿ ತಿನ್ನಲು ಇಷ್ಟಪಡುತ್ತಾರೆ (Benefits of egg). ಆದರೆ ಹೊಸ ಅಧ್ಯಯನದ ಪ್ರಕಾರ ಹೆಚ್ಚು ಮೊಟ್ಟೆಗಳನ್ನು ತಿನ್ನುವುದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ (Type 2 diabetes). ಸಂಶೋಧಕರ ಪ್ರಕಾರ, ಪ್ರತಿದಿನ ಒಂದಕ್ಕಿಂತ  ಹೆಚ್ಚು ಮೊಟ್ಟೆಯನ್ನು ತಿನ್ನುವ ಜನರಲ್ಲಿ ಮಧುಮೇಹದ ಅಪಾಯವನ್ನು 60 ಪ್ರತಿಶತದಷ್ಟು ಹೆಚ್ಚಿರುತ್ತದೆ. 


COMMERCIAL BREAK
SCROLL TO CONTINUE READING

ಮೊಟ್ಟೆ ತಿನ್ನುವುದರಿಂದ ಮಧುಮೇಹದ ಅಪಾಯ ಹೆಚ್ಚು :  
ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯವು ಚೀನಾ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಕತಾರ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಈ ಅಧ್ಯಯನವನ್ನು ನಡೆಸಿದೆ.ಈ ಅಧ್ಯಯನವನ್ನು 1991 ರಿಂದ 2009 ರವರೆಗೆ ನಡೆಸಲಾಯಿತು. ಇದರಲ್ಲಿ ಮೊಟ್ಟೆ ತಿನ್ನುವುದರಿಂದ ಜನರ ಮೇಲೆ ಆಗುವ ಪರಿಣಾಮದ ಬಗ್ಗೆ ಮೊದಲ ಅಧ್ಯಯನ ನಡೆಸಲಾಯಿತು. ಟೈಪ್ -2 ಮಧುಮೇಹದಿಂದ (Type 2 diabetes) ಬಳಲುತ್ತಿದ್ದರೆ ಅವರು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಅವರ ಆರೋಗ್ಯದ ಮೇಲೆ ಅವರು ಸೇವಿಸುವ ಆಹಾರ ಬಹಳ ಮುಖ್ಯ ಪಾತ್ರ ವಹಿಸುತ್ತದೆ.  ಆದ್ದರಿಂದ ಯಾವ ಆಹಾರದ ಅಂಶಗಳು ಈ ರೋಗವನ್ನು ಹೆಚ್ಚಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ.  


ಇದನ್ನೂ ಓದಿ : Milk Side Effects: ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಹಾಲು ಕುಡಿಯಬೇಡಿ


ಡಯೆಟ್ ಮೇಲಾಗುವ ಪರಿಣಾಮ : 
ವಿಜ್ಞಾನಿಗಳ ಪ್ರಕಾರ, ಬೇಳೆ ಕಾಳುಗಳು ಹಸಿರು ತರಕಾರಿಗಳನ್ನು ಬಿಟ್ಟು ಸಂಸ್ಕರಿತ ಆಹಾರಗಳು (Processed food), ಹೆಚ್ಚಿನ ಪ್ರಮಾಣದ ಮಾಂಸಾಹಾರ, ಕುರುಕಲು ತಿಂಡಿ, ಹೆಚ್ಚಿನ ಎನರ್ಜಿ ಇರುವ ಆಹಾರಗಳನ್ನು ತಿನ್ನುವುದರಿಂದ ಮಧುಮೇಹದ ಅಪಾಯ ಹೆಚ್ಚಾಗಿರುತ್ತದೆ. ಅಲ್ಲದೆ ಇವುಗಳ ಜೊತೆಗೆ ಇತ್ತೀಚಿನ ಅಧ್ಯಯನದಲ್ಲಿ ಬಯಲಾದಂತೆ, ಮೊಟ್ಟೆಗಳ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ ಮೊಟ್ಟೆ (Egg) ತಿನ್ನುವವರ ಸಂಖ್ಯೆ ದ್ವಿಗುಣಗೊಂಡಿದೆ. ದೀರ್ಘಕಾಲದವರೆಗೆ ಮೊಟ್ಟೆಗಳನ್ನು ತಿನ್ನುವುದರಿಂದ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆಯೇ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಈ ಅಧ್ಯಯನದಲ್ಲಿ ಮಾಡಲಾಗಿದೆ. 


ಮೊಟ್ಟೆ ಮತ್ತು ಮಧುಮೇಹ :
ದಿನಕ್ಕೆ ಸರಾಸರಿ 38 ಗ್ರಾಂಗಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸುವ ಜನರಲ್ಲಿ  ಮಧುಮೇಹದ ಅಪಾಯ,  25 ಪ್ರತಿಶತದಷ್ಟು ಹೆಚ್ಚಿರುತ್ತದೆ. 50 ಗ್ರಾಂಗಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸುವ ಅಥವಾ ದಿನಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸುವ ಜನರಲ್ಲಿ  ಮಧುಮೇಹದ ಅಪಾಯವು 60 ಪ್ರತಿಶತದಷ್ಟು ಹೆಚ್ಚಿರುತ್ತದೆ. ಒಂದು ಮೊಟ್ಟೆಯ ತೂಕವು 50 ರಿಂದ 70 ಗ್ರಾಂ ಆಗಿರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ (Side effects of diabetes). ವಾರದಲ್ಲಿ ಸರಾಸರಿ 4 ಮೊಟ್ಟೆಗಳನ್ನು ಸೇವಿಸಿದರೆ ಅದು ಸಾಮಾನ್ಯವಾಗಿದೆ. ಈ ಫಲಿತಾಂಶಗಳ ಪ್ರಕಾರ, ಮೊಟ್ಟೆಯ ಹೆಚ್ಚಿನ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು. ಆದರೆ, ಮೊಟ್ಟೆ ಸೇವನೆಗೂ ಮಧುಮೇಹಕ್ಕೂ ಏನು ಸಂಬಂಧ, ಯಾವ ಕಾರಣಕ್ಕೆ ಹೀಗಾಗುತ್ತದೆ ಎನ್ನುವ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎನ್ನುತ್ತಾರೆ ವಿಜ್ಞಾನಿಗಳು.  


ಇದನ್ನೂ ಓದಿ : ದೇಹದಲ್ಲಿ ಇಮ್ಯುನ್ ಸಿಸ್ಟಮ್ ದುರ್ಬಲವಾಗಿದೆ ಎನ್ನುವುದನ್ನು ತೋರಿಸುತ್ತದೆ ಈ ನಾಲ್ಕು ಲಕ್ಷಣಗಳು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.