ಮದುವೆಗೂ ಮುಂಚೆ ʼಕಾಮʼ ಎನ್ನುವುದು ಕೆಟ್ಟದ್ದೇ? ನೀವು ತಿಳಿಯಬೇಕಾದ ನಗ್ನ ಸತ್ಯಗಳಿವು!!
Relationship Tips: ದೇಹದೊಳಗೆ ಮನಸ್ಸು ಅನ್ನುವುದು ಒಂದು ಇರುತ್ತದೆ. ಆತ್ಮವೂ ದೇಹಕ್ಕೆ ಅಂಟಿಕೊಂಡಿದೆ. ಇವೆರಡೂ ಅರ್ಥವಾಗದಿದ್ದರೆ ಕಾಮವು ಕೇವಲ ದೈಹಿಕ ಮಟ್ಟವಾಗಿಯೇ ಉಳಿಯುತ್ತದೆ. ಕೆಲವರಿಗೆ ಕೇವಲ ದೇಹ ಆಕರ್ಷಣೆ ಸಾಕಾಗುತ್ತದೆ, ಇನ್ನು ಕೆಲವರು ಮನಸ್ಸನ್ನು ತಿಳಿಯುತ್ತಾರೆ. ಮನಸ್ಸು ತಿಳಿದಾಗ ಪ್ರೀತಿ ಉಂಟಾಗುತ್ತದೆ..
Is s*x before marriage bad?: ʼಕಾಮʼವೆನ್ನುವುದು ದೇಹಕ್ಕೆ ಸ೦ಬಂಧಪಟ್ಟಿದ್ದು, ಅದು ತುಂಬಾ ಕೆಟ್ಟದ್ದು ಅಂತಾ ಬಹುತೇಕರು ತಿಳಿದುಕೊಂಡಿದ್ದಾರೆ. ಒಂದು ವೇಳೆ ಅದು ದೈಹಿಕವೇ ಆಗಿದ್ದರೆ ಯಾವುದೇ ಒಬ್ಬ ವ್ಯಕ್ತಿ ಹೆಂಡತಿಯೊಂದಿಗೆ ನೂರಾರು ಬಾರಿ ಮಲಗಿದರೂ ಅಥವಾ ಬೇರೆ ಬೇರೆ ಹೆಣ್ಣುಗಳೊಂದಿಗೆ ಅದೆಷ್ಟೇ ಬಾರಿ ಮಲಗಿದರೂ ಕೆಲವರಿಗೆ ಯಾಕೆ ತೃಪ್ತಿ ಸಿಗುವುದಿಲ್ಲ? ಈ ಪ್ರಶ್ನೆ ನಿಮ್ಮನ್ನೂ ಸಹ ಕಾಡಿರಬಹುದು. ಆದರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ...
ದೇಹದೊಳಗೆ ಮನಸ್ಸು ಅನ್ನುವುದು ಒಂದು ಇರುತ್ತದೆ. ಆತ್ಮವೂ ದೇಹಕ್ಕೆ ಅಂಟಿಕೊಂಡಿದೆ. ಇವೆರಡೂ ಅರ್ಥವಾಗದಿದ್ದರೆ ಕಾಮವು ಕೇವಲ ದೈಹಿಕ ಮಟ್ಟವಾಗಿಯೇ ಉಳಿಯುತ್ತದೆ. ಕೆಲವರಿಗೆ ಕೇವಲ ದೇಹ ಆಕರ್ಷಣೆ ಸಾಕಾಗುತ್ತದೆ, ಇನ್ನು ಕೆಲವರು ಮನಸ್ಸನ್ನು ತಿಳಿಯುತ್ತಾರೆ. ಮನಸ್ಸು ತಿಳಿದಾಗ ಪ್ರೀತಿ ಉಂಟಾಗುತ್ತದೆ.. ಆಗ ಕಾಮವೆನ್ನುವುದು ಮನಸ್ಸನ್ನು ತಲುಪುತ್ತದೆ ಮತ್ತು ಮನಸ್ಸು ಆನಂದಗೊಳ್ಳುತ್ತದೆ. ಬಹಳ ವಿರಳವಾಗಿ ಕಾಮ ಆತ್ಮವನ್ನು ತಲುಪುತ್ತದೆ. ಇದಕ್ಕೆ ಇನ್ನೊಬ್ಬ ವ್ಯಕ್ತಿಯ ಗುಣಮಟ್ಟ ಮತ್ತು ಪೂರ್ವಾಪರ ಎಲ್ಲವೂ ತಿಳಿಯುತ್ತದೆ.
ಇದನ್ನೂ ಓದಿ: ತಾಯಿಯನ್ನ ಹೊರಗೆ ಹಾಕಲು ಹೆಂಡತಿ ಹೇಳಿದಾಗ ಇಬ್ಬರ ಮೇಲೂ ಪ್ರೀತಿ ಇರುವ ಗಂಡಸು ಏನು ಮಾಡಬೇಕು?
ವ್ಯಕ್ತಿ ಕ್ಷಣ ಕ್ಷಣಗಳಲ್ಲಿ ಏನೂ ಆಲೋಚನೆ ಮಾಡುತ್ತಾನೆ ಅನ್ನುವುದೂ ಸಹ ಇದರಿಂದ ತಿಳಿಯುತ್ತದೆ. ಅದು ಅನುಭವಕ್ಕೆ ಬರುವುದು.. ಕಂಡದ್ದು, ಕಾಣಲಾರದು ಅನುಭವಕ್ಕೆ ಬಂದಾಗ ಆಗ ಅಲ್ಲಿ ಪ್ರೇಮ ಸಂಭವಿಸುತ್ತದೆ, ಸಮರ್ಪಣೆ ಉಂಟಾಗುತ್ತದೆ ಮತ್ತು ಶರಣಾಗತಿ ಘಟಿಸುತ್ತದೆ. ಆಗ ವ್ಯಕ್ತಿಗಳಿಬ್ಬರೂ ವ್ಯಕ್ತಿಗಳಾಗಿರದೆ ಭಾವದಲ್ಲಿ ಒಂದುಗೂಡುತ್ತಾರೆ.
ಆವಾಗ ಅಭೂತಪೂರ್ವ ಆನಂದ ಲಭಿಸುತ್ತದೆ, ಅದುವೆ ಕಾಮದ ಪರಾಕಾಷ್ಠತೆ. ಆ ಕ್ಷಣದಲ್ಲಿ ಎರಡು ಆತ್ಮಗಳು ನಲಿಯುತ್ತವೆ.. ಹೀಗೇಕೆ ಎಲ್ಲರಿಗೂ ಆಗದು ಈ ಬಗ್ಗೆ ಬಹಳ ಬಹಳ ಹೇಳುವುದಿರುತ್ತದೆ. ಕಾಮ ಎಂಬುದು ಕೆಟ್ಟದ್ದಲ್ಲ, ಆದರೆ ಅದನ್ನು ನೋಡುವ ರೀತಿ ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವ ರೀತಿ ಕೆಟ್ಟದಾಗಿರುತ್ತದೆ. ಕಾಮ, ಕ್ರೋಧ, ಮತ್ಸರ ಈ ಎಲ್ಲವೂ ನೈಸರ್ಗಿಕವಾಗಿರುವುದರಿಂದ ನೈಸರ್ಗಿಕವಾಗಿ ಯಾವುದೂ ಸಹ ಕೆಟ್ಟದ್ದಲ್ಲ. ಆದರೆ ನೈಸರ್ಗಿಕವಾಗಿರುವುದನ್ನು ಬಳಸಿಕೊಳ್ಳುವ ಈ ಮನುಷ್ಯನೇ ಕೆಟ್ಟವನು ಅಂತಾ ಹೇಳಬಹುದು.
ಇದನ್ನೂ ಓದಿ: ಈ ವಸ್ತುಗಳು ಮನೆಯಲ್ಲಿ ಇರುವವರೆಗೂ ಸುಖ, ಸಮೃದ್ಧಿ ಇರುವುದಿಲ್ಲ, ಇದ್ದರೆ ತಕ್ಷಣ ತೆಗೆದುಬಿಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.