ನವದೆಹಲಿ: ಮನೆಯಲ್ಲಿ ಇರುವೆಗಳು ಕಾಣುವುದು ಸಾಮಾನ್ಯ. ಮಳೆಗಾಲದಲ್ಲಿ ಇರುವೆಗಳು ಹೆಚ್ಚಾಗಿ ಬರುತ್ತವೆ. ಹಲವು ಬಾರಿ ಅಡುಗೆ ಮನೆಯಲ್ಲಿನ ಆಹಾರ ಪದಾರ್ಥಗಳಲ್ಲೂ ಇರುವೆಗಳು ಬರುತ್ತವೆ. ಹೆಚ್ಚಿನ ಜನರು ಅದನ್ನು ನಿರ್ಲಕ್ಷಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ಇರುವೆಗಳು ವಿಶೇಷ ಚಿಹ್ನೆಗಳನ್ನು ನೀಡುತ್ತವೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಪ್ಪು ಇರುವೆ ಇದ್ದರೆ ಶುಭ. ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿ ಬರಲಿದೆ ಎಂದು ಇವು ಸೂಚಿಸುತ್ತವೆ. ಇದಲ್ಲದೇ ಮನೆಯಲ್ಲಿ ಕಪ್ಪು ಇರುವೆಗಳು ಬಂದರೆ ಮುಂದಿನ ದಿನಗಳಲ್ಲಿ ಸುಖ-ಶಾಂತಿ ವೃದ್ಧಿಯಾಗಲಿದೆ ಎಂದರ್ಥ. ಇದರೊಂದಿಗೆ ಸಂತೋಷವೂ ಹೆಚ್ಚಾಗುತ್ತದೆ.


ಕಪ್ಪು ಇರುವೆಗಳಿಗೆ ಆಹಾರ ನೀಡುವುದು ಮಂಗಳಕರ:


ಕಪ್ಪು ಇರುವೆಗಳಿಗೆ ಆಹಾರವನ್ನು ನೀಡುವುದು ಧರ್ಮಗ್ರಂಥಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಅಡುಗೆ ಮನೆಯಲ್ಲಿನ ಅನ್ನದ ಪಾತ್ರೆಯಿಂದ ಇರುವೆಗಳು ಹೊರ ಬರುತ್ತಿದ್ದರೆ ಅದೊಂದು ಶುಭ ಸೂಚನೆ. ಈ ಕಾರಣದಿಂದಾಗಿ, ಶೀಘ್ರದಲ್ಲೇ ಸಂಪತ್ತು ಹೆಚ್ಚಾಗುತ್ತದೆ. ಇದಲ್ಲದೇ ಹಣಕಾಸಿನ ಸಮಸ್ಯೆಗೆ ಪರಿಹಾರವೂ ಹೊರಬರುತ್ತದೆ. ಕಪ್ಪು ಇರುವೆಗಳು ಸಂತೋಷ ಹೆಚ್ಚಳವನ್ನು ಸೂಚಿಸುತ್ತವೆ.


ಕೆಂಪು ಇರುವೆಗಳು ಮನೆಗೆ ಬರುವುದು ಅಶುಭ:


ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಂಪು ಇರುವೆಗಳ ಉಪಸ್ಥಿತಿಯು ಅಶುಭ ಚಿಹ್ನೆಗಳನ್ನು ನೀಡುತ್ತದೆ. ಮುಂಬರುವ ಸಮಯದಲ್ಲಿ ಕೆಲವು ದೊಡ್ಡ ತೊಂದರೆಗಳು ಉದ್ಭವಿಸುತ್ತವೆ ಎಂದು ನಂಬಲಾಗಿದೆ. ಇದಲ್ಲದೆ, ಹಣದ ವೆಚ್ಚವನ್ನು ಸೂಚಿಸುತ್ತವೆ. ಮತ್ತೊಂದೆಡೆ, ಕೆಂಪು ಇರುವೆಗಳು ತಮ್ಮ ಬಾಯಿಯಲ್ಲಿ ಮೊಟ್ಟೆಗಳನ್ನು ಹೊತ್ತುಕೊಂಡು ಮನೆಯಲ್ಲಿ ಎಲ್ಲಿಯಾದರೂ ಕಂಡುಬಂದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಿನ್ನಲು ಏನಾದರೂ ನೀಡಬೇಕು. ಹಾಗೆ ಮಾಡುವುದು ಮಂಗಳಕರ.


ಇರುವೆಗಳು ಯಾವ ದಿಕ್ಕಿನಿಂದ ಬರುತ್ತಿವೆ?


ಇರುವೆಗಳು ನಿರ್ದಿಷ್ಟ ದಿಕ್ಕಿನಿಂದ ಮನೆಯೊಳಗೆ ಬಂದರೆ, ಅದು ಒಳ್ಳೆಯ ಸಂಕೇತವಾಗಿದೆ. ಕಪ್ಪು ಇರುವೆಗಳು ಉತ್ತರ ದಿಕ್ಕಿನಿಂದ ಮನೆಗೆ ಪ್ರವೇಶಿಸುವುದು ಶುಭ. ಇದಲ್ಲದೇ ಇರುವೆಗಳು ದಕ್ಷಿಣ ದಿಕ್ಕಿನಿಂದ ಬಂದರೆ ಲಾಭವಿದೆ. ಮನೆಯ ಪೂರ್ವ ದಿಕ್ಕಿನಲ್ಲಿ ಇರುವೆಗಳ ಪ್ರವೇಶವು ಒಳ್ಳೆಯ ಸುದ್ದಿಯ ಸೂಚಕವಾಗಿದೆ. ಪಶ್ಚಿಮದಿಂದ ಇರುವೆಗಳ ಆಗಮನವು ವಿದೇಶ ಪ್ರವಾಸದ ಲಾಭವನ್ನು ನೀಡುತ್ತದೆ.


(Disclaimer:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಇದನ್ನೂ ಓದಿ: Corona Vaccine:ಮಕ್ಕಳ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ, ಟಫ್ ರೂಲ್ಸ್‌ ಜಾರಿ ಬಗ್ಗೆ ಸುಳಿವು ನೀಡಿದ ಬೊಮ್ಮಾಯಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.