Krishna Janmashtami 2022 Upay: ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 18 ಮತ್ತು 19 ರಂದು ಆಚರಿಸಲಾಗುತ್ತದೆ. ಹಲವಾರು ವರ್ಷಗಳ ಹಿಂದೆ ದ್ವಾಪಾರ ಯುಗದಲ್ಲಿ ತಾಯಿ ದೇವಕಿ ಮತ್ತು ವಸುದೇವ ಮಧ್ಯರಾತ್ರಿ ಮಥುರಾದ ಜೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವೆ ವಿಷ್ಣುವಿನ ಎಂಟನೇ ಅವತಾರವಾದ ಶ್ರೀ ಕೃಷ್ಣ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಗಿದೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ಬಾಲ ಸ್ವರೂಪವಾಗಿರುವ ಬಾಲಗೋಪಾಲನನ್ನು  ಸಕಲ ಶೃದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಈ ವರ್ಷದ ಜನ್ಮಾಷ್ಟಮಿಯು ಅತ್ಯಂತ ದುರ್ಲಭವಾಗಿರುವ ವೃದ್ಧಿಯೋಗ ಹಾಗೂ ಧ್ರುವಯೋಗವನ್ನು ಸಂಯೋಜಿಸುತ್ತಿದೆ, ಇದು ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ವೃದ್ಧಿ ಯೋಗದಲ್ಲಿ, ಮನೆಯಲ್ಲಿ ಕೃಷ್ಣನ ಜೊತೆಗೆ ಲಕ್ಷ್ಮಿ ಸ್ವರೂಪಿಯಾಗಿರುವ ರಾಧೆಗೆ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಜನ್ಮಾಷ್ಟಮಿಯ ಮಂಗಳಕರ ಯೋಗ ಮತ್ತು ಅಂದು ಮಾಡಬೇಕಾದ ಉಪಾಯಗಳನ್ನು ತಿಳಿದುಕೊಳ್ಳೋಣ ಬನ್ನಿ


ಕೃಷ್ಣ ಜನ್ಮಾಷ್ಟಮಿ 2022 ಶುಭ ಯೋಗ
ವೃದ್ಧಿ ಯೋಗವು ಆಗಸ್ಟ್ 17 ರಂದು ರಾತ್ರಿ 8.57 ರಿಂದ ಪ್ರಾರಂಭವಾಗಲಿದೆ, ಇದು ಆಗಸ್ಟ್ 18 ರಂದು ರಾತ್ರಿ 8.42 ರವರೆಗೆ ಇರಲಿದೆ. ಮತ್ತೊಂದೆಡೆ, ಧ್ರುವ ಯೋಗವು ಆಗಸ್ಟ್ 18 ರಂದು ಬೆಳಿಗ್ಗೆ 8.41 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 19 ರಂದು ರಾತ್ರಿ 8.59 ರವರೆಗೆ ಇರಲಿದೆ. ಈ ಮಂಗಳಕರ ಯೋಗಗಳಲ್ಲಿ, ರಾಧಾ-ಕೃಷ್ಣರ ಆರಾಧನೆಯು ಪುಣ್ಯಪ್ರಾಪ್ತಿಗೆ ಕಾರಣವಾಗುತ್ತದೆ.


ಕೃಷ್ಣ ಜನ್ಮಾಷ್ಟಮಿ ಉಪಾಯಗಳು 
ಶ್ರೇಯೋಭಿವೃದ್ಧಿಗೆ ಈ ಉಪಾಯ ಅನುಸರಿಸಿ

ಈ ದಿನ ಕೃಷ್ಣನ ಪೂಜೆಯ ವೇಳೆ ಶ್ರೀ ಕೃಷ್ಣನಿಗೆ ವೀಳ್ಯದೆಲೆಯನ್ನು ಅರ್ಪಿಸಿ. ಇದರ ನಂತರ, ಈ ಎಲೆಯ ಮೇಲೆ ಕುಂಕುಮದಿಂದ ಶ್ರೀ ಯಂತ್ರವನ್ನು ರಚಿಸಿ ಮತ್ತು ಅದನ್ನು ತಿಜೋರಿ ಅಥವಾ ಹಣ ಇರಿಸುವ ಸ್ಥಳದಲ್ಲಿ ಇರಿಸಿ. ಇದರಿಂದ ಬಡತನ ಎಂದೂ ಬರುವುದಿಲ್ಲ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.


ಸಂತಾನ ಭಾಗ್ಯಕ್ಕೆ ಈ ಉಪಾಯ ಅನುಸರಿಸಿ
ಮಕ್ಕಳಿಲ್ಲದ ದಂಪತಿಗಳು ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ಹಸು ಅಥವಾ ಕರುವಿನ ವಿಗ್ರಹವನ್ನು ತರಬೇಕು. ಶ್ರೀಕೃಷ್ಣನ ಜೊತೆಗೆ ಅವುಗಳಿಗೂ ಕೂಡ ಯಥಾವತ್ತಾಗಿ ಪೂಜೆ ಸಲ್ಲಿಸಬೇಕು. ಇದು ಸಂತಾನ ಸುಖ ನೀಡುತ್ತದೆ ಮತ್ತು ಸಂತಾನ ಭಾಗ್ಯದಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ ಎನ್ನಲಾಗಿದೆ. 


ಆದಾಯ ವೃದ್ಧಿಗೆ ಈ ಉಪಾಯ ಅನುಸರಿಸಿ
ಉದ್ಯೋಗದಲ್ಲಿ ಬಡ್ತಿ ಮತ್ತು ಆದಾಯ ಹೆಚ್ಚಳಕ್ಕಾಗಿ, ಜನ್ಮಾಷ್ಟಮಿಯಂದು 7 ಕನ್ಯೆಯರಿಗೆ ಖೀರ್ ಅಥವಾ ಬಿಳಿ ಸಿಹಿತಿಂಡಿಗಳನ್ನು ವಿತರಿಸಿ. ಜನ್ಮಾಷ್ಟಮಿಯ ನಂತರ ಸತತ ಐದು ಶುಕ್ರವಾರ ಈ ಪರಿಹಾರವನ್ನು ಮಾಡಿ.


ಇದನ್ನೂ ಓದಿ-ಇನ್ನೆರಡು ದಿನಗಳಲ್ಲಿ ಈ ನಾಲ್ಕು ರಾಶಿಯವರ ಭವಿಷ್ಯ ಬೆಳೆಗಲಿದ್ದಾನೆ ಸೂರ್ಯ


ಕೇಸರಿ-ಶ್ರೀಗಂಧ ತಿಲಕ
ಜನ್ಮಾಷ್ಟಮಿಯಂದು ಕೇಸರಿ ಅಥವಾ ಶ್ರೀಗಂಧದಲ್ಲಿ ಪವಿತ್ರ ಜಲವನ್ನು ಬೆರೆಸಿದ ತಿಲಕವನ್ನು ಹಚ್ಚಿ. ಅಲ್ಲದೆ, ಕೃಷ್ಣನಿಗೆ ಗೋಪಿ ಚಂದನದಿಂದ ಅಲಂಕರಿಸಿ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಹಣದ ಕೊರತೆ ನಿವಾರಣೆಯಾಗುತ್ತದೆ.


ಇದನ್ನೂ ಓದಿ-ಜನ್ಮಾಷ್ಟಮಿ ದಿನದಂದು ರಾಶಿಗನುಗುಣವಾಗಿ ಈ ಕೆಲಸ ಮಾಡಿದರೆ ಜೀವನಪೂರ್ತಿ ಸಂತೋಷವನ್ನೇ ಕರುಣಿಸುತ್ತಾನೆ ಶ್ರೀಕೃಷ್ಣ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...