Plant Attract Snakes: ಪ್ರತಿಯೊಬ್ಬರೂ ತಮ್ಮ ಮನೆಯ ಅಂಗಳದಲ್ಲಿ ಬಣ್ಣಬಣ್ಣದ ಮತ್ತು ಪರಿಮಳಯುಕ್ತ ಹೂವುಗಳನ್ನು ಬೆಳೆಸಬೇಕೆಂದು ಇಷ್ಟಪಡುತ್ತಾರೆ. ಇದು ಮನೆಯ ಅಂದ ಹೆಚ್ಚಿಸುವುದು ಮಾತ್ರವಲ್ಲದೆ, ಧನಾತ್ಮಕ ವಾತಾವರಣವನ್ನು ಕಲ್ಪಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೋಚ್‌ ಗೌತಮ್‌ ಗಂಭೀರ್‌ರನ್ನು ಅಪ್ಪಿಕೊಂಡು ಕಿಸ್ ಮಾಡಿದ ವಿರಾಟ್‌ ಕೊಹ್ಲಿ!?


ಆದರೆ ಕೆಲ ಹೂವಿನ ಗಿಡಗಳು ತನ್ನ ಬಲವಾದ ಪರಿಮಳದ ಕಾರಣದಿಂದ ಹಾವುಗಳನ್ನು ಆಕರ್ಷಿಸುತ್ತದೆ. ಅಂತಹ ಗಿಡಗಳಲ್ಲಿ ಮಲ್ಲಿಗೆ ಗಿಡ ಕೂಡ ಒಂದು.


ಮನೆಯ ಹೊರಗೆ ಅಥವಾ ಟೆರೇಸ್‌ನಲ್ಲಿ ವಿವಿಧ ರೀತಿಯ ಸಸ್ಯಗಳನ್ನು ನೆಡಲಾಗುತ್ತದೆ. ಹಚ್ಚಹಸಿರಾದ ಆ ವಾತಾವರಣವನ್ನು ನೋಡಿದಾಗ ಮನಸ್ಸಿನಲ್ಲಿ ಸಕಾರಾತ್ಮಕ ಕಂಪನಗಳನ್ನು ತರುತ್ತದೆ. ಮರ, ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿ ಮಾತ್ರವಲ್ಲದೇ ಆಮ್ಲಜನಕವೂ ಸಿಗುತ್ತದೆ.


ಆದರೆ ಕೆಲ ಗಿಡಗಳನ್ನು ನೆಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಹಾವುಗಳು ನಿಮ್ಮ ಮನೆಗೆ ಪ್ರವೇಶಿಸಬಹುದು. ಹಾವುಗಳನ್ನು ಆಕರ್ಷಿಸುವ ಕೆಲವು ಮರಗಳು ಮತ್ತು ಸಸ್ಯಗಳು ಇವೆ. ಅಂತಹವುಗಳನ್ನು ಅಂಗಳದಲ್ಲಿ ನೆಟ್ಟರೆ ಹಾವುಗಳು ಅಲ್ಲಿಯೇ ಮನೆಯನ್ನು ಮಾಡುತ್ತವೆ.


ಜಾಸ್ಮಿನ್ ಅಥವಾ ಮಲ್ಲಿಗೆ ಎಂದು ಕರೆಯಲ್ಪಡುವ ಸಸ್ಯಗಳ ಬಳಿ ಹಾವುಗಳು ವಾಸಿಸುವ ಹೆಚ್ಚಿನ ಸಾಧ್ಯತೆಯಿದೆ. ಇದರ ಹಿಂದಿನ ಕಾರಣವೆಂದರೆ ಈ ಸಸ್ಯದ ಹೂವುಗಳ ಬಲವಾದ ವಾಸನೆ ಮತ್ತು ಸಸ್ಯವು ತುಂಬಾ ದಟ್ಟವಾಗಿ ಬೆಳೆಯುವುದು. ತುಂಬಾ ದಟ್ಟವಾದ ಮತ್ತು ನೆರಳಿನ ಕಾರಣ, ಹಾವುಗಳು ಸುಲಭವಾಗಿ ಅಡಗಿಕೊಳ್ಳುತ್ತವೆ. ಹೀಗಾಗಿ ಈ ಗಿಡಗಳನ್ನು ಮನೆಯಂಗಳದಲ್ಲಿ ಬೆಳೆಸದಿರುವುದೇ ಉತ್ತಮ.


ಇದನ್ನೂ ಓದಿ: ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆ


ಒಂದು ವೇಳೆ ಬೆಳೆಸಲೇಬೇಕೆಂದರೆ ಅದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ. ಇಲ್ಲವಾದರೆ ಅಪಾಯ ಕಟ್ಟಿಟ್ಟಬುತ್ತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.