Jyeshtha Month 2022: ವೈಶಾಖ ಹುಣ್ಣಿಮೆಯ ಬಳಿಕ ಜೇಷ್ಠ ಮಾಸ ಆರಂಭ, ಭಾಗ್ಯವೃದ್ಧಿ ಹಾಗೂ ಪುಣ್ಯ ಪ್ರಾಪ್ತಿಗೆ ಈ 8 ಕೆಲಸಗಳನ್ನು ಮಾಡಿ
Jyeshtha Month 2022 Date: ಹುಣ್ಣಿಮೆಯ ನಂತರ ಹಿಂದೂ ಪಂಚಾಂಗದ ಪ್ರಕಾರ ಹೊಸ ಮಾಸ ಆರಂಭವಾಗಲಿದೆ. ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಬಳಿಕ ಜೇಷ್ಠ ಮಾಸ ಆರಂಭಗೊಳ್ಳಲಿದೆ. ಈ ಮಾಸದಲ್ಲಿ ಪುಣ್ಯಪ್ರಾಪ್ತಿಗೆ ಹಾಗೂ ಭಾಗ್ಯ ವೃದ್ಧಿಗಾಗಿ ಏನನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Jyeshtha Month:ಹಿಂದೂ ಪಂಚಾಂಗದ ಪ್ರಕಾರ ಮೇ 17ರಂದು ಅಂದರೆ ಮಂಗಳವಾರ ಹೊಸ ಮಾಸ ಆರಂಭವಾಗುತ್ತಿದೆ. ಜೂನ್ 14ರವರೆಗೆ ಈ ಮಾಸ ಇರಲಿದೆ. ಜೇಷ್ಠ ಹುಣ್ಣಿಮೆಯ ಬಳಿಕ ಮತ್ತೆ ಹೊಸ ಮಾಸ ಆರಂಭವಾಗಲಿದೆ. ಜೇಷ್ಠ ಮಾಸದ ಕೃಷ್ಣ ಪಕ್ಷದ ಪ್ರತಿಪದೆಯ ತಿಥಿ ಮೇ 16, 2022 ರಂದು ಬೆಳಗ್ಗೆ 9:43ಕ್ಕೆ ಆರಂಭಗೊಳ್ಳಲಿದ್ದು, ಇದು ಮೇ 17, 2022ರ ಬೆಳಗ್ಗೆ 6:25ರವರೆಗೆ ಇರಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವ ತಿಥಿಯಲ್ಲಿ ಸೂರ್ಯೋದಯ ಸಂಭವಿಸುತ್ತದೆಯೋ ಅದೇ ದಿನ ಆ ತಿಥಿಗೆ ಮಾನ್ಯತೆ ಇರುತ್ತದೆ. ಹೀಗಾಗಿ ಮೇ 17 ರಂದೇ ಜೇಷ್ಠ ಮಾಸದ ಆರಂಭದ ದಿನವಾಗಿರಲಿದೆ.
ಶುಭ ದಿನದಿಂದ ಜೇಷ್ಠ ಮಾಸ ಆರಂಭವಾಗುತ್ತಿದೆ. ಈ ದಿನ ಪ್ರಾತಃಕಾಲದಲ್ಲಿಯೇ ಶಿವಯೋಗ ನಿರ್ಮಾಣಗೊಳ್ಳುತ್ತಿದೆ. ರಾತ್ರಿ 10,38 ರಿಂದ ಸಿದ್ಧಯೋಗ ಆರಂಭವಾಗುತ್ತಿದೆ. ಈ ಯೋಗಗಳ ಕಾರಣ ಭಾಗ್ಯಕ್ಕೆ ಬಲ ಸಿಗಲಿದೆ. ಈ ಮಾಸದಲ್ಲಿ ಕೆಲ ವಿಶೇಷ ಕಾರ್ಯಗಳನ್ನು ಮಾಡುವ ಮೂಲಕ ಸೂರ್ಯನ ವಿಶೇಷ ಕೃಪೆ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.
ಜೇಷ್ಠ ಮಾಸದಲ್ಲಿ ಈ ಕಾರ್ಯಗಳನ್ನು ನೆರವೇರಿಸಿ
>> ಶಾಸ್ತ್ರಗಳಲ್ಲಿ ಜೇಷ್ಠ ಮಾಸದಲ್ಲಿ ಸೂರ್ಯನ ಪೂಜೆಗೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ಸೂರ್ಯದೇವನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ನಿತ್ಯ ಸ್ನಾನದ ಬಳಿಕ ಸೂರ್ಯದೇವನಿಗೆ ಅರ್ಘ್ಯ ಅರ್ಪಿಸಿ ಹಾಗೂ ಸೂರ್ಯ ಮಂತ್ರ ಜಪಿಸಿ.
>> ಜೇಷ್ಠ ಮಾಸದಲ್ಲಿ ಸೂರ್ಯದೇವನ ಆಶೀರ್ವಾದ ಪಡೆಯಲು ಭಾನುವಾರ ಉಪವಾಸ ವೃತ ಕೈಗೊಳ್ಳಿ. ಈ ದಿನ ಉಪ್ಪು ಸೇವನೆಯನ್ನು ತ್ಯಜಿಸಿ. ಇದೇ ಕಾರಣದಿಂದ ಭಾನುವಾರದಂದು ಸಿಹಿ ಪದಾರ್ಥ ಸೇವಿಸಿದ ಬಳಿಕ ಪಾರಾಯಣ ನಡೆಸಿ.
>> ಜೇಷ್ಠ ಮಾಸದಲ್ಲಿ ತಾಪಮಾನ ಅತಿ ಹೆಚ್ಚಾಗಿರುತ್ತದೆ. ಹೀಗಾಗಿ ಈ ಮಾಸದಲ್ಲಿ ಜಲ ಹಾಗೂ ಗಾಳಿ ಬೀಸಣಿಕೆಯ ದಾನಕ್ಕೆ ವಿಶೇಷ ಮಹತ್ವವಿದೆ. ಸಾಧ್ಯವಾದರೆ, ನೀರಿನ ದಾಹ ಅನುಭವಿಸುತ್ತಿರುವವರಿಗೆ ನೀರನ್ನು ಕುಡಿಸಿ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
>> ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಮಾಸದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕಾಳು-ನೀರಿನ ವ್ಯವಸ್ಥೆಯನ್ನು ಮಾಡಿ. ಇದರಿಂದ ಈಶ್ವರನ ಕೃಪಾವೃಷ್ಟಿ ನಿಮ್ಮ ಮೇಲಾಗುತ್ತದೆ.
>> ಈ ಮಾಸದಲ್ಲಿ ದಾರಿಹೋಕರಿಗೆ ಪಾನಕ ಕೊಡುವುದು, ಬಡವರಿಗೆ ಹಣ್ಣು ದಾನ ಮಾಡುವುದು ಶುಭ ಫಲಗಳನ್ನು ನೀಡುತ್ತದೆ.
>> ಈ ಮಾಸದಲ್ಲಿ ಜಲ ಪೂಜೆಗೆ ವಿಶೇಷ ಮಹತ್ವವಿದೆ. ಆದ್ದರಿಂದ, ಈ ಮಾಸದಲ್ಲಿ ಗಂಗಾ ದಸರಾ ಮತ್ತು ನಿರ್ಜಲ ಏಕಾದಶಿ ಎಂಬ ಎರಡು ದೊಡ್ಡ ಉಪವಾಸಗಳನ್ನು ಕೈಗೊಳ್ಳಲಾಗುತ್ತದೆ.
>> ಈ ಮಾಸದಲ್ಲಿಯೇ ರಾಮಭಕ್ತ ಹನುಮ ಶ್ರೀರಾಮನನ್ನು ಭೇಟಿಯಾಗಿದ್ದ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಮಾಸದಲ್ಲಿ ಹನುಮಂತನಿಗೆ ಪೂಜೆ ಸಲ್ಲಿಸುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ.
ಇದನ್ನೂ ಓದಿ-Nail Tips: ನಿಮ್ಮ ಉಗುರಿನ ಅಂದ ಹೆಚ್ಚಾಗಬೇಕಾದರೆ ಈ ಟಿಪ್ಸ್ ಫಾಲೋ ಮಾಡಿ
>> ಜೇಷ್ಠ ಮಾಸದಲ್ಲಿ ಎಳ್ಳಿನ ದಾನಕ್ಕೆ ವಿಶೇಷ ಮಹತ್ವವಿದೆ, ಹೀಗಾಗಿ ಎಳ್ಳು ದಾನ ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ.
ಇದನ್ನೂ ಓದಿ-Zodiac Sign : ಈ ರಾಶಿಯ ಹುಡುಗಿಯರನ್ನ ಸೊಸೆಯನ್ನಾಗಿ ಪಡೆಯಲು ಅದೃಷ್ಟ ಮಾಡಿರಬೇಕಂತೆ!
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ -
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.