Kannada Vastu Tips : ಆಗಾಗ ಮನೆಯಲ್ಲಿ ಹಾಲು ಉಕ್ಕಿ ಚಲ್ಲಿದರೆ ಹಿರಿಯರು ಕೋಪಗೊಳ್ಳುವುದನ್ನು ನೀವು ನೋಡಿರಬೇಕು. ಏಕೆಂದರೆ ಶಾಸ್ತ್ರಗಳಲ್ಲಿ ಹಾಲು ಉಕ್ಕುವುದನ್ನು ಅಶುಭವೆಂದು ಪರಿಗಣಿಸಲಾಗಿದೆ ಮತ್ತು ಹಾಲು ಉಕ್ಕಿದರೆ ಮುಂಬರುವ ಕೆಟ್ಟ ಕಾಲದ ಸಂಕೇತ ಎಂದು ಹೇಳಲಾಗಿದೆ. ಅದಕ್ಕಾಗಿಯೇ ನೀವು ಹಾಲನ್ನು ಬಿಸಿಮಾಡಲು ಒಲೆಯ ಅಥವಾ ಗ್ಯಾಸ್ ಮೇಲೆ ಇರಿಸಿದಾಗ, ಹಾಲು ಉಕ್ಕದಂತೆ ವಿಶೇಷ ಕಾಳಜಿ ವಹಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಾಲು ಉಕ್ಕುವುದು ಅಶುಭ ಮತ್ತು ಅದರ ಹಿಂದೆ ಅನೇಕ ರಹಸ್ಯಗಳು ಅಡಗಿವೆ. ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಹಾಲು ಉಕ್ಕುವುದು ಅಶುಭ


- ಜ್ಯೋತಿಷ್ಯ ಶಾಸ್ತ್ರದಲ್ಲಿ, ಹಾಲನ್ನು ಚಂದ್ರನ ಅಂಶವೆಂದು ಪರಿಗಣಿಸಲಾಗುತ್ತದೆ ಮತ್ತು ಹಾಲು ಉಕ್ಕುವುದರಿಂದ ಚಂದ್ರನ ದೋಷ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ ಚಂದ್ರನನ್ನು ಮನಸ್ಸು ಮತ್ತು ಮಿದುಳಿಗೆ ಹೋಲಿಕೆ ಮಾಡಲಾಗುತ್ತದೆ. ಅದಕ್ಕಾಗಿಯೇ ಎಚ್ಚರಿಕೆ ವಹಿಸಬೇಕು.


ಇದನ್ನೂ ಓದಿ : Chanakya Niti : ತಪ್ಪಾಗಿಯೂ ತುಳಿಯಬೇಡಿ ಈ 5 ವಸ್ತುಗಳನ್ನು, ತಲೆಮಾರುಗಳವರೆಗೆ ತಪ್ಪಿತಸ್ಥರಾಗುತ್ತೀರಿ


- ದಿನನಿತ್ಯ ಹಾಲು ಕುದಿಸುವಾಗ ಉಕ್ಕಿದರೆ ಈ ವಾಸ್ತು ದೋಷ ಮನೆಗೆ ಬರುತ್ತಿದೆ ಎಂದರ್ಥ. ಇದರಿಂದ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೇ ಹಾಲು ಕುಡಿಯುವಾಗ ಕೈಯಿಂದ ಹಾಲು ಚಲ್ಲಿದರೆ ಅಥವಾ ಗ್ಲಾಸ್ ಕೈಯಿಂದ ಬಿದ್ದರೆ ಅದು ಕೂಡ ಅಶುಭ ಲಕ್ಷಣ.


- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಾಲು ಉಕ್ಕುವುದರಿಂದ ಕುಟುಂಬದಲ್ಲಿ ಅಪಶ್ರುತಿಯ ವಾತಾವರಣ ಉಂಟಾಗುತ್ತದೆ ಮತ್ತು ಈ ಕಾರಣದಿಂದಾಗಿ ನಕಾರಾತ್ಮಕತೆಯನ್ನು ಸಹ ಎದುರಿಸಬೇಕಾಗಬಹುದು.


- ಜ್ಯೋತಿಷ್ಯದಲ್ಲಿ ಹಾಲು ಉಕ್ಕುವುದು ಒಂದು ಅಶುಭ ಸಂಕೇತವಾಗಿದೆ ಮತ್ತು ಈ ಕಾರಣದಿಂದಾಗಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಯಾವುದೇ ಕಾರಣವಿಲ್ಲದೆ ಖರ್ಚು ಮಾಡಬೇಕಾಗುತ್ತದೆ.


- ಆದರೆ ಬೆಳಿಗ್ಗೆ ಹಾಲು ಕೊಳ್ಳುವವರು ಅಥವಾ ಯಾರಾದರೂ ಹಾಲು ಖರೀದಿಸುವುದನ್ನು ನೀವು ನೋಡಿದರೆ, ಅದು ಶುಭ ಸಂಕೇತವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಇದರರ್ಥ ಮುಂಬರುವ ದಿನಗಳಲ್ಲಿ ನಿಮಗೆ ಏನಾದರೂ ಒಳ್ಳೆಯದು ಸಂಭವಿಸಲಿದೆ.


ಇದನ್ನೂ ಓದಿ : Ashubh Yog : ಈ ಯೋಗದಲ್ಲಿ ಹುಟ್ಟಿದವರ ಕೈಯಲ್ಲಿ ನಿಲ್ಲುವುದಿಲ್ಲ ಹಣ : ಅದಕ್ಕೆ ಇಲ್ಲಿದೆ ಪರಿಹಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.