Kartik Purnima 2021: ನೀವು ಶ್ರೀಮಂತರಾಗಲು ಬಯಸಿದರೆ ಕಾರ್ತಿಕ ಪೂರ್ಣಿಮೆಯಂದು ಈ ಕೆಲಸ ಮಾಡಿ
ವಿಶೇಷವಾಗಿ ಹಣದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಈ ದಿನವು ಬಹಳ ಮುಖ್ಯವಾಗಿದೆ. ಈ ದಿನದಂದು ನೀವು ಮಾಡುವ ಒಳ್ಳೆಯ ಕಾರ್ಯಗಳು ಭವಿಷ್ಯದಲ್ಲಿ ನಿಮಗೆ ವರದಾನವಾಗಲಿದೆ.
ನವದೆಹಲಿ: ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸ(Kartik Purnima 2021)ಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕಾರ್ತಿಕ ಮಾಸದ ಹುಣ್ಣಿಮೆಯನ್ನು ಭಗವಾನ್ ವಿಷ್ಣು ಮತ್ತು ತುಳಸಿಯ ಆರಾಧನೆಗೆ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ದಿನದಂದು ಮಾಡುವ ಪೂಜೆಯು ಅನೇಕ ಪಟ್ಟು ಹೆಚ್ಚು ಫಲವನ್ನು ನೀಡುತ್ತದೆ. ಅಲ್ಲದೆ ಕಾರ್ತಿಕ ಪೂರ್ಣಿಮೆಯ ದಿನದಂದು ಕೈಗೊಳ್ಳುವ ಕ್ರಮಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ಈ ವರ್ಷ ನವೆಂಬರ್ 19ರ ಶುಕ್ರವಾರ ಕಾರ್ತಿಕ ಪೂರ್ಣಿಮೆ ಇದೆ. ವಿಶೇಷವಾಗಿ ಹಣದ ಸಮಸ್ಯೆ(Kartik Purnima Money Remedies)ಯಿಂದ ಬಳಲುತ್ತಿರುವ ಜನರಿಗೆ ಈ ದಿನವು ಬಹಳ ಮುಖ್ಯವಾಗಿದೆ. ಈ ದಿನದಂದು ನೀವು ಮಾಡುವ ಒಳ್ಳೆಯ ಕಾರ್ಯಗಳು ಭವಿಷ್ಯದಲ್ಲಿ ನಿಮಗೆ ವರದಾನವಾಗಲಿದೆ.
ಧನ ಲಾಭದ ಮಾರ್ಗಗಳು
ಕಾರ್ತಿಕ ಪೂರ್ಣಿಮೆಯಂದು ಉಪವಾಸ ಮಾಡಬೇಕು. ಇದು ಅಗ್ನಿಸ್ತೋಮ ಯಾಗ ಮಾಡುವಷ್ಟೇ ಫಲಿತಾಂಶವನ್ನು ನೀಡುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ನಿಮ್ಮ ಹಣದ ಕೊರತೆಯನ್ನು ನಿವಾರಿಸುತ್ತಾಳೆ.
ಕಾರ್ತಿಕ ಪೂರ್ಣಿಮೆಯ ದಿನದಂದು ತುಳಸಿ ಪೂಜೆ(Tulsi Pooja)ಯನ್ನು ಮಾಡಿ. ಇದರಿಂದ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ.
ಇದನ್ನೂ ಓದಿ: Guru Rashi Parivartan: ಶನಿಯ ರಾಶಿ ಚಿಹ್ನೆಯಲ್ಲಿ ಗುರುವಿನ ಪ್ರವೇಶ, ನಿಮ್ಮ ಮೇಲೆ ಏನು ಪ್ರಭಾವ!
ನಿಮ್ಮ ಮನೆಗೆ ಲಕ್ಷ್ಮಿ ದೇವಿ(Goddess Lakshmi)ಯ ಆಗಮನವಾಗಬೇಕಾದರೆ, ಮನೆಯ ಮುಖ್ಯ ಬಾಗಿಲಿನ ಮೇಲೆ ಮಾವಿನ ಎಲೆಗಳ ಕಂಬವನ್ನು ಇರಿಸಿ. ಹೀಗೆ ಮಾಡಿದರೆ ನಿಮ್ಮ ಹಣದ ಕೊರತೆ ದೂರವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಹುಣ್ಣಿಮೆ ದಿನದಂದು ಬಾನಂಗಳದಲ್ಲಿ ಚಂದ್ರನು ತನ್ನ ಬೆಳಕಿನಿಂದ ಕಂಗೊಳಿಸುತ್ತಾನೆ. ಈ ದಿನ ಚಂದ್ರ ಉದಯಿಸಿದ ತಕ್ಷಣ ಭಗವಾನ್ ಕಾರ್ತಿಕ ಮಾತೆಯರು ಎಂದು ನಂಬಲಾಗಿರುವ ಶಿವ, ಸಂಭೂತಿ, ಪ್ರೀತಿ, ಸಂತತಿ, ಅನಸೂಯಾ ಮತ್ತು ಕ್ಷಮಾ ಎಂಬ 6 ಯತಿಗಳನ್ನು ಪೂಜಿಸಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಧನ(Money Crunch) ಮತ್ತು ಸಂಪತ್ತು ತುಂಬಿ ತುಳುಕುತ್ತದೆ.
ಕಾರ್ತಿಕ ಪೂರ್ಣಿಮೆಯ ದಿನ ದೇವತೆಗಳು ದೀಪವನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನ ದೀಪವನ್ನು ದಾನ ಮಾಡುವುದರಿಂದ
ಮೋಕ್ಷ ಪ್ರಾಪ್ತಿಯಾಗುತ್ತದೆ. ಋಣಭಾರವಿರುವವರು ಕಾರ್ತಿಕ ಪೂರ್ಣಿಮೆ(Kartik Purnima )ಯ ದಿನದಂದು ದೀಪಗಳನ್ನು ದಾನ ಮಾಡಿದರೆ ಶೀಘ್ರವೇ ಋಣಭಾರ ಪರಿಹಾರವಾಗುತ್ತದೆ.
ಇದನ್ನೂ ಓದಿ: ಜಪ ಮಾಡುವಾಗ ಈ ಒಂದು ವಿಷಯ ನೆನಪಿನಲ್ಲಿಡಿ: ದೇವರು ಬಹುಬೇಗನೆ ಪ್ರಸನ್ನನಾಗುತ್ತಾನೆ
ಕಾರ್ತಿಕ ಪೂರ್ಣಿಮೆಯ ದಿನ ದಾನ ಮಾಡುವುದರಿಂದ 10 ಯಾಗಗಳ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವುದು ಉತ್ತಮ.
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.