Karthika Purnima 2022: ಕಾರ್ತಿಕ ಮಾಸವನ್ನು ಎಲ್ಲಾ ಮಾಸಗಳಲ್ಲಿ ಅತ್ಯುತ್ತಮ ಮಾಸ ಎಂದು ಭಾವಿಸಲಾಗಿದೆ. ಈ ಬಾರಿ ನವೆಂಬರ್ 8 ರಂದು ಕಾರ್ತಿಕ ಹುಣ್ಣಿಮೆಯ ವೃತವನ್ನು ಆಚರಿಸಲಾಗುತ್ತಿದೆ. ಈ ದಿನ ಪುಣ್ಯನದಿಯಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಇಡೀ ತಿಂಗಳು ಪೂಜೆ ಮಾಡಿದಷ್ಟೇ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ ಈ ತಿಂಗಳು ಶ್ರೀವಿಷ್ಣುವಿಗೆ ಸಮರ್ಪಿತವಾಗಿದೆ. ಈ ತಿಂಗಳಲ್ಲಿ ಶ್ರೀ ಹರಿಯು ಮತ್ಸ್ಯ ಅವತಾರವನ್ನು ತಲೆದನು ಎಂಬುದು ಧಾರ್ಮಿಕ ನಂಬಿಕೆ, ಈ ದಿನವನ್ನು ಗುರುನಾನಕ್ ಜಯಂತಿ ಎಂದೂ ಆಚರಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಕಾರ್ತಿಕ ಹುಣ್ಣಿಮೆಯ ದಿನದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ತುಂಬಾ ಪ್ರಸನ್ನಳಾಗುತ್ತಾಳೆ ಮತ್ತು ವ್ಯಕ್ತಿಯ ಜೀವನದಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಎಂದಿಗೂ ಕೂಡ ಎದುರಾಗುವುದಿಲ್ಲ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕಾರ್ತಿಕ ಹುಣ್ಣಿಮೆಯಂದು ಈ 5 ಕೆಲಸಗಳನ್ನು ಮಾಡಲು ಮರೆಯಬೇಡಿ
ಪುಣ್ಯ ನದಿಯಲ್ಲಿ ಸ್ನಾನ

ಕಾರ್ತಿಕ ಮಾಸದಲ್ಲಿ ಶ್ರೀವಿಷ್ಣುವು ನೀರಿನಲ್ಲಿ ನೆಲೆಸುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಹೀಗಾಗಿ,  ಕಾರ್ತಿಕ ಹುಣ್ಣಿಮೆಯ ದಿನ ಗಂಗಾ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಜೀವನದ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಎಂದು ಹೇಳಲಾಗುತ್ತದೆ. ಶ್ರೀ ಹರಿ ವಿಷ್ಣುವಿನ ಕೃಪೆಯಿಂದ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ದೇಹ, ದೈವಿಕ ಮತ್ತು ದೈಹಿಕ ಶಾಖವನ್ನು ತೊಳೆದುಹೋಗುತ್ತದೆ.


ಹರಿ-ಹರನ ಪೂಜೆ
ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಸಾಮಾನ್ಯವಾಗಿ ಹುಣ್ಣಿಮೆಯ ತಿಥಿಯನ್ನು ಶ್ರೀ ಹರಿಗೆ ಸಮರ್ಪಿಸಲಾಗಿದೆ ಆದರೆ ಕಾರ್ತಿಕ ಹುಣ್ಣಿಮೆಯಂದು ಬೆಳಗ್ಗೆ ವಿಷ್ಣುವಿನ ಮತ್ಸ್ಯ ರೂಪಕ್ಕೆ ತುಳಸಿ ದಳವನ್ನು ಅರ್ಪಿಸಿ ಮತ್ತು ಸತ್ಯನಾರಾಯಣನ ಕಥೆಯನ್ನು ಕೇಳಿ, ಭೋಲೆನಾಥನ ತ್ರಿಪುರಾರಿ ರೂಪದ ಭೋಲೆನಾಥನಿಗೆ ಪಂಚಾಮ್ರುತದಿಂದ ಅಭಿಷೇಕ ನೆರವೇರಿಸಿ ಪಾಯಸವನ್ನು ಅರ್ಪಿಸಿ. ಲಕ್ಷ್ಮಿ ದೇವಿಗೆ ಮತ್ತು ತುಳಸಿ ತಾಯಿಗೆ ತುಪ್ಪದ ದೀಪ ಉರಿಸಿ ಮಾಡಬೇಕು.


ಆರು ತಪಸ್ವಿನಿಯರಿಗೆ ಕೃತಿಕಾ ಪೂಜೆ
ಕಾರ್ತಿಕ ಹುಣ್ಣಿಮೆಯಂದು ಚಂದ್ರನು ಉದಯಿಸಿದ ನಂತರ ಕಾರ್ತಿಕ ಸ್ವಾಮಿಯ ಆರು ತಾಯಂದಿರಾದ ಪ್ರೀತಿ, ಸಂತತಿ, ಕ್ಷಮಾ, ಅನಸೂಯಾ, ಶಿವ, ಸಂಭೂತಿ, ಈ ಆರು ತಪಸ್ವಿನಿಯರನ್ನು ಪೂಜಿಸಬೇಕು. ಈ ದಿನ ಅವರನ್ನು ಪೂಜಿಸುವುದರಿಂದ ಸಂಪತ್ತು, ಐಶ್ವರ್ಯ, ಶಕ್ತಿ, ತಾಳ್ಮೆ, ಆಹಾರ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-ಉದ್ಯೋಗ - ವ್ಯವಹಾರದಲ್ಲಿ ಪ್ರಗತಿ ಇಲ್ಲವೇ? ಈ ಪರಿಹಾರ ಮಾಡಿ ಆದಾಯ ಹೆಚ್ಚುತ್ತದೆ!


ದೀಪ ದಾನ
ಕಾರ್ತಿಕ ಹುಣ್ಣಿಮೆಯಂದು ಪ್ರದೋಷಕಾಲದಲ್ಲಿ ನದಿ ಅಥವಾ ಕೊಳದಲ್ಲಿ ದೀಪವನ್ನು ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಸಂಜೆ, ಈ ಮುಂದೆ ಸೂಚಿಸಲಾಗಿರುವ  ಮಂತ್ರವನ್ನು ಪಠಿಸಿ, ದೀಪವನ್ನು ಬೆಳಗಿಸಿ ನದಿ-ಕೊಳದಲ್ಲಿ ಅದನ್ನು ಹರಿಬಿಡಿ- 'ಕಿತಾ: ಪತ್ಗಾ, ಮಷ್ಕಶ್ಚ ವೃಕ್ಷ, ದಹನ ಸ್ಥಳೇ ಯೇ ವಿಚಾರಂತಿ ಜೀವಃ, ದೃಷ್ಟ್ವಾ ಪ್ರದೀಪಂ ನಹಿ ಜನ್ಮಭಾಗಿನಾಸ್ತೇ ಮುಕ್ತರೂಪಾ ಹಿ ಭವತಿ ತತ್ರ'. ಈ ವಿಧಾನದಿಂದ ದೀಪವನ್ನು ದಾನ ಮಾಡುವುದರಿಂದ ಅಕಾಲಿಕ ಮರಣದ ಭೀತಿಯಿಂದ ಮುಕ್ತಿ ಸಿಗುತ್ತದೆಮತ್ತು ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ-Palmistry : ಅಂಗೈಯಲ್ಲಿ ಈ ರೇಖೆಯಿದ್ರೆ ಶ್ರೀಮಂತ ಸಂಗಾತಿ ಸಿಗ್ತಾರೆ!


ದಾನ ಮಾಡಿ
ಹುಣ್ಣಿಮೆಯಂದು ಅನ್ನ, ಬೆಚ್ಚನೆಯ ಬಟ್ಟೆ, ಪಾದರಕ್ಷೆ ಮತ್ತು ಚಪ್ಪಲಿಯನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ.ಋಣ ದೂರಾಗುತ್ತದೆ. ಹಣದ ಲಾಭದ ಸಾಧ್ಯತೆಗಳಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.