ಬೆಂಗಳೂರು: ಭಗವಾನ್ ವಿಷ್ಣು ಬ್ರಹ್ಮಾಂಡದ ಅನುಯಾಯಿ ಎಂದು ಹೇಳಲಾಗುತ್ತದೆ.  ಏಕೆಂದರೆ ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ, ಇಡೀ ಜಗತ್ತನ್ನು ವಿಷ್ಣುವಿನ ಶಕ್ತಿಯಿಂದ ನಿಯಂತ್ರಿಸಲಾಗುತ್ತದೆ. ವಿಷ್ಣುವಿನ ಭಕ್ತರು ನಾರಾಯಣ, ಶ್ರೀಹರಿ ಮುಂತಾದ ಅನೇಕ ಹೆಸರುಗಳಿಂದ ಅವರನ್ನು ಆರಾಧಿಸುತ್ತಾರೆ. ಗುರುವಾರ ಭಗವಾನ್ ವಿಷ್ಣುವಿನ ದಿನವೆಂದು ನಂಬಲಾಗಿದೆ ಮತ್ತು ಈ ದಿನ ಯಾರೇ ಆದರು ಭಕ್ತಿಯಿಂದ ವಿಷ್ಣುವನ್ನು ಸಂಪೂರ್ಣ ಧಾರ್ಮಿಕ ವಿಧಿ-ವಿಧಾನದಿಂದ ಪೂಜಿಸಿ, ಉಪವಾಸ ಮಾಡಿದರೆ ಅವರ ಎಲ್ಲಾ ಆಶಯಗಳು ಈಡೇರುತ್ತವೆ ಎಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ಗುರುವಾರ ಉಪವಾಸ ಆಚರಿಸುವವರಿಗೆ ಅಗತ್ಯ ನಿಯಮಗಳು:
ಭಗವಾನ್ ವಿಷ್ಣು (Lord Vishnu) ಸಂತಸಗೊಂಡು ಆತನ ಅನುಗ್ರಹವನ್ನು ಪಡೆಯಬೇಕಾದರೆ, ಗುರುವಾರ ವ್ರತಾಚರಣೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಮತ್ತು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅವಶ್ಯಕ.


1. ನೀವು ಮೊದಲ ಬಾರಿಗೆ ಗುರುವಾರ ವ್ರತವನ್ನು ಆಚರಿಸುತ್ತಿದ್ದರೆ ಅಪ್ಪಿತಪ್ಪಿಯೂ ಅದನ್ನು ಪುಷ್ಯ ಮಾಸದಲ್ಲಿ ಪ್ರಾರಂಭಿಸಬೇಡಿ. ಇದಲ್ಲದೆ, ನೀವು ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಗುರುವಾರದಿಂದ ಉಪವಾಸವನ್ನು (Thursday Fast) ಪ್ರಾರಂಭಿಸಬಹುದು. ಗುರುವಾರ ಪುಷ್ಯ ನಕ್ಷತ್ರ ಇದ್ದರೆ, ಈ ದಿನದಿಂದ ಉಪವಾಸವನ್ನು ಪ್ರಾರಂಭಿಸುವುದು ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಗುರುವಾರದ ಉಪವಾಸವನ್ನು ಸತತ 16 ಗುರುವಾರ ಇಡಬೇಕು.


ಇದನ್ನೂ ಓದಿ-  ವಾಯುವ್ಯ ಪಾಕಿಸ್ತಾನದಲ್ಲಿ ವಿಷ್ಣುವಿನ 1,300 ವರ್ಷಗಳ ಹಳೆಯ ದೇಗುಲ ಪತ್ತೆ


2. ವಿಷ್ಣುವಿನ ಆರಾಧನೆಯ ಜೊತೆಗೆ ಬಾಳೆ ಮರವನ್ನೂ ಗುರುವಾರ ಪೂಜಿಸಲಾಗುತ್ತದೆ. ಬಾಳೆ ಮರದಲ್ಲಿ ಭಗವಾನ್ ವಿಷ್ಣು ವಾಸಿಸುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಗುರುವಾರ ವ್ರತಾಚರಣೆ ಮಾಡುವವರು ಬಾಳೆಹಣ್ಣು (Banana) ತಿನ್ನಬಾರದು ಎಂದು ಹೇಳಲಾಗುತ್ತದೆ.


3. ವಿಷ್ಣು ಹಳದಿ ಬಣ್ಣವನ್ನು ಇಷ್ಟಪಡುತ್ತಾನೆ, ಆದ್ದರಿಂದ ವಿಷ್ಣುವನ್ನು ಪೂಜಿಸುವಾಗ ಹಳದಿ ವಸ್ತ್ರ ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಅಲ್ಲದೆ, ಗುರುವಾರ ವಿಷ್ಣುವನ್ನು ಪೂಜಿಸಿದ ನಂತರ, ಬೆಲ್ಲ, ಹಳದಿ ಬಟ್ಟೆ, ತೊಗರಿ ಬೇಳೆ ಮತ್ತು ಬಾಳೆಹಣ್ಣುಗಳಂತಹ ಹಳದಿ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ (ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ).


4. ಅಕ್ಕಿ ಮತ್ತು ಖಿಚ್ಡಿಯನ್ನು ಗುರುವಾರ ಮತ್ತು ವಿಷ್ಣುವನ್ನು ಪೂಜಿಸುವ ಏಕಾದಶಿ (Ekadashi) ದಿನದಂದು ತಿನ್ನಬಾರದು. ಈ ದಿನ ಅನ್ನ ತಿನ್ನುವುದರಿಂದ ಹಣ ನಷ್ಟವಾಗುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ- ವೈಕುಂಠ ಏಕಾದಶಿ ಆಚರಣೆಯ ಹಿನ್ನಲೆ, ಮಹತ್ವ


ವಿಷ್ಣುವಿನ ಮಂತ್ರಗಳನ್ನು ಪಠಿಸುವುದು:
ಓಂ ನಮೋ ಭಗವತೇ ವಾಸುದೇವ... ಈ ಮಂತ್ರವನ್ನು ವಿಷ್ಣುವಿನ ಮೂಲ ಮಂತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಗುರುವಾರ ವಿಷ್ಣುವನ್ನು ಪೂಜಿಸಿದ ನಂತರ ಈ ಮಂತ್ರವನ್ನು ಜಪಿಸಬೇಕು ಎಂದು ಹೇಳಲಾಗುತ್ತದೆ.


(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.