ಹೇರ್ ಕಂಡಿಷನರ್ ಅಪ್ಲೈ ಮಾಡುವಾಗ ಈ ವಿಷಯಗಳು ನೆನಪಿರಲಿ
Hair Care Tips: ಕೂದಲ ಆರೈಕೆಯಲ್ಲಿ ಹೇರ್ ಕಂಡೀಶನರ್ ಪ್ರಮುಖ ಪಾತ್ರ ವಹಿಸುತ್ತದೆ. ಮೃದುವಾದ, ರೇಷ್ಮೆಯಂತಹ ಕೂದಲನ್ನು ಪಡೆಯಲು ಹೇರ್ ಕಂಡಿಷನರ್ ಬಹಳ ಮುಖ್ಯ. ಆದರೆ, ಹೇರ್ ಕಂಡಿಷನರ್ ಅನ್ವಯಿಸುವಾಗ ಮಾಡುವ ಕೆಲವು ತಪ್ಪುಗಳು ನಿಮ್ಮ ಕೂದಲ ಬೆಳವಣಿಗೆಗೆ ಹಾನಿಯುಂಟು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Hair Care Tips: ಮೃದುವಾದ, ರೇಷ್ಮೆಯಂತಹ ಕೂದಲು ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಪ್ರತಿಯೊಬ್ಬರೂ ಕೂಡ ನಮ್ಮ ಕೇಶ ರಾಶಿಯೂ ಹೀಗೆ ಇರಬೇಕು ಎಂದು ಬಯಸುವುದು ಸಹಜ. ಆದರೆ, ಇದಕ್ಕಾಗಿ ಪ್ರತಿ ಋತುವಿನಲ್ಲಿಯೂ ಕೂದಲಿಗೆ ಆರೈಕೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವಾತಾವರಣೆ ಬದಲಾದಂತೆ ಕೂದಲು ಕೂಡ ಹಾಳಾಗುತ್ತದೆ. ಕೂದಲ ಆರೈಕೆಗಾಗಿ ನಮ್ಮಲ್ಲಿ ಹಲವರು ಹೇರ್ ಕಂಡಿಷನರ್ ಅನ್ನು ಬಳಸುತ್ತಾರೆ. ಕೂದಲ ಆರೈಕೆಯಲ್ಲಿ ಹೇರ್ ಕಂಡೀಶನರ್ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ, ಇದರ ತಪ್ಪಾದ ಬಳಕೆಯು ನಿಮಗೆ ಪ್ರಯೋಜನದ ಬದಲಿಗೆ ಹಾನಿಯುಂಟು ಮಾಡಬಹುದು. ಇದನ್ನು ತಪ್ಪಿಸಲು ಹೇರ್ ಕಂಡಿಷನರ್ ಅಪ್ಲೈ ಮಾಡುವಾಗ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಅಗತ್ಯವಾಗಿದೆ.
ರೇಷ್ಮೆಯಂತಹ ಕೂದಲು ಪಡೆಯಲು ಹೇರ್ ಕಂಡಿಷನರ್ ಅನ್ವಯಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ:-
ಪ್ರಸ್ತುತ ಕೂದಲ ಆರೈಕೆಗಾಗಿ ಶೀಗೆಕಾಯಿ ಬಳಸುವವರ ಸಂಖ್ಯೆ ತೀರಾ ವಿರಳ. ಈ ಫಾಸ್ಟ್ ಲೈಫ್ ನಲ್ಲಿ ಕೂದಲಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡಿ ನಂತರ ಶೀಗೆಕಾಯಿ ಹಾಕಿ ಕೂದಲಿಗೆ ಆರೈಕೆ ಮಾಡುವಷ್ಟು ಸಮಯ ಮತ್ತು ಸಂಯಮ ಜನರಲ್ಲಿ ಕಡಿಮೆ ಆಗಿದೆ. ಹಾಗಾಗಿಯೇ, ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಶಾಂಪೂಗಳ ಬಳಕೆ ಹೆಚ್ಚಾಗಿದೆ. ಆದರೆ, ಕೂದಲಿಗೆ ಶಾಂಪೂ ಮಾಡಿದ ಬಳಿಕ ಕೆಲವರು ಕಂಡಿಷನರ್ ಅನ್ನು ಅನ್ವಯಿಸುವುದಿಲ್ಲ. ವಾಸ್ತವವಾಗಿ, ಹೇರ್ ಕಂಡಿಷನರ್ ಕೂದಲನ್ನು ಸ್ವಚ್ಛಗೊಳಿಸುವ ಮತ್ತು ಪೋಷಿಸುವ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ, ಹೇರ್ ಕಂಡಿಷನರ್ ಅನ್ನು ಸರಿಯಾದ ರೀತಿಯಲ್ಲಿ ಅಪ್ಲೈ ಮಾಡುವುದು ಕೂಡ ಅಗತ್ಯವಾಗಿದೆ. ನೀವು ರೇಷ್ಮೆಯಂತಹ ಕೂದಲು ಪಡೆಯಲು ಹೇರ್ ಕಂಡಿಷನರ್ ಅನ್ವಯಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.
* ಮೊದಲು ಶಾಂಪೂ ಮಾಡಿ:
ಕೆಲವರು ಶಾಂಪೂ ಮಾಡದೇ ನೇರವಾಗಿ ಹಾಗೆಯೇ ಕಂಡಿಷನರ್ ಅನ್ನು ಅನ್ವಯಿಸುತ್ತಾರೆ. ಆದರೆ, ಇದು ನಿಮ್ಮ ಕೂದಲಿಗೆ ಹಾನಿಯುಂಟು ಮಾಡಬಹುದು.
ಇದನ್ನೂ ಓದಿ- Skin Care: ಮೊಡವೆ ಮುಕ್ತ ಕ್ಲಿಯರ್ ಸ್ಕಿನ್ ಪಡೆಯಲು ಕೇಸರಿಯನ್ನು ಈ ರೀತಿ ಬಳಸಿ
* ಕೂದಲಿನ ಬುಡಕ್ಕೆ ಕಂಡಿಷನರ್ ಅನ್ವಯಿಸಬೇಡಿ:
ಕಂಡಿಷನರ್ ಅನ್ನು ಅಪ್ಲೈ ಮಾಡುವಾಗ ಬುಡಕ್ಕೆ ಹಚ್ಚಬಾರದು ಎಂಬುದನ್ನು ನೆನಪಿನಲ್ಲಿಡಿ. ಯಾವಾಗಲೂ ಕಂಡಿಷನರ್ ಅನ್ನು ಕೂದಲಿನ ಮಧ್ಯದಿಂದ ತುದಿಯವರೆಗೆ ಅನ್ವಯಿಸಬೇಕು.
* ಐದು ನಿಮಿಷಗಳ ಒಳಗೆ ಹೇರ್ ವಾಶ್ ಮಾಡಿ:
ಕೂದಲಿಗೆ ಕಂಡಿಷನರ್ ಅನ್ವಯಿಸಿದ ಬಳಿಕ ದೀರ್ಘಕಾಲ ಹಾಗೆಯೇ ಬಿಡುವುದು ಒಳ್ಳೆಯದಲ್ಲ. ಹಾಗಂತ ಕಂಡಿಷನರ್ ಅಪ್ಲೈ ಮಾಡಿ ತಕ್ಷಣ ತೊಳೆದರೂ ಪ್ರಯೋಜನವಾಗುವುದಿಲ್ಲ. ನೀವು ಕೂದಲಿಗೆ ಕಂಡಿಷನರ್ ಅನ್ವಯಿಸಿದ ಬಳಿಕ ಒಂದೆರಡು ನಿಮಿಷಗಳ ನಂತರ ಹೇರ್ ವಾಶ್ ಮಾಡಿ.
* ನಿಮ್ಮ ಕೇಶ ರಾಶಿಗೆ ತಕ್ಕಂತೆ ಕಂಡಿಷನರ್ ಅನ್ನು ಬಳಸಿ:
ಯಾರೇ ಆದರೂ ಕಂಡಿಷನರ್ ಬಳಸುವ ಮೊದಲು ನಿಮ್ಮ ಕೂದಲಿಗೆ ತಕ್ಕಂತೆ ತೆಳ್ಳನೆಯ ಕೂದಲಿಗೆ ಸೌಮ್ಯವಾದ ಕಂಡಿಷನರ್, ಗುಂಗುರು ಕೂದಲಿಗೆ ಸ್ಟ್ರಾಂಗ್ ಕಂಡಿಷನರ್ ಬಳಸುವುದು ಹೆಚ್ಚು ಸೂಕ್ತ.
ಇದನ್ನೂ ಓದಿ- ಕೂದಲಿನ ಈ ಸಮಸ್ಯೆಗಳಿಗೆ ನಿಂಬೆಯೊಂದೇ ಪರಿಹಾರ
* ಈ ತಪ್ಪನ್ನು ಎಂದಿಗೂ ಮಾಡಬೇಡಿ:
ನಮ್ಮಲ್ಲಿ ಕೆಲವರು ಶಾಂಪೂ ಮತ್ತು ಕಂಡಿಷನರ್ ಎರಡನ್ನೂ ಒಟ್ಟಿಗೆ ಬಳಸುತ್ತಾರೆ. ಆದರೆ, ಇದರಿಂದ ಕೂದಲಿಗೆ ಹಾನಿಯುಂಟಾಗಬಹುದು. ಹಾಗಾಗಿ, ಎಂದಿಗೂ ಕೂಡ ಇಂತಹ ತಪ್ಪನ್ನು ಮಾಡಬೇಡಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.