Gangajal At Home: ಹಿಂದೂ ಧರ್ಮದಲ್ಲಿ ಗಂಗಾ ನದಿಯನ್ನು  (Ganga River) ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿ ವಿಶೇಷ ಸಂದರ್ಭದಲ್ಲಿ, ಗಂಗಾ ನದಿಯಲ್ಲಿ ಸ್ನಾನ ಮಾಡುವುದರ ಹೊರತಾಗಿ, ಗಂಗಾಜಲನ್ನು (Gangajal) ಕೋಣೆಯಲ್ಲಿಯೂ ಇಡಲಾಗುತ್ತದೆ. ಹಿಂದೂ ಧರ್ಮದ ಹೆಚ್ಚಿನ ಅನುಯಾಯಿಗಳು ತಮ್ಮ ಮನೆಯಲ್ಲಿ ಗಂಗಾಜಲವನ್ನು ಇಟ್ಟಿರುತ್ತಾರೆ. ಗಂಗೆಯ ನೀರು ಪಾಪಗಳನ್ನು ತೊಳೆದು ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ, ಆದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಅಥವಾ ಗಂಗಾಜಲವನ್ನು ಬೆರೆಸಿದ ನೀರಿನಿಂದ ಸ್ನಾನ ಮಾಡುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪೂಜೆಯ (Gangajal Used In Puja) ಹೊರತಾಗಿ, ಇತರ ಶುಭ ಕಾರ್ಯಗಳಲ್ಲಿಯೂ ಗಂಗಾಜಲವನ್ನು ಬಳಸಲಾಗುತ್ತದೆ. ಮನೆಯಲ್ಲಿ ಗಂಗಾಜಲವನ್ನು ಇಟ್ಟುಕೊಳ್ಳುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ ಅದನ್ನು ಸರಿಯಾಗಿ ಇಟ್ಟುಕೊಂಡರೆ ಮಾತ್ರ ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇಲ್ಲದಿದ್ದರೆ ಅದರಿಂದ ಅಹಿತಕರ ಪರಿಣಾಮ ಉಂಟಾಗಬಹುದು ಎಂದು ಕೂಡ ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ನಿಮ್ಮ ಮನೆಯಲ್ಲಿಯೂ ಗಂಗಾಜಲ ಇದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ!
ಮನೆಯಲ್ಲಿ ಗಂಗಾಜಲವನ್ನು (Gangajal) ಇಡುವುದರಿಂದ ಮನೆಯ ಋಣಾತ್ಮಕತೆ  (Negativity) ನಿವಾರಣೆಯಾಗುತ್ತದೆ ಮತ್ತು ಧನಾತ್ಮಕತೆಯು (Positivity)  ಹರಡುತ್ತದೆ. ಆದರೆ ಗಂಗಾಜಲವನ್ನು ಸಂಗ್ರಹಿಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ಯಾವಾಗಲೂ ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡಿ. 


ಇದನ್ನೂ ಓದಿ- Garuda Purana: ಎಚ್ಚರ! ಈ ಮೂರು ಕೆಟ್ಟ ಅಭ್ಯಾಸಗಳು ನಿಮ್ಮ ಕುಟುಂಬದ ಸುಖ-ಶಾಂತಿಯನ್ನು ಕಸಿದುಕೊಳ್ಳುತ್ತವೆ


ಮನೆಯಲ್ಲಿ ಗಂಗಾಜಲ ಸಂಗ್ರಹಿಸುವಾಗ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:
>> ಗಂಗಾಜಲವನ್ನು ಯಾವಾಗಲೂ ಸ್ವಚ್ಛ ಸ್ಥಳದಲ್ಲಿಡಿ. 
>> ಗಂಗಾಜಲದ ಸುತ್ತ ಯಾವುದೇ ಅಶುದ್ಧ ವಸ್ತುಗಳನ್ನು ಇರಿಸಬೇಡಿ
>> ಪೂಜೆಯ ಮನೆಯಲ್ಲಿ ಗಂಗಾಜಲವನ್ನು  (Gangajal) ಇಟ್ಟುಕೊಳ್ಳುವುದು ಮತ್ತು ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಉತ್ತಮ. 
>> ಗಂಗಾಜಲವು ಅತ್ಯಂತ ಪವಿತ್ರವಾಗಿದೆ ಮತ್ತು ಇದನ್ನು ಶುದ್ಧ ಲೋಹದಿಂದ ಮಾಡಿದ ಪಾತ್ರೆಯಲ್ಲಿ ಇಡಬೇಕು.
>> ತಾಮ್ರ ಅಥವಾ ಬೆಳ್ಳಿ ಪಾತ್ರೆಗಳು ಇದಕ್ಕೆ ಉತ್ತಮ.
>> ಗಂಗಾಜಲವನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಇಟ್ಟುಕೊಳ್ಳುವ ತಪ್ಪನ್ನು ಎಂದಿಗೂ ಮಾಡಬೇಡಿ. 


ಇದನ್ನೂ ಓದಿ- Tulasi Puja: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ನಿವಾರಿಸಲು ತುಳಸಿಯನ್ನು ಈ ರೀತಿ ಪೂಜಿಸಿ


>> ಕೊಳಕು ಕೈಗಳಿಂದ ಗಂಗಾಜಲವನ್ನು ಎಂದಿಗೂ ಮುಟ್ಟಬೇಡಿ. ನಿಮ್ಮ ಕೈಗಳನ್ನು ತೊಳೆದ ನಂತರ ಯಾವಾಗಲೂ ಗಂಗಾಜಲವನ್ನು ಸ್ಪರ್ಶಿಸಿ. 
>> ಗಂಗಾಜಲವನ್ನು ಬಳಸುವಾಗ, ಗಂಗಾ ಮಾತೆಯನ್ನು ಧ್ಯಾನಿಸಿ. ವಿಶೇಷವಾಗಿ ಗಂಗಾಜಲದೊಂದಿಗೆ ಸ್ನಾನ ಮಾಡುವಾಗ ಗಂಗೆಯನ್ನು ತಪ್ಪದೇ ಸ್ಮರಿಸಿ.
>> ಗಂಗಾಜಲವನ್ನು ಈಶಾನ್ಯದಲ್ಲಿ ಇರಿಸಿ. ಪವಿತ್ರ ನದಿಗಳ ನೀರನ್ನು ಯಾವಾಗಲೂ ಈಶಾನ್ಯದಲ್ಲಿ ಇಡಬೇಕು. 
>> ಗಂಗಾಜಲನನ್ನು ಎಂದಿಗೂ ಕತ್ತಲೆಯಲ್ಲಿರಿಸಬೇಡಿ. ರಾತ್ರಿಯಾದರೂ ಅಲ್ಲಿ ಮಂದ ಬೆಳಕನ್ನು ಇರಿಸಿ. 
>> ಗಂಗಾಜಲನನ್ನು ಕಪಾಟಿನಲ್ಲಿ  ಬಂಧಿಸಿಡಬೇಡಿ. 
>>ಸ್ನಾನ ಮಾಡಿದ ಬಳಿಕ  ವಾರಕ್ಕೊಮ್ಮೆ ಮನೆಯಾದ್ಯಂತ ಗಂಗಾಜಲವನ್ನು ಸಿಂಪಡಿಸಿ. ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.


ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ