Vastu Tips 2025:  2024 ನೇ ಸಾಲು ಮುಗಿದಿದೆ, 2025 ನೇ ವರ್ಷಕ್ಕೆ ಕಾಲಿಟ್ಟಾಗಿದೆ. ಹೊಸ ವರ್ಷವೂ ನಮ್ಮ ಜೀವನದಲ್ಲಿ ಬದಲಾವಣೆ ತರಬೇಕು ಎನ್ನುವುದು ಎಲ್ಲರ ಆಶಯವಾಗಿರುತ್ತದೆ. ಹೀಗೆ 2025 ರಲ್ಲಿ ನಿಮಗೆ ಅದೃಷ್ಟ ಹಾಗೂ ಧನಾತ್ಮಕ ಶಕ್ತಿ ವೃದ್ಧಿಯಾಗಬೇಕೆಂದರೆ ನೀವು ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲೇಬೇಕು.


COMMERCIAL BREAK
SCROLL TO CONTINUE READING

ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲಸಬೇಕೆಂದರೆ ವಾಸ್ತು ತುಂಬಾ ಮುಖ್ಯ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವೊಂದು ವಬದಲಾವನೆಗಳನ್ನು ಮಾಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಅಷ್ಟೆ ಅಲ್ಲದೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಹಾಗಾದರೆ ಯಾವ ವಾಸ್ತುಗಳನ್ನು ಇಡುವುದರಿಂದ ನಾವು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು? ತಿಳಿಯಲು ಮುಂದೆ ಓದಿ...


ನವಿಲು ಗರಿ
ನವಿಲು ಗರಿಯನ್ನು ನಮ್ಮ ಹಿಂದೂ ಧರ್ಮದ ಪ್ರಕಾರ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹೊಸ ವರ್ಷದಂದು ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.


ಮನಿ ಪ್ಲಾಂಟ್‌
ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ಮನಿ ಪ್ಲಾಂಟ್‌ ಇಟ್ಟಿರುತ್ತಾರೆ. ಮನೆಯಲ್ಲಿ ಮನಿ ಪ್ಲಾಂಟ್‌ ಇಡುವುದರಿಂದ ಅದೃಷ್ಟ ನಿಮ್ಮ ಮನೆಯ ಬಾಗಿಲು ತಟ್ಟುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ಹೊಸ ವರ್ಷದಂದು ಮನಿ ಪ್ಲಾಂಟ್‌ ಅನ್ನು ಇಡುವುದರಿಂದ ನಿಮ್ಮ ಮನೆಗೆ ಅದೃಷ್ಟ ಹರಿದು ಬರುತ್ತದೆ.


ಬುದ್ಧನ ಪ್ರತಿಮೆ
ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಮನೆಯಲ್ಲಿ ನೆಮ್ಮದಿ ನೆಲಸುತ್ತದೆ. ನಕಾರಾತ್ಮಕ ಶಕ್ತಿ ನಿವಾರನೆ ಆಗುತ್ತದೆ. ಅಷ್ಟೆ ಅಲ್ಲ 2025 ನೇ ಸಾಲು ಶಾಂತಿ ಹಾಗೂ ನೆಮ್ಮದಿಯಿಂದ ಸಾಗುವಂತೆ ಮಾಡುತ್ತದೆ. ಆದ್ದರಿಂದ ಹೊಸ ವರ್ಷದಂದು ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದು ತುಂಬಾ ಮುಖ್ಯ.


ದೇವರ ವಿಗ್ರಹ
ಹೊಸ ವರ್ಷದಂದು ಮನೆಯಲ್ಲಿ ದೇವರ ವಿಗ್ರಗಳನ್ನು ಇಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೊಲಗಿಸಬಹುದು. ಮನೆಯಲ್ಲಿ ನಿಮ್ಮ ನೆಚ್ಚಿನ ದೇವರ ವಿಗ್ರಹವನ್ನು ಇರಿಸುವುದರಿಂದ ಉತ್ತಮ ಶಕ್ತಿ ವೃದ್ಧಿಯಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.