Ketu Gochar Good Effect 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹವು ತನ್ನ ಸ್ಥಾನವನ್ನು ಪರಿವರ್ತಿಸಿದಾಗ, ಅದರ ಪರಿಣಾಮವನ್ನು ವ್ಯಕ್ತಿಯ ಜೀವನದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ ಎನ್ನಲಾಗುತ್ತದೆ. ಗ್ರಹಗಳ ಈ ರಾಶಿಚಕ್ರ ಬದಲಾವಣೆಯು ಕೆಲವು ರಾಶಿಗಳ ಪಾಲಿಗೆ ಪ್ರಯೋಜನಕಾರಿ ಸಾಬೀತಾಗುತ್ತದೆ ಮತ್ತು ಕೆಲ ರಾಶಿಗಳ ಜಾತಕದವರ ಪಾಲಿಗೆ ಹಾನಿಕಾರಕ ಎನ್ನಲಾಗುತ್ತದೆ. ಛಾಯಾ ಗ್ರಹ ಕೇತು ಏಪ್ರಿಲ್ 12 ರಂದು ತುಲಾ ರಾಶಿಯನ್ನು ಪ್ರವೇಶಿಸಿದೆ.ಮತ್ತು 2023 ರವರೆಗೆ ಅದು ತುಲಾ ರಾಶಿಯಲ್ಲಿಯೇ ಮುಂದುವರೆಯಲಿದೆ. ಕೇತುವಿನ ಈ ಸ್ಥಾನ ಪಲ್ಲಟ ಯಾವ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮಕರ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೇತುವಿನ ಈ ಸ್ಥಾನಪಲ್ಲಟ ಮಕರ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಕೇತು ಈ ರಾಶಿಯ ಹತ್ತನೇ ಮನೆಗೆ ಪ್ರವೇಶಿಸಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಹತ್ತನೇ ಮನೆಯನ್ನು ಕೆಲಸ ಮತ್ತು ಕಾರ್ಯಕ್ಷೇತ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ಈ ರಾಶಿಯವರಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಇದೇ ವೇಳೆ ಕೆಲಸ ಮಾಡುವ ಜನರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಇದೆ. ನಿಂತು ಹೋದ ಹಣ ನಿಮ್ಮ ಬಳಿ ಹಿಂದಿರುಗಲಿದೆ. ಈ ಸಮಯದಲ್ಲಿ, ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶಗಳನ್ನು ಸಿಗಲಿವೆ. ಈ ಅವಧಿಯಲ್ಲಿ ವೈಡೂರ್ಯದ ಕಲ್ಲು ಧರಿಸುವುದು ಮಂಗಳಕರ ಫಲಗಳನ್ನು ನೀಡಲಿದೆ.


ಕರ್ಕ ರಾಶಿ- ಈ ರಾಶಿಯ ನಾಲ್ಕನೇ ಮನೆಯಲ್ಲಿ ಕೇತುವಿನ ಪ್ರವೇಶ ನಡೆದಿದೆ. ಜಾತಕದ ನಾಲ್ಕನೇ ಮನೆಯನ್ನು ಸಂತೋಷ, ತಾಯಿ ಮತ್ತು ವಾಹನ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯು ಈ ರಾಶಿಯ ಜನರಿಗೆ ವಿಶೇಷವಾಗಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಅಥವಾ ಪ್ರಮೋಶನ್ ಕೂಡ ಪಡೆಯಬಹುದು. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ನೀವು ಆಸ್ತಿ ಅಥವಾ ವಾಹನವನ್ನು ಖರೀದಿಸಲು ಮುಂದಾಗಬಹುದು. ಕೇತುವಿನ ಈ ರಾಶಿ ಪರಿವರ್ತನೆಯ ಸಮಯದಲ್ಲಿ ನಿಮಗೆ ತಾಯಿಯ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಸ್ಥಾನ ಪರಿವರ್ತನೆಯ ಸಾಧ್ಯತೆಗಳೂ ಗೋಚರಿಸುತ್ತವೆ. ಈ ಸಮಯದಲ್ಲಿ ಮೂನ್ ಸ್ಟೋನ್ ಧರಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ-Zodiac Signs: ಫ್ಲರ್ಟಿಂಗ್‌ ಮಾಡುವುದರಲ್ಲಿ ಚಾಣಾಕ್ಷರು ಈ ರಾಶಿಯವರು!


ಕುಂಭ ರಾಶಿ- ಈ ರಾಶಿಯ ಒಂಬತ್ತನೇ ಮನೆಗೆ ಕೇತು ಪ್ರವೇಶಿಸಿದ್ದಾನೆ. ಇದು ಅದೃಷ್ಟ ಮತ್ತು ವಿದೇಶ ಪ್ರವಾಸದ ಸ್ಥಾನ  ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಅಲ್ಲದೆ, ಈ ಸಮಯದಲ್ಲಿ, ನೀವು ನಿಮ್ಮ ಕೈಯಲ್ಲಿ ಹಿಡಿಯುವ ಯಾವುದೇ ಕೆಲಸವು ನಿಮಗೆ ಯಶಸ್ಸನ್ನು ನೀಡಲಿದೆ. ಈ ಸಮಯದಲ್ಲಿ, ವ್ಯಾಪಾರ ಪ್ರಯಾಣದ ಯೋಗ ನಿರ್ಮಾಣಗೊಳ್ಳುತ್ತಿದ್ದು, ಅದು ಪ್ರಯೋಜನಕಾರಿ ಸಾಬೀತಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಂತು ಹೋದ ನಿಮ್ಮ ಬಡ್ತಿ ನಿಮಗೆ ಸಿಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿಯು ಬದಲಾಗಲಿದೆ. ವೈಡೂರ್ಯದ ರತ್ನವನ್ನು ಧರಿಸುವುದು ನಿಮಗೆ ಲಾಭದಾಯಕವಾಗಿರುತ್ತದೆ.


ಇದನ್ನೂ ಓದಿ-Lemon Remedies: ನಿಂಬೆ ಹಣ್ಣಿನ ಈ ಉಪಾಯಗಳನ್ನು ಅನುಸರಿಸಿದರೆ ಅಪಾರ ಧನವೃದ್ಧಿಯಾಗುತ್ತದೆ, ನಂಬಿಕೆ ಇಲ್ಲ ಅಂದರೆ ಒಮ್ಮೆ ಅನುಸರಿಸಿ ನೋಡಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.