ನವದೆಹಲಿ: 21ನೇ ಶತಮಾನದಲ್ಲೂ ಇದು ಸಾಧ್ಯವೇ? ಎಂದು ಆಶ್ಚರ್ಯಗೊಳಿಸುವ, ಬೆಚ್ಚಿ ಬೀಳಿಸುವ ರಹಸ್ಯ ಇದು. ಇಂಥ ಅದೆಷ್ಟೋ ರಹಸ್ಯಗಳು ಕಲೆ ಮತ್ತು ಸಂಸ್ಕೃತಿಯಲ್ಲಿ ಸಮೃದ್ಧವಾಗಿರುವ ರಾಜಸ್ಥಾನದ (Rajasthan) ಮರಳುಗಾಡಿನಲ್ಲಿ ಮುಚ್ಚಿ ಹೋಗಿವೆ. ಇಲ್ಲಿನ ರಹಸ್ಯಗಳು ವಿಜ್ಞಾನಿಗಳಿಗೂ ಸವಾಲಾಗಿ ಉಳಿದಿವೆ. ಇವುಗಳನ್ನು ತಿಳಿದುಕೊಂಡರೆ ಎಂಥವರು ಒಂದರೆ ಕ್ಷಣ ಬೆವರುತ್ತಾರೆ. 


COMMERCIAL BREAK
SCROLL TO CONTINUE READING

ಇದೇ ರಾಜಸ್ಥಾನದ ಕಿರಾಡು ದೇವಾಲಯ‌. (Kiradu Tempal) ಈ ದೇವಾಲಯವು ಹಲವು ರಹಸ್ಯಗಳಿಂದ ಕೂಡಿದೆ. ಈ ದೇವಾಲಯವು ಶಾಪ ನೀಡುವ ದೇವಾಲಯ ಎಂದೂ ಹೇಳಲಾಗುತ್ತದೆ. ಮುಸ್ಸಂಜೆಯ ನಂತರ ಯಾರಾದರೂ ಈ ದೇವಸ್ಥಾನದ ಒಳಗೆ ಪ್ರವೇಶಿಸಿದರೆ ಅವರು ಶಾಶ್ವತವಾಗಿ ಕಲ್ಲಾಗಿ ಪರಿವರ್ತಿತರಾಗುತ್ತಾರೆ ಎಂದು ಹೇಳಲಾಗುತ್ತದೆ.


ಮನುಷ್ಯ ಕಲ್ಲು ಆಗುತ್ತಾನೆ :
ಇದು ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿದೆ, ಈ ದೇವಾಲಯದ ಹೆಸರು ರಾಜಸ್ಥಾನದ (Rajasthan) ಕಿರಾಡು ದೇವಸ್ಥಾನ. ಈ ದೇವಾಲಯವನ್ನು ನೋಡಲು ಜನರು ದೂರದಿಂದ ಬರುತ್ತಾರೆ. ಆದರೆ ಮುಸ್ಸಂಜೆಯ ಮೊದಲು ಇಲ್ಲಿಂದ ದೂರ ಹೋಗುತ್ತಾರೆ. ಹೀಗೆ ಮಾಡುವುದರ ಹಿಂದೆ ಬಹಳ ಭಯಾನಕ ಕಾರಣವಿದೆ. ಈ ದೇವಾಲಯದ ನಂಬಿಕೆಯೆಂದರೆ, ಸೂರ್ಯ ಮುಳುಗಿದ ನಂತರ ಈ ದೇವಾಲಯದಲ್ಲಿ ಯಾರು ಉಳಿಯುತ್ತಾರೋ ಅವರು ಶಾಶ್ವತವಾಗಿ ಕಲ್ಲು ಆಗುತ್ತಾರೆ. ಈ ಕಾರಣದಿಂದಾಗಿ ಇಲ್ಲಿ ಮುಸ್ಸಂಜೆಯ ನಂತರ ಯಾರೂ ಉಳಿಯುವುದಿಲ್ಲ.


ಇದನ್ನೂ ಓದಿ : ಈ ಗುಹೆಯಲ್ಲಿ ಈಗಲೂ ಇದೆಯಂತೆ ಗಣೇಶನ ತಲೆ!


ಸನ್ಯಾಸಿಯ ಶಾಪ :
ಈ ಭಯಾನಕ ರಹಸ್ಯದ ಹಿಂದೆ ಸನ್ಯಾಸಿಯ ಶಾಪವಿದೆ ಎಂದು ನಂಬಲಾಗಿದೆ. ಇಲ್ಲಿಯ ಜನರು ಈ ದೇವಾಲಯ (Temple) ದಿಂದ ಮುಸ್ಸಂಜೆಯಲ್ಲಿ ಹೋದವರು ಯಾರೂ ಹಿಂದಿರುಗಿಲ್ಲ ಎಂದು ಹೇಳುತ್ತಾರೆ. ಈ ದೇವಾಲಯವು ತುಂಬಾ ಸುಂದರವಾಗಿದೆ ಮತ್ತು ಅವಶೇಷಗಳ ನಡುವೆ ಇದೆ.


ಭಯಾನಕ ರಹಸ್ಯದ ಹೊಂದಿದ್ದರೂ ಈ ದೇವಾಲಯದ ಸೌಂದರ್ಯವು ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಈ ಕಾರಣದಿಂದಾಗಿ ಇಲ್ಲಿ ಹಗಲಿನ ವೇಳೆ ಜನರ ಜಾತ್ರೆಯೇ ಇರುತ್ತದೆ. ಜನರು ಇಲ್ಲಿ ಪಿಕ್ನಿಕ್ ಗಾಗಿ ಬರುತ್ತಾರೆ. ಆದರೆ  ಮುಸ್ಸಂಜೆಯ ಮೊದಲು ದೇವಾಲಯದಿಂದ ಹಿಂತಿರುಗುತ್ತಾರೆ. ಈ ದೇವಾಲಯವನ್ನು ವಿಸ್ಮಯದಿಂದ ನೋಡಿದ ನಂತರ ಅನೇಕ ಜನರು ಹಿಂದಿರುಗುತ್ತಾರೆ. ಈ ದೇವಾಲಯದ ಒಳಗೆ ಹೋಗಲು ಈವರೆಗೆ ಯಾರೂ ಧೈರ್ಯ ಮಾಡಿಲ್ಲ.


ಇದನ್ನೂ ಓದಿ :  Yearly Horoscope 2021: ವರ್ಷ ಭವಿಷ್ಯ 2021


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.